The ₹1 Crore Roadmap: ಕೇವಲ ₹5000 ನಿಂದ ಕೋಟ್ಯಧಿಪತಿ ಆಗಬಹುದು, ಪ್ರತಿ ತಿಂಗಳು ಹೀಗೆ ಮಾಡಿ!

Published : Jul 02, 2026, 01:11 PM IST

ಪ್ರತಿಯೊಬ್ಬರಿಗೂ ಕೋಟ್ಯಧಿಪತಿಯಾಗುವ ಆಸೆ, ಕನಸು ಇದ್ದೇ ಇರುತ್ತೆ. ಆದರೆ ಯಾವುದರಲ್ಲಿ ಹೂಡಿಕೆ ಮಾಡಿದರೆ ಉತ್ತಮ ಎಂಬುದು ತಿಳಿದಿರುವುದಿಲ್ಲ. ಹೀಗಾಗಿ ನೀವು ಕೇವಲ ಐದು ಸಾವಿರ ರೂಪಾಯಿಯಲ್ಲಿ ಕೋಟ್ಯಧಿಪತಿಯಾಗಲು ಬಯಸಿದರೆ ಇಲ್ಲಿನ ಸರಳ ಲೆಕ್ಕಾಚಾರ ತಿಳಿದರೆ ಸಾಧ್ಯವಿದೆ. 

PREV
17
ಕೇವಲ ₹5000 ನಿಂದ ನೀವು ಕೋಟ್ಯಧಿಪತಿಯಾಗಬಹುದು!

ಪ್ರತಿಯೊಬ್ಬರಿಗೂ ಹಣ ಮಾಡಬೇಕು, ಕೋಟ್ಯಧಿಪತಿಯಾಗಬೇಕೆಂಬ ಆಸೆ, ಕನಸು ಇದ್ದೇ ಇರುತ್ತೆ. ಕೆಲವರು ಇದನ್ನು ಸಾಧಿಸುತ್ತಾರೆ, ಇನ್ನು ಕೆಲವರು ಎಷ್ಟೇ ಸಂಬಳ ಅಥವಾ ಆದಾಯ ಬರುತ್ತಿದ್ದರೂ ಯಾವಾಗಲೂ ಸಾಲ ಮಾಡುತ್ತಲೆ ಇರುತ್ತಾರೆ. ನಿಮಗೆ ನಿಶ್ಚಿತವಾಗಿ ಸಂಬಳ ಬರುತ್ತೆನ್ನಿ ಅದನ್ನ ಬ್ಯಾಂಕ್ ಖಾತೆಯಲ್ಲಿ ಸೇವ್ ಮಾಡುವುದರಿಂದ ಹೆಚ್ಚು ಗಳಿಸಲಾರಿರಿ, ಇದ್ದಷ್ಟೇ ಇರುತ್ತದೆ.

27
ಸೇವಿಂಗ್ ಅಕೌಂಟ್‌ನಲ್ಲಿ ಹಣ ಬೆಳೆಯೋಲ್ಲ, ಉಳಿಯುತ್ತಷ್ಟೇ!

