ಮೈಸೂರಿನ ಪುಟ್ಟ ರಾಜಕುಮಾರನ ಹುಟ್ಟುಹಬ್ಬ: ವಿಶೇಷ ಫೋಟೊಗಳನ್ನು ಶೇರ್ ಮಾಡಿದ ಮಹಾರಾಣಿ

Published : Dec 06, 2025, 02:22 PM IST

ಮೈಸೂರು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾದೇವಿ ಒಡೆಯರ್ ದಂಪತಿಗಳ ಮೊದಲ ಪುತ್ರ ಮೈಸೂರಿನ ಪುಟ್ಟ ರಾಜಕುಮಾರ ಆದ್ಯವೀರ್ ಒಡೆಯರ್ ಇಂದು ಎಂಟನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತೀದ್ದಾರೆ.

PREV
17
ಆದ್ಯವೀರ್‌ ನರಸಿಂಹರಾಜ ಒಡೆಯರ್‌ ಹುಟ್ಟುಹಬ್ಬ

ಮೈಸೂರು ರಾಜವಂಶಸ್ಥರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ತ್ರಿಷಿಕಾದೇವಿ ಒಡೆಯರ್‌ ದಂಪತಿಯ ಪ್ರಥಮ ಪುತ್ರ ಆದ್ಯವೀರ್‌ ನರಸಿಂಹರಾಜ ಒಡೆಯರ್‌ ಇಂದು ತಮ್ಮ ಎಂಟನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

27
ಶುಭಕೋರಿದ ತಾಯಿ ತ್ರಿಷಿಕಾದೇವಿ

ಆದ್ಯವೀರ್ ಹುಟ್ಟುಹಬ್ಬಕ್ಕೆ ಅಮ್ಮ, ಮೈಸೂರು ಮಹಾರಾಣಿ ತ್ರಿಷಿಕಾ ದೇವಿ ಸೋಶಿಯಲ್ ಮೀಡಿಯಾದಲ್ಲಿ ಆದ್ಯವೀರ್ ಮುದ್ದಾದ ಫೋಟೊಗಳನ್ನು ಶೇರ್ ಮಾಡಿ ಶುಭ ಕೋರಿದ್ದಾರೆ.

37
ನನ್ನ ಹೃದಯ ಮಿಡಿತ

ಎಂಟನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು ನನ್ನ ಪುಟ್ಟ ಹಾರ್ಟ್ ಬೀಟ್, ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ನಿಮಗೆ ಉತ್ತಮ ಜ್ಞಾನ, ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ಯಾವಾಗಲೂ ದಯಪಾಲಿಸಲಿ ಎಂದು ತ್ರಿಷಿಕಾ ದೇವಿ ಮಗನಿಗೆ ಹಾರೈಸಿದ್ದಾರೆ.

47
ಮುದ್ದಾದ ಫೋಟೊಗಳು

ತ್ರಿಷಿಕಾ ದೇವಿ ಮಗನಿಗೆ ವಿಶ್ ಮಾಡುವುದರ ಜೊತೆಗೆ, ಹಲವಾರು ಮುದ್ದಾದ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಬಾಲ್ಯದ ಫೋಟೊಗಳಿಂದ ಹಿಡಿದು, ತಮ್ಮನ ಜೊತೆಗಿನ, ತಂದೆ ಹಾಗೂ ಅಜ್ಜಿಯ ಜೊತೆಗಿನ ಫೋಟೊಗಳನ್ನು ಸಹ ಹಂಚಿಕೊಂಡಿದ್ದಾರೆ.

57
ಆದ್ಯವೀರ್ ಜನನ

ಆದ್ಯವೀರ್ ಒಡೆಯರ್ 2017ರ ಡಿಸೆಂಬರ್ 6ರಂದು ಜನಿಸಿದರು. ಅರಮನೆಯಲ್ಲಿ ಸುಮಾರು 65 ವರ್ಷಗಳ ಬಳಿಕ ಹುಟ್ಟಿದ ಮಗು ಆದ್ಯವೀರ್. ಶ್ರೀಕಂಠದತ್ತ ಚಾಮರಾಜ ಒಡೆಯರ್ 1953ರಲ್ಲಿ ಜನಿಸಿದ್ದರು. ನಂತರ ಯಾವ ಮಗುವು ಹುಟ್ಟಿರಲಿಲ್ಲ.

67
65 ವರ್ಷಗಳ ಬಳಿಕ ಅರಮನೆಯಲ್ಲಿ ಮಗು ಜನನ

ಅರಮನೆಗೆ ಶಾಪ ಇದೆ ಎನ್ನುವ ವದಂತಿ ಕೂಡ ಇತ್ತು. ಬಳಿಕ ಮಹಾರಾಣಿ ಪ್ರಮೋದಾ ದೇವಿ ಯದುವೀರ್ ಒಡೆಯರ್ ಅವರನ್ನು ದತ್ತು ಸ್ವೀಕರಿಸಿದರು. ಇದಾದ ಬಳಿಕ ಯದುವೀರ್ ಹಾಗೂ ತೃಷಿಕಾ ದೇವಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು, 2017ರಲ್ಲಿ ಆದ್ಯವೀರ್ ಜನಿಸಿದ್ದಾರೆ.

77
ಮೊದಲ ಹುಟ್ಟುಹಬ್ಬ

ಆದ್ಯವೀರ್ ಮೊದಲ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಮಾಡಿದ್ದರು. ಚಾಮುಂಡೇಶ್ವರಿ ಸೇರಿ, ಅರಮನೆಯ ದೇವರಿಗೆ ಪೂಜೆಗಳನ್ನು ಮಾಡಿದ್ದರು. ಇದೀಗ ಆದ್ಯವೀರ್ ಗೆ ಪುಟ್ಟ ತಮ್ಮನು ಇದ್ದು, ಸಂಭ್ರಮ ಮತ್ತಷ್ಟು ಜೋರಾಗಿ ಇರಲಿದೆ.

Read more Photos on
click me!

Recommended Stories