ಪ್ರಯಾಣದ ವೇಳೆ ಮೊಬೈಲ್ ಚಾರ್ಜರ್ ಮರೆತ್ರೆ ಈ ಟಿಪ್ಸ್ ಫಾಲೋ ಮಾಡಿ

First Published | May 18, 2024, 4:43 PM IST

ಇಂದು ಮೊಬೈಲ್ ಜೀವನದ ಒಂದು ಭಾಗವಾಗಿದೆ. ಎಲ್ಲೇ ಹೋದ್ರೂ ಕೈಯಲ್ಲಿ ಮೊಬೈಲ್ ಇರಲೇಬೇಕು. ಮೊಬೈಲ್ ಇಲ್ಲದ ಜೀವನವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.

ಇಂದು ಯಾರ ಕೈಯಲ್ಲೂ ನೋಡಿದರೂ ಮೊಬೈಲ್ ಕಾಣಿಸುತ್ತದೆ. ಹುಟ್ಟಿದ ಮಗುವಿನ ಕೈಗೂ ಕೆಲ ಪೋಷಕರು ಮೊಬೈಲ್ ನೀಡುತ್ತಾರೆ. ಆರಂಭದಲ್ಲಿ ಮೊಬೈಲ್ ಬಳಕೆಗೆ ಹಿಂದೇಟು ಹಾಕ್ತಿದ್ದ ಹಿರಿಯ ಜೀವಗಳು ಇಂದು ಒಂದು ರೀತಿಯಲ್ಲಿ ಅಡಿಕ್ಟ್ ಆಗುತ್ತಿದ್ದಾರೆ.

ಕೆಲವರಿಗೆ ಮೊಬೈಲ್ ಇಲ್ಲದೇ ಇರೋದಕ್ಕೆ ಆಗಲ್ಲ. ಕಾರಣಾಂತರಗಳಿಂದ ಮೊಬೈಲ್ ರಿಪೇರಿ ಬಂದರಂತೂ ಏನು ಮಾಡಬೇಕು ಅಂತ ತೋಚಲ್ಲ. ಇಂದು ಊಟವನ್ನು ಸಹ ಮೊಬೈಲ್‌ನಲ್ಲಿಯೇ ಬುಕ್ ಮಾಡುತ್ತಾರೆ.  ಬಸ್ ಟಿಕೆಟ್ ಬುಕ್ಕಿಂಗ್, ಹಣ ಪಾವತಿ, ಕಚೇರಿ ಕೆಲಸಕ್ಕೂ ಮೊಬೈಲ್ ಮೇಲೆ ಅವಲಂಬನೆ ಆಗಿದ್ದೇವೆ.

Latest Videos


ಈ ಕಾರಣಗಳಿಂದ ಮೊಬೈಲ್ ಚಾಲ್ತಿಯಲ್ಲಿರುವಂತೆ  ನೋಡಿಕೊಳ್ಳಬೇಕಾಗುತ್ತದೆ. ದೀರ್ಘ ಪ್ರಯಾಣದ ವೇಳೆ ಮೊಬೈಲ್ ಚಾರ್ಜರ್ ಮರೆತು ಹೋದರೆ ದಾರಿಯೇ ಕಾಣದಂತಾಗುತ್ತದೆ. ಇಂತಹ ಸಮಯದಲ್ಲಿ ಏನು ಮಾಡಬೇಕು ಎಂದು ನಾವು ನಿಮಗೆ ಹೇಳುತ್ತಿದ್ದೇವೆ.

ಈ ಕೆಳಗಿನ ಟಿಪ್ಸ್ ಫಾಲೋ ಮಾಡಿದ್ರೆ ಮೊಬೈಲ್ ಚಾರ್ಜ್ ಮಾಡಿಕೊಳ್ಳಬಹುದು. ಈ ಹ್ಯಾಕ್‌ಗಳನ್ನು ಬಳಸಿದರೆ ಮೊಬೈಲ್ ಚಾರ್ಜರ್ ತೆಗೆದುಕೊಂಡು ಹೋಗುವ ಪ್ರಮೇಯವೇ ಬರಲ್ಲ. ದೀರ್ಘ ಪ್ರಯಾಣದಲ್ಲಿ ಮೊಬೈಲ್ ಹೇಗೆ ಚಾರ್ಜ್ ಮಾಡಬೇಕು ಎಂಬುದರ ಕೆಲ ಮಹತ್ವದ ಸಲಹೆಗಳು ಇಲ್ಲಿವೆ.

