ಯಾವುದೇ ಹೊಸ ಆಪ್ ಅನ್ನು ನಮ್ಮ ಮೊಬೈಲ್‌ನಲ್ಲಿ ಬಳಸುವಾಗ, ಅದು ಕೆಲವು ಅನುಮತಿಗಳನ್ನು ಕೇಳುತ್ತದೆ. ಸಂಪರ್ಕಗಳು, ಸಂದೇಶಗಳನ್ನು ಪ್ರವೇಶಿಸಲು ಅನುಮತಿ ಕೇಳಬಹುದು. ಫೋಟೋಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ಅನುಮತಿ ಕೇಳಬಹುದು. ಈ ಅನುಮತಿಗಳನ್ನು ನೀಡದೆ ಆಪ್ ಸ್ಥಾಪನೆಯಾಗುವುದಿಲ್ಲ. ಹಾಗಾಗಿ, ನಾವು ಆತುರದಿಂದ ಅಥವಾ ಅಜಾಗರೂಕತೆಯಿಂದ ಎಲ್ಲಾ ಅನುಮತಿಗಳನ್ನು ನೀಡಿಬಿಡುತ್ತೇವೆ. ಇದು ನಮ್ಮ ವೈಯಕ್ತಿಕ ಡೇಟಾವನ್ನು ಅಪಾಯಕ್ಕೆ ಸಿಲುಕಿಸಬಹುದು.