Credit Card ಇರೋರು ಸಾಲದಿಂದ ಹೊರ ಬರೋದು ಯಾಕೆ ಕಷ್ಟಕರ? ಈ 7 ಟ್ರಿಕ್ಸ್ ಫಾಲೋ ಮಾಡಿ

Published : Aug 31, 2026, 08:58 AM IST

ಕ್ರೆಡಿಟ್ ಕಾರ್ಡ್ ಬಿಲ್‌ನಲ್ಲಿ ಕೇವಲ ಕನಿಷ್ಠ ಮೊತ್ತ ಪಾವತಿಸುವುದರಿಂದ ಜನರು ಸಾಲದ ಸುಳಿಗೆ ಸಿಲುಕುತ್ತಾರೆ. ಸಾಲವನ್ನು ಇಎಂಐ ಆಗಿ ಬದಲಿಸುವುದು ಮತ್ತು ಖರ್ಚಿನ ಮೇಲೆ ನಿಯಂತ್ರಣ ಹೇರುವ 7 ಸರಳ ಮಾರ್ಗಗಳ ಮೂಲಕ ನೀವು ಬೇಗನೆ ಸಾಲದಿಂದ ಮುಕ್ತರಾಗಬಹುದು.

PREV
18
ಇಲ್ಲಿವೆ 7 ಸರಳ ಉಪಾಯಗಳು

ಬೆಂಗಳೂರು: ಇಂದಿನ ಕಾಲದಲ್ಲಿ ಕ್ರೆಡಿಟ್ ಕಾರ್ಡ್ ಇಲ್ಲದವರೇ ಇಲ್ಲ. ತುರ್ತು ಸಂದರ್ಭದಲ್ಲಿ ಇದು ನಮಗೆ ಸಹಾಯ ಮಾಡಿದರೂ ಸರಿಯಾಗಿ ಬಳಸದಿದ್ದರೆ ನಮ್ಮನ್ನು ದೊಡ್ಡ ಸಾಲದ ಬಲೆಗೆ ತಳ್ಳಿಬಿಡುತ್ತದೆ. ಅನೇಕರು ಕ್ರೆಡಿಟ್ ಕಾರ್ಡ್ ಬಿಲ್ ಬಂದಾಗ ಕೇವಲ 'ಕನಿಷ್ಠ ಮೊತ್ತ' (Minimum Amount) ಪಾವತಿಸುತ್ತಾರೆ. ಇದೇ ನೀವು ಮಾಡುವ ಅತಿದೊಡ್ಡ ತಪ್ಪು! ಇದರಿಂದ ಸಾಲದ ಬಡ್ಡಿ ಬೆಟ್ಟದಂತೆ ಬೆಳೆಯುತ್ತಾ ಹೋಗುತ್ತದೆ. ಈ ಸಾಲದ ಸುಳಿಯಿಂದ ನೀವು ಹೇಗೆ ಹೊರಬರಬಹುದು? ಇಲ್ಲಿದೆ ನೋಡಿ 7 ಸರಳ ಉಪಾಯಗಳು.

28
ಕನಿಷ್ಠ ಮೊತ್ತಕ್ಕಿಂತ ಹೆಚ್ಚು ಪಾವತಿಸಿ

ಬಿಲ್ ಬಂದಾಗ ಬ್ಯಾಂಕ್ ಸೂಚಿಸುವ 'ಕನಿಷ್ಠ ಮೊತ್ತ' (Minimum Due) ಮಾತ್ರ ಕಟ್ಟಬೇಡಿ. ನಿಮ್ಮಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಹಣವನ್ನು ಪಾವತಿಸಿ. ಇದರಿಂದ ಒಟ್ಟು ಸಾಲದ ಮೊತ್ತ ಕಡಿಮೆಯಾಗುತ್ತದೆ ಮತ್ತು ಬಡ್ಡಿಯ ಹೊರೆ ಇಳಿಯುತ್ತದೆ.

38
ಸಾಲವನ್ನು ಇಎಂಐ (EMI) ಆಗಿ ಬದಲಿಸಿಕೊಳ್ಳಿ

ನಿಮ್ಮ ಕಾರ್ಡ್‌ನಲ್ಲಿ ದೊಡ್ಡ ಮೊತ್ತದ ಸಾಲವಿದ್ದರೆ, ಅದನ್ನು ಇಎಂಐ ಆಗಿ ಬದಲಿಸಲು ಬ್ಯಾಂಕ್‌ಗೆ ಮನವಿ ಮಾಡಿ. ಕ್ರೆಡಿಟ್ ಕಾರ್ಡ್ ಬಡ್ಡಿ ದರ ಶೇ. 40ರವರೆಗೂ ಇರುತ್ತದೆ, ಆದರೆ ಇಎಂಐ ಮಾಡಿದರೆ ಬಡ್ಡಿ ದರ ಕಡಿಮೆಯಾಗುತ್ತದೆ. ಅಥವಾ ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್ ಪಡೆದು ಕ್ರೆಡಿಟ್ ಕಾರ್ಡ್ ಸಾಲವನ್ನು ಒಂದೇ ಬಾರಿಗೆ ತೀರಿಸಿ.

48
ಆಟೋಮ್ಯಾಟಿಕ್ ಪಾವತಿ ಸೆಟ್ ಮಾಡಿ

ಬಿಲ್ ಪಾವತಿಸುವ ದಿನಾಂಕವನ್ನು ಮರೆತರೆ ಬ್ಯಾಂಕ್ ಭಾರಿ ದಂಡ (Penalty) ವಿಧಿಸುತ್ತದೆ. ಇದನ್ನು ತಪ್ಪಿಸಲು ನಿಮ್ಮ ಬ್ಯಾಂಕ್ ಖಾತೆಯಿಂದ ಆಟೋಮ್ಯಾಟಿಕ್ ಆಗಿ ಹಣ ಕಟ್ ಆಗುವಂತೆ ಸೆಟ್ ಮಾಡಿ. ಇದರಿಂದ ಲೇಟ್ ಫೀಸ್ ಉಳಿಯುತ್ತದೆ.

58
ಸಣ್ಣ ಸಾಲ ಮೊದಲು

ನಿಮ್ಮ ಬಳಿಕ ಒಂದಕ್ಕಿಂತ ಹೆಚ್ಚು ಕಾರ್ಡ್‌ಗಳಿದ್ದರೆ, ಮೊದಲು ಅತೀ ಕಡಿಮೆ ಸಾಲ ಇರುವ ಕಾರ್ಡ್‌ನ ಹಣವನ್ನು ಪೂರ್ತಿಯಾಗಿ ಕಟ್ಟಿ ಮುಗಿಸಿ. ಒಂದು ಸಾಲ ತೀರಿದಾಗ ನಿಮಗೆ ಆತ್ಮವಿಶ್ವಾಸ ಬರುತ್ತದೆ, ನಂತರ ದೊಡ್ಡ ಸಾಲದ ಕಡೆ ಗಮನ ಹರಿಸಿ.

68
ಹೆಚ್ಚು ಬಡ್ಡಿ ಇರುವ ಸಾಲ ಮೊದಲು

ಯಾವ ಕ್ರೆಡಿಟ್ ಕಾರ್ಡ್‌ನಲ್ಲಿ ಅತೀ ಹೆಚ್ಚು ಬಡ್ಡಿ ದರ ಇದೆಯೋ, ಆ ಕಾರ್ಡ್‌ನ ಸಾಲವನ್ನು ಮೊದಲು ತೀರಿಸಲು ಪ್ರಯತ್ನಿಸಿ. ಇದರಿಂದ ನೀವು ಪ್ರತಿ ತಿಂಗಳು ಬ್ಯಾಂಕ್‌ಗೆ ಕಟ್ಟುವ ಹೆಚ್ಚಿನ ಬಡ್ಡಿ ಹಣ ಉಳಿತಾಯವಾಗುತ್ತದೆ.

78
ಖರ್ಚಿನ ಮೇಲೆ ನಿಗಾ ಇಡಿ

ನಮ್ಮ ಕೈಯಲ್ಲಿ ಕಾರ್ಡ್ ಇದೆ ಎಂದ ಮಾತ್ರಕ್ಕೆ ಅನಗತ್ಯವಾಗಿ ಶಾಪಿಂಗ್ ಮಾಡಬೇಡಿ. ಒಂದು ಬಜೆಟ್ ಹಾಕಿಕೊಳ್ಳಿ. ನಿಮ್ಮ ತಿಂಗಳ ಆದಾಯಕ್ಕೆ ತಕ್ಕಂತೆ ಮಾತ್ರ ಖರ್ಚು ಮಾಡಿ.

88
ಕಾರ್ಡ್ ಬಿಟ್ಟು ಕ್ಯಾಶ್ ಬಳಸಿ

ಸಾಲದ ಸುಳಿಯಿಂದ ಹೊರಬರುವವರೆಗೂ ಕ್ರೆಡಿಟ್ ಕಾರ್ಡ್ ಬಳಸುವುದನ್ನು ನಿಲ್ಲಿಸಿ. ಬದಲಾಗಿ ನಗದು ಅಥವಾ ಯುಪಿಐ (UPI) ಬಳಸಿ. ಕೈಯಿಂದ ಹಣ ಎಣಿಸಿ ಕೊಡುವಾಗ ನಮಗೆ ಖರ್ಚಿನ ಅರಿವಾಗುತ್ತದೆ, ಇದರಿಂದ ಹಣ ಉಳಿತಾಯವಾಗುತ್ತದೆ.

ನೆನಪಿಡಿ ಕ್ರೆಡಿಟ್ ಕಾರ್ಡ್ ಎನ್ನುವುದು ನಮಗೆ ಸಿಕ್ಕ ಉಚಿತ ಹಣವಲ್ಲ, ಅದು ನಾವು ಮರಳಿಸಬೇಕಾದ ಸಾಲ. ಈ ಮೇಲಿನ 7 ಹಂತಗಳನ್ನು ಅನುಸರಿಸಿದರೆ ನೀವು ಖಂಡಿತವಾಗಿಯೂ ಸಾಲದ ಬಲೆಯಿಂದ ಹೊರಬಂದು ನೆಮ್ಮದಿಯ ಜೀವನ ನಡೆಸಬಹುದು.

Read more Photos on
click me!

Recommended Stories