ಕೈಗೆಟುಕುವ ದರದಲ್ಲಿ ಬಣ್ಣ ಬದಲಾಯಿಸುವ ರಿಯಲ್‌ಮಿ 14 ಸೀರಿಸ್ ಫೋನ್ ಲಾಂಚ್

Published : Jan 19, 2025, 03:51 PM IST

ನಿಮಗೆ ಫೋನ್ ಯಾವ ಬಣ್ಣದಲ್ಲಿ ಇರಬೇಕು, ಒಂದೊಂದು ದಿನ ಭಿನ್ನ ಬಣ್ಣದಲ್ಲಿ ಫೋನ್ ಇರಬೇಕು ಎಂದರೆ ಇಲ್ಲಿ ಆಯ್ಕೆ ಇದೆ. ಕಾರಣ ರಿಯಲ್‌ಮಿ ಇದೀಗ ಬಣ್ಣ ಬದಲಾಯಿಸುವ ಫೋನ್ ಬಿಡುಗಡೆ ಮಾಡಿದೆ. ಕೈಗೆಟುಕುವ ದರದಲ್ಲಿ ಈ ಫೋನ್ ಲಭ್ಯವಿದೆ    

PREV
15
ಕೈಗೆಟುಕುವ ದರದಲ್ಲಿ ಬಣ್ಣ ಬದಲಾಯಿಸುವ ರಿಯಲ್‌ಮಿ 14 ಸೀರಿಸ್ ಫೋನ್ ಲಾಂಚ್

ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆ ವಿಸ್ತಾರಗೊಂಡಿದೆ. ಜೊತೆಗೆ ಹಲವು ಆಯ್ಕೆಗಳಿವೆ. ಇದೀಗ ಕೈಗೆಟುಕುವ ದರದಲ್ಲಿ ಹಲವು ಫೀಚರ್ಸ್ ನೀಡುವ ಫೋನ್‌ಗಳಿಗೆ ಭಾರಿ ಬೇಡಿಕೆ ಇದೆ. ಈ ಪೈಕಿ ರಿಯಲ್‌ಮಿ ಭಾರತದಲ್ಲಿ ಉತ್ತಮ ಮಾರುಕಟ್ಟೆ ಹೊಂದಿದೆ. ಇದೀಗ ರಿಯಲ್‌ಮಿ ಬಳಕೆದಾರರ ಬೇಡಿಕೆಗೆ ತಕ್ಕಂತೆ ಹೊಸ ರಿಯಲ್ ಮಿ 14 ಪ್ರೊ ಸೀರಿಸ್  5ಜಿ ಸೀರಿಸ್ ಫೋನ್ ಹಾಗೂ  ರಿಯಲ್ ಮಿ ಬಡ್ಸ್ ವೈರ್ ಲೆಸ್ 5 ANC ಬಿಡುಗಡೆ ಮಾಡಿದೆ.

25

ಇದು ಬಣ್ಣ ಬದಲಾಯಿಸುವ ಫೋನ್ ಆಗಿದೆ. ರಿಯಲ್ ಮಿ 14 ಪ್ರೊ ಸೀರಿಸ್  5ಜಿ, ಮೆಚ್ಚುಗೆ ಪಡೆದ ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ನೊಂದಿಗೆ ಸಹ-ರಚಿಸಿದ ವಿಶ್ವದ ಮೊದಲ ಕೋಲ್ಡ್-ಸೆನ್ಸಿಟಿವ್ ಬಣ್ಣ ಬದಲಾಯಿಸುವ ವಿಶೇಷತೆ ಹೊಂದಿದೆ. ರಿಯಲ್ ಮಿ 14 ಪ್ರೊ + 5 ಜಿ  ಮೂರು ಸೊಗಸಾದ ಬಣ್ಣಗಳಲ್ಲಿ ಲಭ್ಯವಿದೆ:  ಪರ್ಲ್ ವೈಟ್, ಸ್ಯೂಡ್ ಗ್ರೇ, ಮತ್ತು ಭಾರತದ ವಿಶೇಷ ಬಣ್ಣ ರೂಪಾಂತರವಾದ ಬಿಕಾನೇರ್ ಪರ್ಪಲ್ ಮತ್ತು ಮೂರು ಸ್ಟೋರೇಜ್ ರೂಪಾಂತರಗಳನ್ನು  ಸಹ ಪರಿಚಯಿಸುತ್ತದೆ: 8 GB + 128 GB ಬೆಲೆ 27,999 ರೂ., 8 GB + 256 GB ಬೆಲೆ 29,999 ರೂ ಮತ್ತು 12 GB + 256 GB  ಬೆಲೆ ರೂ  30,999

