ಬಿಗ್ ಬಾಸ್ ಮನೆ ಎಂಟ್ರಿ ಲೆಟೆಸ್ಟ್ ಲಿಸ್ಟ್, ಹನುಮಂತನ ಜತೆ ಟಿಕ್ ಟಾಕ್ ಶೂರರು!
First Published | Sep 29, 2019, 4:41 PM ISTಬಿಗ್ ಬಾಸ್ ಕನ್ನಡ ಶುರುವಾಗಲಿದ್ದು ಮನೆಗೆ ಯಾರೆಲ್ಲ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲ ಹಿಂದೆಂದಿಗಿಂತ ಹೆಚ್ಚಾಗಿದೆ. ಈ ಬಾರಿ ತಂಡ ಯಾವುದೆ ಸಿಕ್ರೆಟ್ ಬಿಟ್ಟುಕೊಟ್ಟಿಲ್ಲ. ಆದರೆ ಸೋಶಿಯಲ್ ಮೀಡಿಯಾ ಸುಮ್ಮನಿರಬೇಕಲ್ಲ
ಬಿಗ್ ಬಾಸ್ ಕನ್ನಡಕ್ಕೆ ವೇದಿಕೆ ಸಿದ್ಧವಾಗಿದೆ. ಅಕ್ಟೋಬರ್ 2 ನೇ ವಾರದಿಂದ ರಿಯಾಲಿಟಿ ಶೋ ಪ್ರಸಾರ ಆರಂಭವಾಗಲಿದೆ ಎಂದು ಕಿಚ್ಚ ಸುದೀಪ್ ಅವರೇ ಹೇಳಿದ್ದಾರೆ. ಬಿಗ್ ಬಾಸ್ ಪ್ರೋಮೋ ಸಹ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಹಾಗಾದರೆ ಈ ಸಾರಿ ಎಂಟ್ರಿ ಕೊಡುವವರು ಯಾರು? ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಹೆಸರುಗಳ ಪಟ್ಟಿ ನಿಮ್ಮ ಮುಂದೆ ಇಟ್ಟಿದ್ದೇವೆ.