ಆ್ಯಪಲ್ ಕಂಪನಿ ಐಫೋನ್ 15 ಸೀರಿಸ್ ಅನ್ನು ಬಿಡುಗಡೆ ಮಾಡಿದ್ದು, ಈ ಹಿನ್ನೆಲೆ ಐಫೋನ್ 14 ಬೆಲೆಯನ್ನು ಕಡಿಮೆ ಮಾಡಿದೆ. ಐಫೋನ್ 14 ಪ್ರೋ ಮತ್ತು ಐಫೋನ್ 14 ಪ್ರೋ ಮ್ಯಾಕ್ಸ್ ಮಾಡೆಲ್‌ಗಳ ಮಾರಾಟ ಸ್ಥಗಿತಗೊಳಿಸಿದ್ದರೂ, ಐಫೋನ್ 14 ಮತ್ತು ಐಫೋನ್ 14 ಪ್ಲಸ್ ಈ ಮೊದಲಿಗಿಂತ ಹೆಚ್ಚು ಕೈಗೆಟುಕುವ ದರದಲ್ಲಿದೆ.
ಇನ್ನು, ನೀವು ಐಫೋನ್ 15 ಬದಲು iPhone 14 ಅನ್ನು ಖರೀದಿಸಲು ಯೋಜಿಸುತ್ತಿದ್ದರೆ, ನೀವು ಅದನ್ನು ಆ್ಯಪಲ್ ಸ್ಟೋರ್‌ನಿಂದ ಆನ್‌ಲೈನ್‌ನಲ್ಲಿ 65,000 ರೂಗಳಿಗೆ ಸುಲಭವಾಗಿ ಖರೀದಿಸುವ ಮಾರ್ಗವಿದೆ. ಹೇಗೆ ಅಂತೀರಾ.. ಇಲ್ನೋಡಿ..
Apple iPhone 14 ಬೆಲೆ ಕಡಿತ
ಆ್ಯಪಲ್ ಐಫೋನ್ 14 ಅನ್ನು 79,900 ರೂಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಆದರೆ, ಐಫೋನ್ 15 ಸೀರಿಸ್ ಬಿಡುಗಡೆಯ ನಂತರ, ಆ್ಯಪಲ್ ಅಧಿಕೃತವಾಗಿ iPhone 14 ನಲ್ಲಿ 10 ಸಾವಿರ ರೂ. ಬೆಲೆ ಕಡಿತ ಘೋಷಿಸಿದೆ. ಇದು ಬೆಲೆಯನ್ನು 69,900 ರೂ. ಗೆ ತರುತ್ತದೆ. ಇದರರ್ಥ, ಅಧಿಕೃತ ಬೆಲೆ ಕಡಿತದೊಂದಿಗೆ ಫೋನ್ ಈಗಾಗಲೇ 70,000 ರೂ ಕ್ಕೂ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.
ಇದು ಐಫೋನ್ 14 ಪ್ಲಸ್‌ಗೆ ಸಹ ಅನ್ವಯಿಸುತ್ತದೆ. ಫೋನ್‌ನ ಅಧಿಕೃತ ಬಿಡುಗಡೆ ಬೆಲೆ 89,900 ರೂ. ಆಗಿದ್ದರೂ, ರಿಯಾಯಿತಿಯ ನಂತರ, 79,900 ರೂ. ಗಳಲ್ಲಿ ಲಭ್ಯವಿದೆ.
ಬ್ಯಾಂಕ್ ರಿಯಾಯಿತಿ
ಇದಲ್ಲದೇ, HDFC ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಖರೀದಿದಾರರು 4,000 ರೂ.ಗಳ ಹೆಚ್ಚುವರಿ ರಿಯಾಯಿತಿಯನ್ನು ಸಹ ಪಡೆಯಬಹುದು. ಹೆಚ್ಚುವರಿ 4,000 ರೂ. ರಿಯಾಯಿತಿ ಸೇರಿದಂತೆ, ಫೋನ್‌ನ ಬೆಲೆ 65,900 ರೂ. ಗೆ ಸಿಗುತ್ತದೆ.
ಅದೇ ರೀತಿ, ಐಫೋನ್ 14 ಪ್ಲಸ್ HDFC ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ರಿಯಾಯಿತಿಯ ನಂತರ 75,500 ರೂ. ಗೆ ಲಭ್ಯವಿರುತ್ತದೆ.
ಅಷ್ಟೇ ಅಲ್ಲದೆ, ಇದಕ್ಕೂ ಕಡಿಮೆ ಬೆಲೆಗೆ ಐಫೋನ್ 14 ಅನ್ನು ಖರೀದಿಸಲು ಬಯಸಿದರೆ, ನೀವು ಅದರ ಬೆಲೆಗಳನ್ನು ಅಮೆಜಾನ್ ಇಂಡಿಯಾ ವೆಬ್‌ಸೈಟ್, ಕ್ರೋಮಾ, ರಿಲಯನ್ಸ್ ಡಿಜಿಟಲ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇತರ ಆನ್‌ಲೈನ್ ಚಿಲ್ಲರೆ ಅಂಗಡಿಗಳಲ್ಲಿ ಪರಿಶೀಲಿಸಬಹುದು. ಬ್ಯಾಂಕ್ ರಿಯಾಯಿತಿಗಳು ಸೇರಿದಂತೆ 63,900 ರೂ.ಗಳಿಗೆ ನೀವು ಅದನ್ನು ಪಡೆಯಬಹುದು.