Axis credit card ಬಳಕೆದಾರರಿಗೆ ಶಾಕ್.. ಆಗಸ್ಟ್ 28 ರಿಂದ ಹೊಸ ರೂಲ್ಸ್‌, ಜೇಬಿಗೆ ಕತ್ತರಿ ಗ್ಯಾರಂಟಿ..!

Published : Aug 22, 2026, 02:28 PM IST

ಆಕ್ಸಿಸ್ ಬ್ಯಾಂಕ್ (Axis Bank) ತನ್ನ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್‌ಗಳ ನಿಯಮಗಳು ಮತ್ತು ಶುಲ್ಕಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ. ಈ ಹೊಸ ನಿಯಮಗಳು ಆಗಸ್ಟ್ 28, 2026 ರಿಂದ ಜಾರಿಗೆ ಬರಲಿವೆ.

PREV
16
ಗ್ರಾಹಕರಿಗೆ ಹೊರೆ

ನೀವು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಶಾಕಿಂಗ್‌ ಸುದ್ದಿಯೊಂದು ಕಾದಿದೆ. ಆಕ್ಸಿಸ್ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ನಿಯಮಗಳನ್ನು ಬಿಗಿಗೊಳಿಸಿದ್ದು, ಹೊಸ ಶುಲ್ಕಗಳನ್ನು ಜಾರಿಗೆ ತರುತ್ತಿದೆ. ಆಗಸ್ಟ್ 28 ರಿಂದ ಜಾರಿಗೆ ಬರುವ ಈ ಹೊಸ ಬದಲಾವಣೆಗಳು ಗ್ರಾಹಕರ ಜೇಬಿಗೆ ಕೊಂಚ ಹೊರೆಯಾಗಲಿವೆ.

26
ಲೇಟ್‌ ಪೇಮೆಂಟ್‌ಗೆ ದುಬಾರಿ ಫೀಸ್‌ (Late Payment Fees Changed)

ಒಂದು ವೇಳೆ ನೀವು ನಿಗದಿತ ಸಮಯಕ್ಕೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಲು ಮರೆತರೆ ವಿಧಿಸಲಾಗುವ ವಿಳಂಬ ಶುಲ್ಕವನ್ನು ಬ್ಯಾಂಕ್ ಪರಿಷ್ಕರಿಸಿದೆ. ಅದರಲ್ಲೂ ವಿಶೇಷವಾಗಿ 50,000 ರೂ.ಗಿಂತ ಹೆಚ್ಚು ಬಾಕಿ ಉಳಿಸಿಕೊಂಡರೆ ಭಾರಿ ದಂಡ ತೆರಬೇಕಾಗುತ್ತದೆ. ವಿವಿಧ ಬಾಕಿ ಮೊತ್ತಗಳಿಗೆ ಅನ್ವಯವಾಗುವ ಹೊಸ ಶುಲ್ಕಗಳ ಪಟ್ಟಿ ಇಲ್ಲಿದೆ.

  • 500 ರೂ. ವರೆಗೆ: ಯಾವುದೇ ವಿಳಂಬ ಶುಲ್ಕ ಇರುವುದಿಲ್ಲ
  • 501 ರೂ. ನಿಂದ 5,000 ರೂ. ವರೆಗೆ: 500 ರೂ. ಶುಲ್ಕ
  • 5,001 ರೂ. ನಿಂದ 10,000 ರೂ. ವರೆಗೆ: 750 ರೂ. ಶುಲ್ಕ
  • 10,001 ರೂ. ನಿಂದ 50,000 ರೂ. ವರೆಗೆ: 1,200 ರೂ. ಶುಲ್ಕ
  • 50,000 ರೂ. ಗಿಂತ ಹೆಚ್ಚಿನ ಬಾಕಿ ಮೊತ್ತಕ್ಕೆ: 1,300 ರೂ. ವಿಳಂಬ ಶುಲ್ಕ
36
ಪಾವತಿ ಹೊಂದಾಣಿಕೆ ಆದ್ಯತೆ (Payment Settlement Priority)

