ಕೇವಲ 13,499 ರೂಗೆ ಒಪ್ಪೊ K14x ಫೋನ್ ಬಿಡುಗಡೆ; ಡಿಸ್ಕೌಂಟ್, ಕ್ಯಾಶ್‌ಬ್ಯಾಕ್ ಸೇರಿ ಭರ್ಜರಿ ಆಫರ್

Published : Feb 11, 2026, 08:35 PM IST

ಕೇವಲ 13,499 ರೂಗೆ ಒಪ್ಪೊ K14x ಫೋನ್ ಬಿಡುಗಡೆ; ಡಿಸ್ಕೌಂಟ್, ಕ್ಯಾಶ್‌ಬ್ಯಾಕ್ ಸೇರಿ ಭರ್ಜರಿ ಆಫರ್ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ನೋ ಕಾಸ್ಟ್ ಇಎಂಐ ಸೇರಿದಂತೆ ಇತರ ಕೆಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. 

PREV
15
ಬೆಸ್ಟ್ ಸ್ಮಾರ್ಟ್‌ಫೋನ್

ಭಾರತದಲ್ಲಿ ಸ್ಮಾರ್ಟ್‌ಫೋನ್ ಕ್ರಾಂತಿಯಾಗಿ ಹಲವು ವರ್ಷಗಳೇ ಉರುಳಿದೆ. ಇದೀಗ ಅತ್ಯಾಧುನಿಕ ತಂತ್ರಜ್ಞಾನ, ಅತೀ ಕಡಿಮೆ ಬೆಲೆ, ಗರಿಷ್ಠ ಫೀಚರ್ಸ್, ಗರಿಷ್ಠು ಸುರಕ್ಷತೆ ಫೋನ್‌ಗಳ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಇದೀಗ ಒಪ್ಪೋ ಅತೀ ಕಡಿಮೆ ಬೆಲೆಗೆ ಅತ್ಯಾಧುನಿಕ ತಂತ್ರಜ್ಞಾನ, ಅತ್ಯುತ್ತಮ ಫೀಚರ್ಸ್, ಉತ್ತಮ ಸ್ಟೋರೇಜ್ ಹೊಂದಿರುವ K14x 5G ಫೋನ್ ಬಿಡುಗಡೆ ಮಾಡಿದೆ. ಇದರ ಜೊತೆಗೆ ಭರ್ಜರಿ ಆಫರ್ ಘೋಷಿಸಿದೆ.

25
ಆರಂಭಿಕ ಬೆಲೆ ರೂ.13,499

ಒಪ್ಪೊ K14x 5G ಸ್ಮಾರ್ಟ್‌ಫೋನ್ ಆರಂಭಿಕ ಬೆಲೆ 13,499 ರೂಪಾಯಿ. ಇದರ ಜೊತೆಗೆ OPPO K14x 5G ಸ್ಮಾರ್ಟ್‌ಫೋನ್ 4GB + 128GB ವೇರಿಯಂಟ್‌ಗೆ ₹14,999 ಮತ್ತು 6GB + 128GB ವೇರಿಯಂಟ್‌ಗೆ ₹16,999 ಬೆಲೆಯಲ್ಲಿ ಲಭ್ಯವಿದೆ. ಈ ಫೋನ್ ಫೆಬ್ರವರಿ 16, 2026 ರಿಂದ ಮಧ್ಯಾಹ್ನ 12 ಗಂಟೆಗೆ OPPO e-store ಮತ್ತು ಫ್ಲಿಪ್ ಕಾರ್ಟ್ ನಲ್ಲಿ ಖರೀದಿಗೆ ಲಭ್ಯವಾಗಲಿದೆ. ಐಸಿ ಬ್ಲೂ ಮತ್ತು ಪ್ರಿಸ್ಮ್ ವೈಲೆಟ್ ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