35

ರಿಯಲ್ ಮಿ 14 ಪ್ರೊ 5 ಜಿ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ: ಪರ್ಲ್ ವೈಟ್, ಸ್ಯೂಡ್ ಗ್ರೇ, ಮತ್ತು  ಜೈಪುರ್ ಪಿಂಕ್ ಎಂಬ ಭಾರತದ ವಿಶೇಷ ಬಣ್ಣದ ರೂಪಾಂತರವನ್ನು ಸಹ ಪರಿಚಯಿಸುತ್ತದೆ, ಇದರ ಬೆಲೆ 8GB+128GB 22,999 ರೂ  ಮತ್ತು 8GB+256GB 24,999 ರೂ.

45

ರಿಯಲ್ ಮಿ ಬಡ್ಸ್ ವೈರ್ ಲೆಸ್ 5 ANC ಮೂರು ಸ್ಟೈಲಿಶ್ ಬಣ್ಣಗಳಲ್ಲಿ ಲಭ್ಯವಿದೆ: ಮಿಡ್ ನೈಟ್ ಬ್ಲ್ಯಾಕ್, ಟ್ವಿಲೈಟ್ ಪರ್ಪಲ್ ಮತ್ತು ಡಾನ್ ಸಿಲ್ವರ್; ಬೆಲೆ  1,799 ರೂ ಮತ್ತು ರಿಯಾಯಿತಿಯ ನಂತರ ಇದು 1,599 ರೂ.ಗೆ ಲಭ್ಯವಿದೆ.  ಜನವರಿ 23 ರಂದು ಮಧ್ಯಾಹ್ನ 12 ಗಂಟೆಯಿಂದ realme.com, ಫ್ಲಿಪ್‌ಕಾರ್ಟ್‌ , Amazon.in  ಮತ್ತು ಮೇನ್ ಲೈನ್ ಚಾನೆಲ್ ಗಳಲ್ಲಿ ಮಾರಾಟ ಪ್ರಾರಂಭವಾಗುತ್ತದೆ  

55

ರಿಯಲ್ ಮಿ 14 ಪ್ರೊ ಸರಣಿ 5 ಜಿ ಯ ಮೊದಲ ಮಾರಾಟವು ಜನವರಿ 23, ಮಧ್ಯಾಹ್ನ 12 ಗಂಟೆಯಿಂದ realme.com,  ಫ್ಲಿಪ್‌ಕಾರ್ಟ್‌, ಮತ್ತು ಮೇನ್ ಲೈನ್ ಚಾನೆಲ್ ಗಳಲ್ಲಿ  4000 ರೂ.ಗಳವರೆಗೆ ಅತ್ಯಾಕರ್ಷಕ ಕೊಡುಗೆಗಳೊಂದಿಗೆ ಪ್ರಾರಂಭವಾಗುತ್ತದೆ. ರಿಯಲ್ ಮಿ 14 ಪ್ರೊ ಸರಣಿಯು ಜನವರಿ 16, 2025 ರಂದು ಮಧ್ಯಾಹ್ನ 1:15 ರಿಂದ ಜನವರಿ 23, ಮಧ್ಯಾಹ್ನ 12:00 ರವರೆಗೆ ಮುಂಗಡ ಬುಕಿಂಗ್ ಗೆ ಲಭ್ಯವಿರುತ್ತದೆ.

Read more Photos on
click me!

Recommended Stories