ಕುಟುಂಬ ನಿರ್ವಹಣೆಗೆ ಕೇಂದ್ರದಿಂದ 5 ಅದ್ಭುತ ಯೋಜನೆಗಳು.. ಇವು ನಿಮ್ಮ ಖರ್ಚನ್ನ ಕಡಿಮೆಗೊಳಿಸುತ್ತವೆ..!

Published : Jul 13, 2026, 02:22 PM IST

ಕೇಂದ್ರ ಸರ್ಕಾರವು ಜನರ ಆರ್ಥಿಕ ಸದೃಢತೆಗಾಗಿ ಮತ್ತು ಖರ್ಚು ಕಡಿಮೆ ಮಾಡಲು ಐದು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಲೇಖನದಲ್ಲಿ ಪಿಎಂ ಸೂರ್ಯ ಘರ್, ಉಜ್ವಲ ಯೋಜನೆ, ಆಯುಷ್ಮಾನ್ ಭಾರತ್, ಅಟಲ್ ಪೆನ್ಷನ್ ಯೋಜನೆ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಯೋಜನಗಳನ್ನು ವಿವರಿಸಲಾಗಿದೆ.

PREV
16
ಐದು ಪ್ರಮುಖ ಯೋಜನೆಗಳು

ಬೆಂಗಳೂರು: ಕೇಂದ್ರ ಸರ್ಕಾರವು ಸಾರ್ವಜನಿಕ ಸೇವೆಗಳನ್ನು ವೇಗಗೊಳಿಸಲು ಮತ್ತು ಪ್ರತಿಯೊಬ್ಬರಿಗೂ ಸರ್ಕಾರದ ಸೌಲಭ್ಯಗಳು ಸಿಗುವಂತೆ ಮಾಡಲು ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳುತ್ತಿದೆ. ನೀವು ಆರ್ಥಿಕವಾಗಿ ಸದೃಢರಾಗಲು ಮತ್ತು ಕುಟುಂಬದ ಖರ್ಚುಗಳನ್ನು ಕಡಿಮೆ ಮಾಡಲು ಸಹಾಯ ಮಾಡುವ ಐದು ಪ್ರಮುಖ ಯೋಜನೆಗಳು ಇಲ್ಲಿವೆ.

26
ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ (PM Surya Ghar Muft Bijli Yojana)

ಈ ಯೋಜನೆಯನ್ನು ಫೆಬ್ರವರಿ 13, 2024 ರಂದು ಪ್ರಧಾನಿ ಮೋದಿಯವರು ಪ್ರಾರಂಭಿಸಿದರು. ನಿಮ್ಮ ಮನೆಯ ಮೇಲ್ಛಾವಣಿಯ ಮೇಲೆ ಸೋಲಾರ್ ಪ್ಯಾನಲ್ ಅಳವಡಿಸಿಕೊಳ್ಳುವ ಮೂಲಕ ಉಚಿತ ವಿದ್ಯುತ್ ಪಡೆಯಬಹುದು. 2 ಕಿಲೋವ್ಯಾಟ್ ಸೋಲಾರ್‌ಗೆ 30,000 ರೂ. ಮತ್ತು 3 ಕಿಲೋವ್ಯಾಟ್ ಸೋಲಾರ್ ಪ್ಯಾನಲ್‌ಗೆ 78,000 ರೂ. ವರೆಗೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತದೆ. ಪ್ರತಿ ತಿಂಗಳು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಪಡೆಯಬಹುದು.

36
ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 (PM Ujjwala Yojana)

ಗ್ಯಾಸ್ ಸಂಪರ್ಕವಿಲ್ಲದ ಬಡ ಕುಟುಂಬಗಳಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಉಚಿತ ಗ್ಯಾಸ್ ಸಂಪರ್ಕದ ಜೊತೆಗೆ ಮೊದಲ ಸಿಲಿಂಡರ್ ಮತ್ತು ಗ್ಯಾಸ್ ಸ್ಟವ್ ಸಂಪೂರ್ಣ ಉಚಿತವಾಗಿ ಸಿಗುತ್ತದೆ. ವಾರ್ಷಿಕ ಆರು ಸಿಲಿಂಡರ್‌ಗಳವರೆಗೆ ಪ್ರತಿ ಸಿಲಿಂಡರ್‌ಗೆ 300 ರೂ. ಸಬ್ಸಿಡಿ ನೀಡಲಾಗುತ್ತದೆ. ಉಜ್ವಲ ಯೋಜನೆಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

46
ಆಯುಷ್ಮಾನ್ ಭಾರತ್ - ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PM-JAY)

ಬಡವರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಜಾರಿಗೆ ತಂದಿರುವ ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆ ಇದಾಗಿದೆ. ಪಡಿತರ ಚೀಟಿ (BPL/Anthyodaya) ಹೊಂದಿರುವ ಕುಟುಂಬಗಳಿಗೆ ದೇಶದ ಯಾವುದೇ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ವಾರ್ಷಿಕ 5 ಲಕ್ಷ ರೂಪಾಯಿಗಳವರೆಗೆ ಉಚಿತ ನಗದು ರಹಿತ (Cashless) ಚಿಕಿತ್ಸೆ ಸಿಗುತ್ತದೆ. ಅಧಿಕೃತ ಪೋರ್ಟಲ್ ಅಥವಾ ವಾಟ್ಸಾಪ್ ಮೂಲಕವೂ ಇದಕ್ಕೆ ನೋಂದಣಿ ಮಾಡಿಕೊಳ್ಳಬಹುದು.

56
ಅಟಲ್ ಪೆನ್ಷನ್ ಯೋಜನೆ (Atal Pension Yojana)

ಅಸಂಘಟಿತ ವಲಯದ ಕಾರ್ಮಿಕರಿಗೆ ನಿವೃತ್ತಿಯ ನಂತರ ಆರ್ಥಿಕ ಭದ್ರತೆ ನೀಡಲು ಈ ಯೋಜನೆ ಸಹಕಾರಿ. 60 ವರ್ಷ ವಯಸ್ಸಿನ ನಂತರ ನೀವು ಪಾವತಿಸಿದ ಪ್ರೀಮಿಯಂಗೆ ಅನುಗುಣವಾಗಿ ಪ್ರತಿ ತಿಂಗಳು 1,000 ರೂ.ನಿಂದ 5,000 ರೂ. ವರೆಗೆ ನಿಶ್ಚಿತ ಪಿಂಚಣಿ ಲಭ್ಯವಿರುತ್ತದೆ. 18 ರಿಂದ 40 ವರ್ಷದೊಳಗಿನವರು ಈ ಯೋಜನೆಗೆ ಸೇರಬಹುದು.

66
ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana)

ಹೆಣ್ಣು ಮಕ್ಕಳ ಉನ್ನತ ಶಿಕ್ಷಣ ಮತ್ತು ಮದುವೆಯ ಖರ್ಚುಗಳಿಗಾಗಿ ಪೋಷಕರು ಹಣ ಉಳಿಸಲು ಇದು ಅತ್ಯುತ್ತಮ ಯೋಜನೆ. ಇದು ಸಣ್ಣ ಉಳಿತಾಯ ಯೋಜನೆಗಳಲ್ಲಿ ಅತಿ ಹೆಚ್ಚು ಬಡ್ಡಿ ನೀಡುವ ಯೋಜನೆಯಾಗಿದೆ. ಪ್ರಸ್ತುತ ವಾರ್ಷಿಕ 8.2% ಬಡ್ಡಿ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ಕೂಡ ಸಿಗುತ್ತದೆ. ಈ ಎಲ್ಲಾ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅಥವಾ ಅರ್ಜಿ ಸಲ್ಲಿಸಲು ಸಂಬಂಧಪಟ್ಟ ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ. ಈ ಸೌಲಭ್ಯಗಳನ್ನು ಪಡೆದು ನಿಮ್ಮ ಭವಿಷ್ಯವನ್ನು ಸುರಕ್ಷಿತವಾಗಿಸಿಕೊಳ್ಳಿ

Read more Photos on
click me!

Recommended Stories