35
ಒಪ್ಪೋ ಹೊಸ ಫೀಚರ್

6500mAh ಬ್ಯಾಟರಿ, 45W ಫಾಸ್ಟ್ ಚಾರ್ಜಿಂಗ್, 120Hz ಡಿಸ್ಪ್ಲೇ, MediaTek Dimensity 6300 ಪ್ರೊಸೆಸರ್, 50MP ಎಐ ಕ್ಯಾಮೆರಾ ಮತ್ತು ಕಲರ್ ಓಎಸ್ 15 ಇದರ ವಿಶೇಷತೆ. ಈ ಫೋನ್ ಪವರ್, ಕಾರ್ಯಕ್ಷಮತೆ ಮತ್ತು ಸ್ಮೂತ್ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ — ಇದು ದಿನವಿಡೀ ಚಿಂತೆಯಿಲ್ಲದ ಫೋನ ಬಳಕೆ ಅನುಭವ ನೀಡುವ OPPO ಭರವಸೆಯನ್ನು ತೋರಿಸುತ್ತದೆ.ವಿದ್ಯಾರ್ಥಿಗಳು, ಹೊಸದಾಗಿ ಉದ್ಯೋಗ ಆರಂಭಿಸಿರುವವರು, ಗೇಮರ್ಸ್ ಮತ್ತು ಮೌಲ್ಯಕ್ಕೆ ಮಹತ್ವ ನೀಡುವ ಬಳಕೆದಾರರಿಗೆ ಈ ಫೋನ್ ವಿಶೇಷವಾಗಿ ರೂಪಿಸಲಾಗಿದೆ.

45
ಹೊಸ ಫೋನ್ ಆಫರ್

OPPO K14x 5Gನ ಪ್ರೀ-ಬುಕಿಂಗ್ ಇಂದಿನಿಂದಲೇ ಆರಂಭವಾಗಿದ್ದು, ಗ್ರಾಹಕರಿಗೆ ಮುಂಚಿತವಾಗಿ ಫೋನ್ ಪಡೆಯುವ ಅವಕಾಶ ನೀಡುತ್ತಿದೆ.ಖರೀದಿಸುವ ಗ್ರಾಹಕರು 4GB ಮತ್ತು 6GB ವೇರಿಯಂಟ್‌ಗಳ ಮೇಲೆ ₹1,500 ತಕ್ಷಣದ ಡಿಸ್ಕೌಂಟ್ ಪಡೆಯಬಹುದು. ಈ ಆಫರ್ ಮಾರಾಟದ ದಿನ ಮಾತ್ರ ಆಯ್ದ ಬ್ಯಾಂಕ್ ಆಫರ್‌ಗಳೊಂದಿಗೆ ಲಭ್ಯವಿದ್ದು, ಜೊತೆಗೆ 3 ತಿಂಗಳ ನೋ-ಕಾಸ್ಟ್ EMI ಆಯ್ಕೆಯೂ ಇರುತ್ತದೆ. ಈ ಡಿಸ್ಕೌಂಟ್ ನಂತರ ಫೋನ್‌ನ ಪರಿಣಾಮಕಾರಿ ಬೆಲೆ 4GB ವೇರಿಯಂಟ್‌ಗೆ ₹13,499 ಮತ್ತು 6GB ವೇರಿಯಂಟ್‌ಗೆ ₹15,499 ಆಗುತ್ತದೆ.

55
ಆಲ್‌ರೌಂಡರ್ ಫೋನ್

ಈ ಫೋನ್ ಹೆಚ್ಚು ಸಮಯ ಬಳಕೆ ಮಾಡಿದರೂ ಬಿಸಿಯಾಗುವ ತಲೆಬಿಸಿ ಇಲ್ಲ. ಹೆವಿ ಯೂಸೇಜ್ ಮತ್ತು ರಿಯಲ್-ಲೈಫ್ ಮಲ್ಟಿಟಾಸ್ಕಿಂಗ್ ಗೆ ಸೂಕ್ತವಾಗಿರುವ OPPO K14x 5G, ಬಳಕೆದಾರರು ದಿನವಿಡೀ ಕನೆಕ್ಟ್ ಆಗಿ ಮತ್ತು ಆನಂದಿಸುವಂತೆ ಸಹಾಯ ಮಾಡುತ್ತದೆ. 15,000 ಒಳಗಿನ ಬೆಲೆ ವಿಭಾಗದಲ್ಲಿ ನಂಬಿಗಸ್ತ ಆಲ್-ರೌಂಡರ್ ಎಂದು ಒಪ್ಪೋ ಹೇಳಿದೆ.

ಆಲ್‌ರೌಂಡರ್ ಫೋನ್

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories