ಮದುವೆಯ ವೇಳೆ ಅಭಿಷೇಕ್‌ ತಲೆಗೆ ಧರಿಸಿದ್ದ ಆಭರಣವನ್ನ ಅಂಬಾನಿ ಕುಟುಂಬಕ್ಕೆ ಮಾರಿದ್ರಾ ಬಚ್ಛನ್‌ ಫ್ಯಾಮಿಲಿ?

Published : May 09, 2026, 03:01 PM IST

ಅಭಿಷೇಕ್ ಬಚ್ಚನ್ ಅವರ ಮದುವೆಯ ಆಭರಣ ಮತ್ತು ಇತ್ತೀಚೆಗೆ ಈಶಾ ಅಂಬಾನಿ ಮೆಟ್ ಗಾಲಾದಲ್ಲಿ ಧರಿಸಿದ್ದ ಆಭರಣದ ನಡುವಿನ ಅಚ್ಚರಿಯ ಹೋಲಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬಚ್ಚನ್ ಕುಟುಂಬವು ತಮ್ಮ ಪಾರಂಪರಿಕ ಆಭರಣವನ್ನು ಅಂಬಾನಿಗಳಿಗೆ ಮಾರಾಟ ಮಾಡಿದೆಯೇ ಎಂದು ಪ್ರಶ್ನಿಸಿದ್ದಾರೆ.

PREV
16
ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆ

ಸೋಶಿಯಲ್ ಮೀಡಿಯಾದಲ್ಲಿ ಈಗ ಒಂದು 'ಅಚ್ಚರಿಯ' ಚರ್ಚೆ ಕಾಳ್ಗಿಚ್ಚಿನಂತೆ ಹಬ್ಬಿದೆ. ವಿಷಯ ಸಿಂಪಲ್ - ಆಭರಣ! ಆದರೆ ಆ ಆಭರಣ ಧರಿಸಿದ ವ್ಯಕ್ತಿಗಳು ಮತ್ತು ಸಂದರ್ಭಗಳು ಮಾತ್ರ ಸಿಕ್ಕಾಪಟ್ಟೆ ಹೈ ಪ್ರೊಫೈಲ್. 2007ರಲ್ಲಿ ಐಶ್ವರ್ಯಾ ರೈ ಕೈ ಹಿಡಿಯುವಾಗ ಅಭಿಷೇಕ್ ಬಚ್ಚನ್ ತಲೆಗೆ ಧರಿಸಿದ್ದ ಆಭರಣ ಮತ್ತು ಇತ್ತೀಚೆಗೆ ಮೆಟ್ ಗಾಲಾದಲ್ಲಿ ಈಶಾ ಅಂಬಾನಿ ತಮ್ಮ ಬ್ಲೌಸ್‌ನ ಹಿಂಭಾಗಕ್ಕೆ ಅಲಂಕಾರವಾಗಿ ಬಳಸಿದ ಪಚ್ಚೆ ಕಲ್ಲಿನ ಆಭರಣ ಅಚ್ಚರಿ ಮೂಡಿಸುವಷ್ಟು ಹೋಲುತ್ತಿವೆ!

26
ಪತ್ತೆದಾರಿ ಕೆಲಸ ಆರಂಭಿಸಿದ ಫ್ಯಾನ್ಸ್‌

ಇದನ್ನು ಕಂಡ ನೆಟ್ಟಿಗರು, ಅದರಲ್ಲೂ ಎಂಟರ್‌ಟೇನ್‌ಮೆಂಟ್ ಸುದ್ದಿಗಳ ಬೆನ್ನುಬೀಳುವ Gen Z ಮಂದಿ ಸುಮ್ಮನೆ ಇರುತ್ತಾರಾ? 'ರೆಡ್ಡಿಟ್'ನಂತಹ ವೇದಿಕೆಗಳಲ್ಲಿ ಈಗ ದೊಡ್ಡ ಮಟ್ಟದ ಪತ್ತೇದಾರಿ ಕೆಲಸವೇ ನಡೆಯುತ್ತಿದೆ. ಈ ಎರಡು ಆಭರಣಗಳ ಫೋಟೋಗಳನ್ನು ಪಕ್ಕಕ್ಕಿಟ್ಟು ನೋಡುತ್ತಿರುವ ಅಭಿಮಾನಿಗಳು ಹತ್ತಾರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.