ಒಂದು ವೇಳೆ ನೀವು ಬಿಲ್‌ನ ಪೂರ್ಣ ಮೊತ್ತವನ್ನು ಪಾವತಿಸದೆ ಭಾಗಶಃ ಮೊತ್ತವನ್ನು ಪಾವತಿಸಿದರೆ, ನಿಮ್ಮ ಹಣವನ್ನು ಯಾವ ರೀತಿ ಹೊಂದಾಣಿಕೆ ಮಾಡಲಾಗುತ್ತದೆ ಎಂಬುದಕ್ಕೆ ಬ್ಯಾಂಕ್ ಹೊಸ ಕ್ರಮವನ್ನು ಅನುಸರಿಸಲಿದೆ. ನಿಮ್ಮ ಪಾವತಿಯನ್ನು ಮೊದಲು ಅನ್ವಯವಾಗುವ ತೆರಿಗೆಗಳು ಮತ್ತು ವಿವಿಧ ಶುಲ್ಕಗಳಿಗೆ (Fees & Charges) ಹೊಂದಿಸಲಾಗುತ್ತದೆ. ಅದರ ನಂತರ ಇಎಂಐ (EMI) ಗಳಿಗೆ, ಆ ಬಳಿಕ ಬಡ್ಡಿ ಶುಲ್ಕಗಳಿಗೆ, ನಂತರ ಸಾಮಾನ್ಯ ಖರೀದಿಗಳಿಗೆ ಮತ್ತು ಕೊನೆಯದಾಗಿ ಕ್ಯಾಶ್ ಅಡ್ವಾನ್ಸ್ (ನಗದು ಡ್ರಾ) ಗಳಿಗೆ ಹೊಂದಾಣಿಕೆ ಮಾಡಲಾಗುತ್ತದೆ.

46
ಡೈನಾಮಿಕ್ ಕರೆನ್ಸಿ ಕನ್ವರ್ಶನ್ (DCC) ಶುಲ್ಕ ಹೆಚ್ಚಳ

ಅಂತರರಾಷ್ಟ್ರೀಯ ವಹಿವಾಟುಗಳಿಗೆ ಅಥವಾ ವಿದೇಶಿ ವೆಬ್‌ಸೈಟ್‌ಗಳಲ್ಲಿ ಭಾರತೀಯ ರೂಪಾಯಿಗಳ ಮೂಲಕ ಪಾವತಿ ಮಾಡುವಾಗ ವಿಧಿಸಲಾಗುವ ಡೈನಾಮಿಕ್ ಕರೆನ್ಸಿ ಕನ್ವರ್ಶನ್ (DCC) ಮಾರ್ಕಪ್ ಶುಲ್ಕವನ್ನು ಶೇಕಡಾ 1.5 ರಿಂದ ಶೇಕಡಾ 3.5 ಕ್ಕೆ ಗಣನೀಯವಾಗಿ ಹೆಚ್ಚಿಸಲಾಗಿದೆ. (ಆದರೆ ಮ್ಯಾಗ್ನಸ್ ಕಾರ್ಡ್‌ಗಳಿಗೆ ಇದು ಶೇ. 2 ರಷ್ಟಿರುತ್ತದೆ). ಇದು ವಿದೇಶ ಪ್ರವಾಸ ಮಾಡುವವರಿಗೆ ಅಥವಾ ವಿದೇಶಿ ಪಾವತಿಗಳನ್ನು ಭಾರತೀಯ ಕರೆನ್ಸಿಯಲ್ಲಿ ಮಾಡುವವರಿಗೆ ವೆಚ್ಚವನ್ನು ಹೆಚ್ಚಿಸಲಿದೆ.

56
ಏರ್‌ಪೋರ್ಟ್ ಲೌಂಜ್ ಪ್ರವೇಶ ನಿಯಮಗಳು (Airport Lounge Access Rules)

ದೇಶೀಯ (ಡೊಮೆಸ್ಟಿಕ್) ಏರ್‌ಪೋರ್ಟ್ ಲೌಂಜ್‌ಗಳಲ್ಲಿ ಮ್ಯಾಗ್ನಸ್ ಕ್ರೆಡಿಟ್ ಕಾರ್ಡ್‌ನ ‘ಪ್ರಯಾರಿಟಿ ಪಾಸ್’ (Priority Pass) ಇನ್ನು ಮುಂದೆ ಮಾನ್ಯವಾಗುವುದಿಲ್ಲ. ದೇಶೀಯ ಲೌಂಜ್ ಪ್ರವೇಶಿಸಲು ಗ್ರಾಹಕರು ತಮ್ಮ ಭೌತಿಕ ಕಾರ್ಡ್ (Physical Card) ಮತ್ತು ಬೋರ್ಡಿಂಗ್ ಪಾಸ್ ಅನ್ನು ಒದಗಿಸಬೇಕಾಗುತ್ತದೆ. ಇಮಿಗ್ರೇಷನ್ ಪ್ರಕ್ರಿಯೆಯ ನಂತರದ ಭಾರತೀಯ ಅಂತರರಾಷ್ಟ್ರೀಯ ಟರ್ಮಿನಲ್‌ಗಳಲ್ಲಿರುವ ಏರ್‌ಪೋರ್ಟ್ ಲೌಂಜ್‌ಗಳನ್ನು ಅಂತರರಾಷ್ಟ್ರೀಯ ಲೌಂಜ್‌ಗಳೆಂದೇ ಪರಿಗಣಿಸಲಾಗುತ್ತದೆ. ಅಲ್ಲಿಗೆ ಪ್ರಯಾರಿಟಿ ಪಾಸ್ ಬಳಸಿ ಪ್ರವೇಶ ಪಡೆಯಬಹುದು.

66
ಗಿಫ್ಟ್ ಕಾರ್ಡ್ ಹಾಗೂ ಟೋಲ್ ಪಾವತಿಗಳಿಗೆ ನೋ ರಿವಾರ್ಡ್ಸ್!

ಗಿಫ್ಟ್ ಕಾರ್ಡ್ ಖರೀದಿಗಳಿಗೆ ಇನ್ಮುಂದೆ ಯಾವುದೇ ರೀತಿಯ ರಿವಾರ್ಡ್ ಪಾಯಿಂಟ್‌ಗಳು ಅಥವಾ ಕ್ಯಾಶ್‌ಬ್ಯಾಕ್ ಲಭ್ಯವಿರುವುದಿಲ್ಲ. ಇವುಗಳನ್ನು ‘ವ್ಯಾಲೆಟ್’ ಖರ್ಚುಗಳ ವಿಭಾಗದಿಂದ ಬದಲಾಯಿಸಿ, 'ಗಿಫ್ಟ್ ಕಾರ್ಡ್ಸ್' ಎಂಬ ಪ್ರತ್ಯೇಕ ವಿಭಾಗದಲ್ಲಿ ವರ್ಗೀಕರಿಸಲಾಗುತ್ತದೆ. ಟೋಲ್ ಪಾವತಿಗಳು, ರಸ್ತೆ ಶುಲ್ಕಗಳು ಮತ್ತು ಬ್ರಿಡ್ಜ್ ಫೀಸ್ ಪಾವತಿಗಳ ಮೇಲೂ ಇನ್ನು ಮುಂದೆ ಯಾವುದೇ ರಿವಾರ್ಡ್ ಪಾಯಿಂಟ್‌ಗಳನ್ನು ನೀಡಲಾಗುವುದಿಲ್ಲ.

ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಈ ಹೊಸ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮಾಸಿಕ ಬಿಲ್‌ಗಳನ್ನು ನಿಗದಿತ ಸಮಯದೊಳಗೆ ಪಾವತಿಸುವುದು ಸೂಕ್ತ. ವಿಳಂಬ ಪಾವತಿ ಮತ್ತು ಅಂತರರಾಷ್ಟ್ರೀಯ ವಹಿವಾಟುಗಳ ಮೇಲಿನ ಶುಲ್ಕ ಹೆಚ್ಚಳದಿಂದ ತಪ್ಪಿಸಿಕೊಳ್ಳಲು ಈಗಿನಿಂದಲೇ ಎಚ್ಚರಿಕೆ ವಹಿಸಿ.

Read more Photos on
click me!

Recommended Stories