1.ಇಂದು ಬಹುತೇಕ ಎಲ್ಲರ ಮೊಬೈಲ್‌ಗಳು ಸಿ ಪಿನ್ ಚಾರ್ಜರ್ ವ್ಯವಸ್ಥೆಯನ್ನು ಹೊಂದಿವೆ. ಆದ್ದರಿಂದ ಮೊಬೈಲ್ ಬಕ್ಕಲ್ ಇಲ್ಲದಿದ್ರೂ ಕೇಬಲ್‌ ಇದ್ರೆ ಸರಳವಾಗಿ ಚಾರ್ಜ್ ಮಾಡಿಕೊಳ್ಳಬಹುದು. ನಿಮ್ಮ ಬಳಿ ಲ್ಯಾಪ್‌ಟಾಪ್ ಇದ್ರೆ ಕೇಬಲ್ ಸಹಾಯದಿಂದ ಚಾರ್ಜ್ ಮಾಡಬಹುದು.

2.ದೀರ್ಘ ಪ್ರಯಾಣದ ವೇಳೆ ಹೋಟೆಲ್‌ನಲ್ಲಿ ಉಳಿದುಕೊಂಡಿದ್ರೆ ರೂಮ್‌ನಲ್ಲಿ ಸ್ಮಾರ್ಟ್ ಟಿವಿ ಇದ್ದೇ ಇರುತ್ತದೆ. ಟಿವಿಗಳಿಗೆ ಕೇಬಲ್ ಕನೆಕ್ಟ್ ಮಾಡುವ ವ್ಯವಸ್ಥೆ ಇರುತ್ತದೆ. ಟಿವಿಗಳಿಗೆ ಕೇಬಲ್ ಹಾಕಿ ಮೊಬೈಲ್ ಚಾರ್ಜ್ ಮಾಡಬಹುದು. ಇಂತಹ ಸಮಯದಲ್ಲಿ ಸ್ಮಾರ್ಟ್ ಟಿವಿ ಇರೋ ರೂಮ್‌ಗಳನ್ನು ಬುಕ್ ಮಾಡಿಕೊಳ್ಳುವುದು ಉತ್ತಮ.

3.ಒಂದು ವೇಳೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ರೆ ಸೀಟ್ ಮುಂದಿನ ಸ್ಕ್ರೀನ್‌ಗೂ ಕೇಬಲ್ ಪಾಯಿಂಟ್ ಇರುತ್ತದೆ. ಈ ವ್ಯವಸ್ಥೆ ಕೆಲ ವಿಮಾನಗಳಲ್ಲಿ ಮಾತ್ರ ಲಭ್ಯ ಇರುತ್ತದೆ. ಒಂದು ವೇಳೆ ನಿಮಗೆ ಎಮೆರ್ಜೆನ್ಸಿ ಇದ್ರೆ ವಿಮಾನ ಸಿಬ್ಬಂದಿ ಸಹಾಯ ಮಾಡುತ್ತಾರೆ.

mobile

4.ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಸಹ ಪ್ರಯಾಣಿಸುತ್ತಿದ್ದರೆ ಸಹ ಪ್ರಯಾಣಿಕರಿಂದ ಚಾರ್ಜರ್ ಕೇಳಿ ಪಡೆದುಕೊಳ್ಳಬಹುದು. ಇದೀಗ ಎಲ್ಲಾ ರೈಲುಗಳಲ್ಲಿ ಚಾರ್ಜಿಂಗ್ ಪಾಯಿಂಟ್ ಅಳವಡಿಕೆ ಮಾಡಲಾಗಿರುತ್ತದೆ. ಬಸ್‌ಗಳಲ್ಲಿಯೂ ಚಾರ್ಜಿಂಗ್ ಪಾಯಿಂಟ್ ಇರುತ್ತದೆ. ಕೆಲವರು  ಪವರ್ ಬ್ಯಾಂಕ್ ಸಹಿತ ಪ್ರಯಾಣಿಸುತ್ತಿರುತ್ತಾರೆ. ಇಂತಹ ಪ್ರಯಾಣಕರಿಂದ ಸಹಾಯ ಪಡೆದುಕೊಳ್ಳಬಹುದು. 

mobile addiction.

5.ಚಾರ್ಜರ್ ಇಲ್ಲದೇ  ವೇಳೆ ಇರೋ ಬ್ಯಾಟರಿಯನ್ನು ಸೇವ್ ಮಾಡಿಕೊಳ್ಳುವುದು ಉತ್ತಮ. ಈ ಸಮಯದಲ್ಲಿ ನೀವು ಮೊಬೈಲ್ ಡೇಟಾ ಆಫ್ ಮಾಡೋದರಿಂದ ಬ್ಯಾಟರಿ ಸೇವ್ ಮಾಡಬಹುದು. ಈ ಸಮಯದಲ್ಲಿ ವಿಡಿಯೋ ನೋಡಬಾರದು, ಗೇಮ್ ಆಡಬಾರದು. ಈ ರೀತಿ ಮಾಡಿದ್ರೆ ಬ್ಯಾಟರಿ ಲೋ ಆಗುತ್ತದೆ.

click me!