ಉದಾಹರಣಗೆ ನೀವು ಸುಮಾರು ಹತ್ತು ವರ್ಷಗಳಿಂದ ಕಂಪನಿಯಲ್ಲಿ ದುಡಿಯುತ್ತಿದ್ದೀರಿ. ಪ್ರತಿ ತಿಂಗಳ ನಿಮಗೆ 30000 ಸಂಬಳ ಅದರಲ್ಲಿ ಎಲ್ಲ ಖರ್ಚು ತೆಗೆದರೂ ಕನಿಷ್ಟ 10,000 ರೂಪಾಯಿ ಹಣವನ್ನ ಕಳೆದ ಹತ್ತು ವರ್ಷಗಳಿಂದ ಸೇವ್ ಮಾಡುತ್ತಾ ಬಂದಿದ್ದೀರಿ. ಆದರೆ ಇಲ್ಲಿ ಹಣ ಉಳಿದಿದೆ ಹೊರತು ಬೆಳೆದಿಲ್ಲ! ಹೌದು. ಅದೇ ಹಣವನ್ನು ಹತ್ತು ವರ್ಷಗಳಿಂದ ನೀವು ಬ್ಯಾಂಕ್‌ ಖಾತೆಯಲ್ಲಿಡುವ ಬದಲು ಎಸ್‌ಐಪಿ(SIP) ಮಾಡುತ್ತಾ ಬಂದಿದ್ದರೆ ಹಣವೂ ಈಗ ಉಳಿತಾಯವಾಗಿದ್ದಕ್ಕಿಂತ ಎಷ್ಟೋಪಟ್ಟು ಹೆಚ್ಚಿರುತ್ತಿತ್ತಲ್ಲವೇ?

37
ಕೋಟ್ಯಧಿಪತಿಯಾಗುವುದು ಹೇಗೆ?

ನೀವು ಈ ಲೆಕ್ಕಾಚಾರ ತಿಳಿದುಕೊಂಡರೆ ಕೇವಲ 5000 ರೂಪಾಯಿಯಿಂದಲೇ ಶುರುಮಾಡಿ ಕೋಟ್ಯಧಿಪತಿಯಾಗಲು ಸಾಧ್ಯವಿದೆ. ಪ್ರತಿ ತಿಂಗಳು ಕೇವಲ ₹5,000 ರೂಪಾಯಿ ಇನ್ವೆಸ್ಟ್ ಮಾಡಿದರೂ ದೀರ್ಘಾವಧಿಯಲ್ಲಿ ₹1 ಕೋಟಿಯವರೆಗೆ ಬೆಳೆದಿರುತ್ತದೆ. ಆದರೆ ನೀವು ಯಾವ ಹೂಡಿಕೆ ಆಯ್ಕೆ ಮಾಡುತ್ತೀರಿ, ಎಷ್ಟು ವರ್ಷಗಳ ಕಾಲ ಹೂಡಿಕೆ ಮಾಡುತ್ತೀರಿ ಅನ್ನೋದರ ಮೇಲೆ ಅವಲಂಬಿತವಾಗಿರುತ್ತದೆ.

47
ಬೇಗ ಕೋಟ್ಯಧಿಪತಿಯಾಗಲು ಯಾವ ಹೂಡಿಕೆ ಬೆಸ್ಟ್?

ಮ್ಯೂಚುವಲ್ ಫಂಡ್ SIP ನಲ್ಲಿ ತಿಂಗಳಿಗೆ ₹5,000 ಹೂಡಿಕೆ ಮಾಡಿ ವರ್ಷಕ್ಕೆ ಸರಾಸರಿ 12% ಆದಾಯ ಬಂದರೂ ಅದು ಸುಮಾರು 25.5 ವರ್ಷಗಳಲ್ಲಿ ₹1 ಕೋಟಿಗೂ ಹೆಚ್ಚು ಸಂಪತ್ತಾಗಿರುತ್ತೆ. ಈ ಅವಧಿಯಲ್ಲಿ ನಿಮ್ಮ ಒಟ್ಟು ಹೂಡಿಕೆ ಸುಮಾರು ₹15.3 ಲಕ್ಷವಾಗಿದ್ದರೆ, ಉಳಿದ ಮೊತ್ತ ಬಡ್ಡಿ ಮತ್ತು ಚಕ್ರಬಡ್ಡಿಯ (Compounding) ಡಬಲ್ ಆಗಿರುತ್ತದೆ!

57
ಚಿನ್ನದಲ್ಲಿ ಹೂಡಿಕೆ ಮಾಡಿದರೆ ಹೇಗೆ?

