ಆ್ಯಪಲ್‌ ಕಂಪನಿಯಿಂದ ಗಣೇಶ ಚತುರ್ಥಿ ಆಫರ್, ಐಫೋನ್ ಬೆಲೆಯಲ್ಲಿ ಭಾರಿ ಕಡಿತ!

Published : Sep 14, 2023, 04:58 PM IST

ಮೇಡ್ ಇನ್ ಇಂಡಿಯಾ ಐಫೋನ್ 15 ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ಆ್ಯಪಲ್ ಕಂಪನಿ ಕೆಲ ಐಫೋನ್ ಮೇಲೆ ಬಂಪರ್ ಆಫರ್ ಘೋಷಿಸಿದೆ. ಸಾಲು ಸಾಲು ಹಬ್ಬದ ಪ್ರಯುಕ್ತ ಆ್ಯಪಲ್ ತನ್ನ ಆಯ್ದ ಐಫೋನ್ ಮೇಲೆ ಭಾರಿ ಬೆಲೆ ಕಡಿತ ಮಾಡಿದೆ. 

PREV
18
ಆ್ಯಪಲ್‌ ಕಂಪನಿಯಿಂದ ಗಣೇಶ ಚತುರ್ಥಿ ಆಫರ್, ಐಫೋನ್ ಬೆಲೆಯಲ್ಲಿ ಭಾರಿ ಕಡಿತ!

ಭಾರತದಲ್ಲೇ ಸಂಪೂರ್ಣವಾಗಿ ಉತ್ಪಾದನೆಯಾಗಿರುವ ಐಫೋನ್ 15 ಇತ್ತೀಚೆಗಷ್ಟೇ ಜಗತ್ತಿಗೆ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ಆ್ಯಪಲ್ ತನ್ನ ಹಿಂದಿನ ಜನರೇಶನ್ ಮಾಡೆಲ್ ಫೋನ್‌ಗಳ ಬೆಲೆ ಕಡಿತ ಮಾಡಿದೆ.

28

ಆ್ಯಪಲ್ ಐಫೋನ್ 14, ಹಾಗೂ 13 ಮಾಡೆಲ್‌ನಲ್ಲಿ ಎಲ್ಲಾ ವೇರಿಯೆಂಟ್ ಮೇಲೆ ಬೆಲೆ ಕಡಿತಗೊಳಿಸಿದೆ. ದುಬಾರಿ ಬೆಲೆಯ ಐಫೋನ್ ಇದೀಗ ಕೈಗೆಟುಕವ ದರದಲ್ಲಿ ಲಭ್ಯವಿದೆ. ಈ ಆಫರ್ ಕೆಲ ದಿನದಗಳ ಮಾತ್ರ ಇರಲಿದೆ.

38
ಆ್ಯಪಲ್ ಐಫೋನ್ 14 (128GB)

79,900 ರೂಪಾಯಿ ಬೆಲೆಯ ಆ್ಯಪಲ್ ಐಫೋನ್ 14 (128GB) ಫೋನ್ ಬೆಲೆ ಇದೀಗ 69,900 ರೂಪಾಯಿಗೆ ಲಭ್ಯವಿದೆ. ಬರೋಬ್ಬರಿ 10,000 ರೂಪಾಯಿ ಕಡಿತಗೊಳಿಸಲಾಗಿದೆ.  ಇನ್ನು ಆ್ಯಪಲ್ ಐಫೋನ್ 14 (256GB) ಫೋನ್ ಬೆಲೆಯಲ್ಲೂ 10,000 ರೂಪಾಯಿ ಕಡಿತಗೊಳಿಸಲಾಗಿದೆ.

