ರಿಯಲ್‌ಮಿ 13 ಪ್ರೋ ಪ್ಲಸ್ ಫೋನ್ ಬಿಡುಗಡೆ, ಮೊದಲ ದಿನ ಖರೀದಿಸಿರೆ 7,000 ರೂ ಡಿಸ್ಕೌಂಟ್!

Published : Aug 31, 2024, 04:35 PM IST

ಭಾರತದಲ್ಲಿ ರಿಯಲ್‌ಮಿ 13 ಪ್ರೋ ಪ್ಲಸ್ ಪರ್ಪಲ್ ಫೋನ್ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಮಾರಾಟದ ಮೊದಲ ದಿನ ಖರೀದಿಸಿದರೆ 7,000 ರೂಪಾಯಿ ಡಿಸ್ಕೌಂಟ್ ಸಿಗಲಿದೆ.

PREV
18
ರಿಯಲ್‌ಮಿ 13 ಪ್ರೋ ಪ್ಲಸ್ ಫೋನ್ ಬಿಡುಗಡೆ, ಮೊದಲ ದಿನ ಖರೀದಿಸಿರೆ 7,000 ರೂ ಡಿಸ್ಕೌಂಟ್!

ರಿಯಲ್‌ಮಿ 13 ಪ್ರೋ 5ಜಿ ಫೋನ್ ಭಾರತದಲ್ಲಿ ಈಗಾಗೇ ಸಂಚಲನ ಮೂಡಿಸಿದೆ. ಇದೀಗ ರಿಯಲ್‌ಮಿ ಮೊನೆಟ್ ಪರ್ಪಲ್ ಬಣ್ಣದಲ್ಲಿ ಹೊಸ ಫೋನ್ ಬಿಡುಗಡೆ ಮಾಡಿದೆ.  

28

ರಿಯಲ್‌ಮಿ 13 ಪ್ರೋ 5ಜಿ ಮೊನೆಟ್ ಗೋಲ್ಡ್ ಹಾಗೂ ಎಮರಾಲ್ಡ್ ಗ್ರೀನ್ ಜೊತೆಗೆ ಇದೀಗ ಮೊನೆಟ್ ಪರ್ಪಲ್ ಪೋನ್ ಲಭ್ಯವಾಗಿದೆ. ಮಾರಾಟದ ಮೊದಲ ದಿನ ಖರೀದಿಸಿದರೆ 7,000 ರೂಪಾಯಿ ಕಡಿತಗೊಳ್ಳಲಿದೆ.
 

38
realme 13 pro series 5g

ರಿಯಲ್‌ಮಿ 13 ಪ್ರೋ 5ಜಿ ಮೊನೆಟ್ ಪರ್ಪೆಲ್ ಫೋನ್ ಮಾರಾಟ ಅಂದರೆ ಸೆಪ್ಟೆಂಬರ್ 2ರ ಮಧ್ಯಾಹ್ನದಿಂದ ಮಧ್ಯರಾತ್ರಿ ಒಳಗೆ ಖರೀದಿಸುವ ಗ್ರಾಹಕರಿಗೆ ಡಿಸ್ಕೌಂಟ್ ಆಫರ್ ಸಿಗಲಿದೆ.

48

ಮೊದಲ ದಿನ ಖರೀದಿಸುವ ಗ್ರಾಹಕರಿ ಬ್ಯಾಂಕ್ ಆಫರ್ ಆಗಿ 3,000 ರೂಪಾಯಿ ಹಾಗೂ ಎಕ್ಸ್‌ಚೇಂಜ್ ಆಫರ್ ಆಗಿ 4,000 ರೂಪಾಯಿ ಲಭ್ಯವಿದೆ. ಈ ಮೂಲಕ ಒಟ್ಟು 7,000 ರೂಪಾಯಿ ಡಿಸ್ಕೌಂಟ್ ಸಿಗಲಿದೆ.

58

ಸೆಪ್ಟೆಂಬರ್ 3ರಿಂದ ಎಕ್ಸ್‌ಚೇಂಜ್ ಆಫರ್ 4,000 ರೂಪಾಯಿ ಮಾತ್ರ ಲಭ್ಯವಿರಲಿದೆ. ಇನ್ನುಳಿದಂತೆ ವೈಯುಕ್ತಿಕ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಆಫರ್  ಷರತ್ತುಗಳಂತೆ ಅನ್ವಯವಾಲಿದೆ.

68

ರಿಯಲ್‌ಮಿ 13 ಪ್ರೋ 5ಜಿ ಮೊನೆಟ್ ಪರ್ಪೆಲ್ ಫೋನ್ 3 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. 8ಜಿಬಿ ಹಾಗೂ 256 ಜಿಬಿ ಫೋನ್ ಬೆಲೆ 32,999 ರೂಪಾಯಿ.

78

12ಜಿಬಿ ಹಾಗೂ 256 ಜಿಬಿ ಫೋನ್ ಬೆಲೆ 34,999 ರೂಪಾಯಿ ಹಾಗೂ 12ಜಿಬಿ, 512 ಜಿಬಿ ಫೋನ್ ಬೆಲೆ 36,999 ರೂಪಾಯಿ. ಈಗಾಗಲೇ ಲಭ್ಯವಿರುವ ಗೋಲ್ಡ್ ಹಾಗೂ ಗ್ರೀನ್ ಫೋನ್ ಬೆಲೆಯಯಲ್ಲೂ ಯಾವುದೇ ವ್ಯತ್ಯಾಸವಿಲ್ಲ.

88

ರಿಯಲ್‌ಮಿ ಭಾರತದಲ್ಲಿ ಮಾರುಕಟ್ಟೆ ವಿಸ್ತರಿಸುತ್ತಿದೆ. ಕೈಗೆಟುಕುವ ದರದಲ್ಲಿ ಹಲವು ಫೀಚರ್ಸ್ ಫೋನ್ ಬಿಡುಗಡೆ ಮಾಡುತ್ತಿದೆ. ಚೀನಾ ಕಂಪನಿ ಇದೀಗ ಭಾರತದಲ್ಲಿ ಗಟ್ಟಿಯಾಗಿ ನೆಲೆಯೂರುತ್ತಿದೆ.

Read more Photos on
click me!

Recommended Stories