ಇದು ಕೂಡ ಉತ್ತಮ ಹೂಡಿಕೆ ತಿಂಗಳಿಗೆ ₹5,000 ಗೋಲ್ಡ್‌ನಲ್ಲಿ ಇನ್ವೆಸ್ಟ್ ಮಾಡೋದ್ರಿಂದ ವರ್ಷಕ್ಕೆ ಸರಾಸರಿ 10% ಆದಾಯ ಸಿಗುವುದು ಪಕ್ಕ. ಇದರಲ್ಲಿ ನೀವು ₹1 ಕೋಟಿ ಗಳಿಸಲು ಸುಮಾರು 29 ವರ್ಷಗಳು ಕಾಯಬೇಕಾಗುತ್ತೆ.

67
ಹಾಗಾದರೆ PPFನಲ್ಲಿ ಎಷ್ಟು ಸಮಯ ಬೇಕು?

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF)ನಲ್ಲಿ ವರ್ಷಕ್ಕೆ ₹60,000 ನಂತೆ (ತಿಂಗಳಿಗೆ ₹5,000) ಹೂಡಿಕೆ ಮಾಡುತ್ತಾ ಹೋದರೆ ಸದ್ಯ ಇದಕ್ಕೆ 7.1% ಬಡ್ಡಿದರ ಮುಂದುವರಿದರೆ ನೀವು ₹1 ಕೋಟಿ ಗಳಿಸಲು 37 ವರ್ಷಗಳು ಬೇಕಾಗಬಹುದು.

77
SIP, Gold, PPF: ಹೂಡಿಕೆ ಮಾಡಲು ಯಾವುದು ಬೆಸ್ಟ್

SIP: ಹೆಚ್ಚು ಆದಾಯದ ಸಾಧ್ಯತೆ, ಆದರೆ ಮಾರುಕಟ್ಟೆ ಅಪಾಯ ಇರುತ್ತದೆ.

ಚಿನ್ನ: ಹಣದುಬ್ಬರದ ವಿರುದ್ಧ ರಕ್ಷಣೆ ನೀಡಬಹುದು, ಆದರೆ ಬೆಳವಣಿಗೆ ನಿಧಾನ. ಕೆಲವೊಮ್ಮೆ ಹೆಚ್ಚಾಗಬಹುದು, ಕೆಲವೊಮ್ಮೆ ದಿಡೀರ್ ಬೆಲೆ ಇಳಿಕೆಯಾಗಬಹುದು. ಇತ್ತೀಚೆಗೆ ಕಳೆದ ಕೆಲವು ದಿನಗಳಲ್ಲಿ ಚಿನ್ನದ ಬೆಲೆ 50,000 ರೂಪಾಯಿಗೆ ಹೆಚ್ಚು ಇಳಿಕೆಯಾಗಿದ್ದು ಗಮನಿಸಬಹುದು

PPF: ಸರ್ಕಾರದ ಬೆಂಬಲ ಇರುವ ಸುರಕ್ಷಿತ ಯೋಜನೆ, ಆದರೆ ಲಾಭದ ಪ್ರಮಾಣ ಕಡಿಮೆ.

ಗಮನಿಸಿ: ಈ ಲೆಕ್ಕಾಚಾರಗಳು ಅಂದಾಜು ವಾರ್ಷಿಕ ಆದಾಯದ ಆಧಾರಿತವಾಗಿದ್ದು, ನಿಜವಾದ ಆದಾಯ ಮಾರುಕಟ್ಟೆ ಪರಿಸ್ಥಿತಿ ಮತ್ತು ಬಡ್ಡಿದರ ಬದಲಾವಣೆಯ ಮೇಲೆ ವ್ಯತ್ಯಾಸವಾಗಬಹುದು. ಹೂಡಿಕೆ ಮಾಡುವ ಮೊದಲು ನಿಮ್ಮ ಹಣಕಾಸಿನ ಗುರಿ ಮತ್ತು ಅಪಾಯ ಸಹಿಸುವ ಸಾಮರ್ಥ್ಯಕ್ಕೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.

Read more Photos on
click me!

Recommended Stories