ನಾಡಹಬ್ಬ: ಮೈಸೂರು ಸಿಲ್ಕ್ ಸೀರೆಯಲ್ಲಿ ಕಂಗೊಳಿಸಿದ ರಾಷ್ಟ್ರಪತಿ ಮರ್ಮು... ಫೋಟೋಸ್

First Published | Sep 26, 2022, 1:30 PM IST

ನಾಡಹಬ್ಬ ಮೈಸೂರು ದಸರಾಗೆ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ವಿದ್ಯುಕ್ತವಾಗಿ ಚಾಲನೆ ನೀಡಿದರು. 

ನಾಡಹಬ್ಬ ಮೈಸೂರು ದಸರಾಕ್ಕೆ ವಿದ್ಯುಕ್ತವಾಗಿ ಇಂದು ಚಾಲನೆ ಸಿಕ್ಕಿದೆ. ಬೆಳ್ಳಿರಥದಲ್ಲಿ ಮಹಿಷಾಸುರ ಮರ್ದಿನಿ ಅವತಾರದ ಪಂಚಲೋಹದ ವಿಗ್ರಹಕ್ಕೆ ರಾಷ್ಟ್ರಪತಿಗಳು ಪುಷ್ಪಾರ್ಚನೆ ಮಾಡುವ ಮೂಲಕ 412ನೇ ದಸರಾಕ್ಕೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಿತು. 

ಶುಭ ವೃಶ್ಚಿಕ ಲಗ್ನದಲ್ಲಿ ರಾಷ್ಟ್ರಪತಿಗಳು ತಾಯಿ ಚಾಮುಂಡಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯಪಾಲರು ಸೇರಿ ಗಣ್ಯರು ಭಾಗವಹಿಸಿದ್ದರು.

Latest Videos


ಮಹಿಶಾಸುರ ಸೇರಿದಂತೆ ಹಲವು ರಾಕ್ಷಸರನ್ನು ದೇವಿ ಸಂಹಾರ ಮಾಡಿ ಜನರನ್ನು ರಕ್ಷಿಸಿದ್ದಾಳೆ. ದೇವಿ ಶಕ್ತಿ ಸ್ವರೂಪಳು, ಗಣೇಶನ ಹಬ್ಬದ ಸಂದರ್ಭದಲ್ಲಿ ನಾನು ಕರ್ನಾಟಕಕ್ಕೆ ಬಂದಿದ್ದೆ. ಈಗ ದಸರಾ ಉದ್ಘಾಟನೆಯ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ರಾಷ್ಟ್ರಪತಿಗಳು ನುಡಿದರು

ಇದೇ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಅವರನ್ನು ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತಿಸಿದರು.

ಈ ವೇಳೆ ದ್ರೌಪದಿ ಮರ್ಮು ಅವರು ಮೈಸೂರು ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ಈ ಸೀರೆಯನ್ನು ಮರ್ಮು ಅವರಿಗೆ ದೆಹಲಿಯಲ್ಲಿ ಅವರನ್ನು ಮೈಸೂರು ದಸರಾಗೆ  ಆಹ್ವಾನಿಸುವ ವೇಳೆ ಮೈಸೂರು ದಸರಾ ಸಮಿತಿಯವರು ನೀಡಿದ್ದರು.

ರಾಷ್ಟ್ರಪತಿಗೂ ಮುನ್ನ ಭಾಷಣ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕನ್ನಡ ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದರು. 10 ದಿನಗಳ ಈ ಕಾರ್ಯಕ್ರಮ ನಾಡ ಹಬ್ಬದಂದು, ನಾಡಿನ  ಮನೆ ಮನೆಗಳಲ್ಲಿ ದಸರಾ ಆಚರಣೆ  ನಡೆಯುತ್ತದೆ. ನಾಡು ಸುಭಿಕ್ಷೆಯಿಂದ ಇರುವಂತೆ ಪ್ರಾರ್ಥನೆ ಮಾಡುತ್ತೇನೆ ಎಂದು ಸಿಎಂ ಹೇಳಿದರು. 

ನಂತರ ರಾಷ್ಟ್ರಪತಿ  ದ್ರೌಪದಿ ಅವರು ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.  ದಸರಾ ಸಮಿತಿ ನೀಡಿದ ಮೈಸೂರು ಸಿಲ್ಕ್ ಸಾರಿಯಲ್ಲಿ ಅವರು ಕಂಗೊಳಿಸುತ್ತಿದ್ದರು.

ರಾಷ್ಟ್ರಪತಿ ಅವರ ಸ್ವಾಗತದ ವೇಳೆ  ಸಿಎಂ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್,  ಸಂಸದ ಪ್ರತಾಪ್ ಸಿಂಹ, ಜಿ.ಟಿ ದೇವೇಗೌಡ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಉಪಸ್ಥಿತರಿದ್ದರು. 

ಕನ್ನಡದಲ್ಲಿ ಮಾತು ಆರಂಭಿಸಿದ ದ್ರೌಪದಿ ಅವರು ನಾಡಿನ ಜನತೆಗೆ ದಸರಾದ ಶುಭಾಶಯ ಕೋರಿದರು. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಆರೋಗ್ಯ ನೀಡಲಿ ಎಲ್ಲರನ್ನು ಆಶೀರ್ವದಿಸಲಿ ಎಂದು ಕೋರಿದರು. 

ಭಕ್ತಿ, ಸ್ವಾತಂತ್ರ್ಯಕ್ಕೆ ಕರ್ನಾಟಕ ಹೆಸರುವಾಸಿಯಾಗಿದೆ. ದಸರಾಗೆ ಉದ್ಘಾಟನೆ ನನ್ನನ್ನು ಕರೆದಿದ್ದು, ತಂದಿದ್ದು ನನಗೆ ಸಂತಸ ತಂದಿದೆ ಎಂದೂ ದ್ರೌಪದಿ ಮುರ್ಮು ಹೇಳಿದರು.

click me!