36
ಬಚ್ಚನ್ ಫ್ಯಾಮಿಲಿ ಮಾರಾಟ ಮಾಡಿದ್ರಾ?

"ಬಚ್ಚನ್ ಕುಟುಂಬ ತಮ್ಮ ಈ ಐತಿಹಾಸಿಕ ಆಭರಣವನ್ನು ಅಂಬಾನಿ ಕುಟುಂಬಕ್ಕೆ ಮಾರಿಬಿಟ್ಟಿರಬೇಕು" ಎಂಬುದು ಕೆಲವರ ನೇರ ಮಾತು.

46
ಕ್ವಾಲಿಟಿ ಚೆಕ್ ಮ್ಯಾಟರ್ಸ್

ಇನ್ನು ಕೆಲವು ಸೂಕ್ಷ್ಮ ಕಣ್ಣಿನ ಫ್ಯಾಷನ್ ಪ್ರಿಯರು, "ಅಭಿಷೇಕ್ ಧರಿಸಿದ್ದ ಆಭರಣದ ಪಚ್ಚೆ ಕಲ್ಲುಗಳ ಬಣ್ಣಕ್ಕೂ, ಈಶಾ ಧರಿಸಿರುವ ಆಭರಣದ ಹೊಳಪಿಗೂ ವ್ಯತ್ಯಾಸವಿದೆ. ಈಶಾ ಧರಿಸಿದ್ದು ಉನ್ನತ ಗುಣಮಟ್ಟದ ಒರಿಜಿನಲ್ ಪೀಸ್, ಅಭಿಷೇಕ್ ಧರಿಸಿದ್ದು ಕೇವಲ ಡಿಸೈನರ್ ಸೃಷ್ಟಿಸಿದ ರಿ-ಕ್ರಿಯೇಷನ್ ಇರಬಹುದು" ಎಂದು ವಾದಿಸುತ್ತಿದ್ದಾರೆ.

56
ಇದು ಶ್ರೀಮಂತರ ಆಟ

"ಇದು ಶ್ರೀಮಂತರ ಆಟ! ಐತಿಹಾಸಿಕ ಆಭರಣಗಳನ್ನು ಒಮ್ಮೆ ಮದುವೆಯಲ್ಲಿ ತಲೆ ಮೇಲೆ ಧರಿಸುತ್ತಾರೆ, ಇನ್ನೊಮ್ಮೆ ಬ್ಲೌಸ್ ಮೇಲೆ ಸ್ಟೈಲ್ ಮಾಡುತ್ತಾರೆ" ಎಂದು ಕೆಲವರು ತಮಾಷೆ ಮಾಡುತ್ತಿದ್ದಾರೆ.

66
ಐತಿಹಾಸಿಕವೇ ಅಥವಾ ಡಿಸೈನರ್ ಕಮಾಲೋ?

ಬಚ್ಚನ್ ಕುಟುಂಬದ ಆಭರಣಗಳು ಪಾರಂಪರಿಕವಾಗಿ ಬಂದವುಗಳೆಂದು ನಂಬಲಾಗಿದೆ. ಆದರೆ ಈಶಾ ಅಂಬಾನಿ ಮೆಟ್ ಗಾಲಾದಲ್ಲಿ ಧರಿಸಿದ ಆಭರಣವನ್ನು 'ಜೇಡ್ ಬೈ ಮೋನಿಕಾ ಮತ್ತು ಕರಿಷ್ಮಾ' ವಿನ್ಯಾಸಗೊಳಿಸಿದ್ದರು. ಇದು ಅಂಬಾನಿ ಕುಟುಂಬದ ಪಾರಂಪರಿಕ ಆಭರಣಗಳನ್ನು ಆಧುನಿಕ ರೂಪಕ್ಕೆ ಬದಲಿಸಿದ ಕಲೆಯೋ ಅಥವಾ ಕಾಕತಾಳೀಯವೋ ಎಂಬುದು ಇನ್ನೂ ರಹಸ್ಯ. ಒಟ್ಟಿನಲ್ಲಿ, ಈ 'ಪಚ್ಚೆ' ಹಸಿರಿನ ಆಭರಣದ ರಹಸ್ಯ ಮಾತ್ರ ಬಾಲಿವುಡ್ ಮಂದಿಗೆ ಹೊಸ ಚರ್ಚಾ ವಿಷಯವನ್ನಂತೂ ಒದಗಿಸಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories