ಮೈಸೂರು ಸಿಲ್ಕ್ ಸೀರೆ ಕೊಳ್ಳಲು ಬೆಳಗ್ಗೆ 5 ಗಂಟೆಯಿಂದ ಕ್ಯೂ ಏಕೆ? ಭಾರಿ ಬೇಡಿಕೆ ಹಿಂದಿನ ಕಾರಣ, ಮುಂಜಾನೆ 5 ಗಂಟೆಯಿಂದ ಮಹಿಳೆಯರ ಕ್ಯೂ ನಿಲ್ಲುತ್ತಿದ್ದಾರೆ. ಗ್ರಾಹಕರು ಸೀರೆಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಯಾಕೆ? ಅಷ್ಟೊಂದು ಬೇಡಿಕೆ ಸೃಷ್ಟಿಯಾಗಿದ್ದು ಹೇಗೆ?
ಕಳೆದ ಕೆಲ ದಿನಗಳಿಂದ ಮೈಸೂರು ರೇಷ್ಣೆ ಸೇರಿ ಭಾರಿ ಸದ್ದು ಮಾಡುತ್ತಿದೆ. ರಾಜ್ಯ ಹಾಗೂ ರಾಷ್ಟ್ರೀಯ ಮಾಧ್ಯಮಗಳಲ್ಲಿ ಮೈಸೂರು ಸಿಲ್ಕ್ ಸೀರೆಗಾಗಿ ಮಹಿಳೆಯರ ಕ್ಯೂ ಭಾರಿ ಸದ್ದು ಮಾಡುತ್ತಿದೆ. ಲಕ್ಷ ಲಕ್ಷ ರೂಪಾಯಿ ಹಣ ಕೊಡಲು ಗ್ರಾಹಕರು ತಯಾರಿದ್ದಾರೆ. ಆದರೆ ಸೀರೆ ಸಿಗುತ್ತಿಲ್ಲ. ಮುಂಜಾನೆಯಿಂದ ಸಂಜೆ ವರೆಗೂ ಕ್ಯೂ ನಿಂತು ಸೀರೆ ಖರೀದಿಸುವ ಸಾಹಸವನ್ನು ಗ್ರಾಹಕರು ಮಾಡುತ್ತಿದ್ದಾರೆ.
26
18,500 ರೂಪಾಯಿಯಿಂದ 4 ಲಕ್ಷದ ಸೀರೆ ಮಾರಾಟ
ಮೈಸೂರು ಸಿಲ್ಕ್ ಸೀರೆಗೆ ದೇಶಾದ್ಯಂತ ಭಾರಿ ಬೇಡಿಕೆ ಇದೆ. 18,500 ರೂಪಾಯಿಂದ 4 ಲಕ್ಷ ರೂಪಾಯಿವರೆಗೆ ಇಲ್ಲಿ ಸೀರೆಗಳು ಲಭ್ಯ. ಭಾರಿ ಬೇಡಿಕೆ, ಅತ್ಯುತ್ತಮ ಗುಣಮಟ್ಟ ಎಲ್ಲವೂ ಇದ್ದರೂ ಈ ಪಾಟಿ ಬೇಡಿಕೆ, ಜನರ ಕ್ಯೂ, ಸೀರೆ ಖರೀದಿಸಲು ಜನ ಪರದಾಡುತ್ತಿರುವುದೇಕೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ
36
ಸರ್ಕಾರದ ನಿರ್ಲಕ್ಷ್ಯದಿಂದ ಮೈಸೂರು ಸಿಲ್ಕ್ ಅಧೋಗತಿ
ಾಗತಿಕ ಮನ್ನಣೆ ಹೊಂದಿದ ಮೈಸೂರು ಸಿಲ್ಕ್ ಉದ್ಯಮವನ್ನು ಗ್ರಾಹಕ ಸ್ನೇಹಿಯಾಗಿ ನಡೆಸಲು ಸರ್ಕಾರ ವಿಫಲವಾಗಿದೆ. ಮೈಸೂರು ಸೀರೆ ಉತ್ಪಾದಿಸುವ ಕೆ.ಎಸ್.ಐ.ಸಿ ಸಂಸ್ಥೆ ಮೈಸೂರು, ಟಿ.ನರಸೀಪುರ ಹಾಗೂ ಚನ್ನಪಟ್ಟಣದಲ್ಲಿ ಕಾರ್ಖಾನೆ ಹೊಂದಿದೆ. ಆದರೆ ಕಾರ್ಮಿಕರು, ಸಿಬ್ಬಂದಿಗಳು, ಮ್ಯಾನೇಜರ್ ಇಲ್ಲದೆ ಉತ್ಪಾದನೆ ಕುಂಠಿಟವಾಗಿದೆ.
ಮೈಸೂರು ಸಿಲ್ಕ್ ಸೀರೆಗೆ ಕರ್ನಾಟಕದಿಂದಲೇ ಪ್ರತಿ ದಿನ 500ಕ್ಕೂ ಹೆಚ್ಚು ಸೀರೆಗಳ ಬೇಡಿಕೆ ಇದೆ. ಇನ್ನು ದೇಶದ ಇತರ ರಾಜ್ಯಗಳ ಬೇಡಿಕೆ ಲೆಕ್ಕ ಹಾಕಿದರೆ ಪ್ರತಿ ದಿನ ಕನಿಷ್ಠ 1000 ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಡಬೇಕು. ಆದರೆ ಮೂರು ಕಾರ್ಖಾನೆಗಳಿಂದ ಉತ್ಪಾದನೆಯಾಗುತ್ತಿರುವುದು ಕೇವಲ 400 ಸೀರೆ ಮಾತ್ರ. ಕಾರ್ಖಾನೆ, ಉತ್ಪಾದನೆ ಘಟನೆ ಎಲ್ಲಾ ಸೌಲಭ್ಯ ಇದ್ದರೂ ಉತ್ಪಾದನೆ ಮಾಡಲು ಕಾರ್ಮಿಕರು, ಸಿಬ್ಬಂದಿಗಳ ಕೊರತೆ ಎದುರಾಗಿದೆ.
56
8 ವರ್ಷದಿಂದ ಸಿಬ್ಬಂದಿ ನೇಮಕ ಇಲ್ಲ
ಕಳೆದ 8 ವರ್ಷದಿಂದ ಕೆ.ಎಸ್.ಐ.ಸಿ ಸಂಸ್ಥೆಗೆ ಸಿಬ್ಬಂದಿ ನೇಮಕ ಮಾಡಿಲ್ಲ. ಸರ್ಕಾರದ ಅಧೀನ ಸಂಸ್ಥೆಯಾಗಿರುವ ಕೆ.ಎಸ್.ಐ.ಸಿ ಸಿಬ್ಬಂದ ಇಲ್ಲದೆ ಪರದಾಡುತ್ತಿದೆ. ಮೂರು ಕಾರ್ಖಾನೆಗಳಿಂದ ಒಟ್ಟು 970 ಸಿಬ್ಬಂದಿಗೆ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿಗಳು ಮಾತ್ರವಲ್ಲ ಸಂಸ್ಥೆಯ 6 ಜನರಲ್ ಮ್ಯಾನೇಜರ್ ಹುದ್ದೆಗಳು ಖಾಲಿ ಇವೆ. ಅಧಿಕಾರಿ, ಸಿಬ್ಬಂದಿ ನೇಮಕಕ್ಕೆ ಸರ್ಕಾರ ನಿರಾಸಕ್ತಿ ತೋರುತ್ತಿದೆ ಎಂಬ ಆರೋಪ ಕೇಳಿಬಂದಿದೆ.
66
ಕಳ್ಳಾಟದಿಂದ 40 ಸೀರೆ ಮಾತ್ರ ಮಾರಾಟಕ್ಕೆ ಲಭ್ಯ
ಪ್ರತಿ ದಿನ 400 ಸೀರೆ ಉತ್ಪಾದನೆಯಾಗುತ್ತಿದೆ. ಸಂಸ್ಥೆ ಮೈಸೂರು, ಬೆಂಗಳೂರು, ಚನ್ನಪಟ್ಟಣ ಹಾಗೂ ಹೈದರಾಬಾದ್ ನಲ್ಲಿ ಅಂಗಡಿ ಮಳಿಗೆ ಹೊಂದಿದೆ. ಆದರೆ 400 ಸೀರೆಗಳಲ್ಲಿ 40 ಸೀರೆ ಮಾತ್ರ ಪ್ರತಿ ದಿನ ಅಂಗಡಿ ಮಳಿಗೆ ತಲುಪಿದೆ. ವಿಐಪಿ ಹೆಸರಿನಲ್ಲಿ ಸೀರೆಗಳನ್ನು ಕಚೇರಿ ಕೆಲಸಗಾರರು ಬ್ಲಾಕ್ ನಲ್ಲಿ ಮಾರಾಟ ಮಾಡುತ್ತಿದ್ದಾರೆ. ಅದೇ ಸೀರೆಗಳನ್ನು ಹೊರಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ.ನಮ್ಮೂರಿನ ಸೀರೆಗಳನ್ನು ಕೊಳ್ಳುವಾಗ ನಮಗೆ ಮನ್ನಣೆ ಕೊಡಿ ಎಂದು ಸ್ಥಳೀಯರ ಮನವಿ ಮಾಡಿದ್ದಾರೆ.