48
ಆ್ಯಪಲ್ ಐಫೋನ್14 (512GB)

1,09,900 ರೂಪಾಯಿ ಬೆಲೆಯ 512GB ಸ್ಟೋರೇಜ್ ಸಾಮರ್ಥ್ಯದ ಆ್ಯಪಲ್ ಐಫೋನ್ 14 ಬೆಲೆ ಇದೀಗ 99,900 ರೂಪಾಯಿಗೆ ಲಭ್ಯವಿದೆ. ಈ ವೇರಿಯೆಟ್  ಮೇಲೂ 10,000 ರೂಪಾಯಿ ಕಡಿತಗೊಳಿಸಲಾಗಿದೆ.

58
ಆ್ಯಪಲ್ ಐಫೋನ್ 14 ಪ್ಲಸ್ (128GB)

89,900 ರೂಪಾಯಿ ಬೆಲೆಯಲ್ಲಿ ಬಿಡುಗಡೆಯಾದ  ಆ್ಯಪಲ್ ಐಫೋನ್ 14 ಪ್ಲಸ್ (128GB) ಫೋನ್ ಇದೀಗ 79,900 ರೂಪಾಯಿಗೆ  ಲಭ್ಯವಿದೆ. ಇನ್ನು 256GB ವೇರಿಯೆಂಟ್ ಫೋನ್ ಬೆಲೆಯಲ್ಲೂ 10,000 ರೂಪಾಯಿ ಕಡಿತಗೊಳಿಸಲಾಗಿದ್ದು, 89,900 ರೂಪಾಯಿಗೆ ಲಭ್ಯವಿದೆ

68
ಆ್ಯಪಲ್ ಐಫೋನ್ 14 ಪ್ಲಸ್(512GB)

512GB ಸ್ಟೋರೇಜ್ ಸಾಮರ್ಥ್ಯದ ಆ್ಯಪಲ್ ಐಫೋನ್ 14 ಪ್ಲಸ್ ಫೋನ್ ಬೆಲೆಯಲ್ಲಿ 10 ಸಾವಿರ ರೂ ಕಡಿತ ಮಾಡಲಾಗಿದೆ. ಈ ಮೊದಲು 1,19,900 ರೂಪಾಯಿ ಇದ್ದ ಬೆಲೆ ಇದೀಗ 1,09,900 ರೂಪಾಯಿಗೆ ಲಭ್ಯವಿದೆ.

78
ಆ್ಯಪಲ್ ಐಫೋನ್ 13 (128GB)

ಆ್ಯಪಲ್ ಐಫೋನ್  13(128GB)  ಫೋನ್ ಬೆಲೆಯಲ್ಲಿ 20,000 ರೂಪಾಯಿ ಕಡಿತಗೊಳಿಸಲಾಗಿದ್ದು, ಸದ್ಯ 59,900 ರೂಪಾಯಿಗೆ ಲಭ್ಯವಿದೆ. ಇನ್ನು 256GB ಸ್ಟೋರೇಜ್ ಫೋನ್ 89,900 ರೂಪಾಯಿ ಬದಲು 69,900 ರೂಪಾಯಿಗೆ ಲಭ್ಯವಿದೆ. 512GB ಫೋನ್ ಬೆಲೆಯಲ್ಲಿ 20,000 ರೂಪಾಯಿ ಕಡಿತಗೊಳಿಸಲಾಗಿದ್ದು, ಸದ್ಯ 89,900 ರೂಪಾಯಿಗೆ ಲಭ್ಯವಿದೆ.

88
ಆ್ಯಪಲ್ ಐಫೋನ್ 12 (64GB)

ಆ್ಯಪಲ್ ಐಫೋನ್ 12 (64GB) ಫೋನ್ ಮೇಲೆ 16,910 ರೂಪಾಯಿ ಕಡಿತಗೊಳಿಸಲಾಗಿದೆ. ಇದೀಗ 48,990 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಇನ್ನು 256GB ಸ್ಟೋರೇಜ್ ವೇರಿಯೆಂಟ್ ಫೋನ್ ಮೇಲೆ 15,910 ರೂಪಾಯಿ ರಿಯಾಯಿತಿ ನೀಡಲಾಗಿದ್ದು, 64,990 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ.
 

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories