ಐಫೋನ್ ನೀರಿನಲ್ಲಿ ಮುಳುಗಿದರೆ ಅಕ್ಕಿಯೊಳಗಿಡಬೇಡಿ, ಆ್ಯಪಲ್‌ನಿಂದ ಸಿಂಪಲ್ ಟಿಪ್ಸ್!

First Published Feb 21, 2024, 4:57 PM IST

ಫೋನ್ ನೀರಿನಲ್ಲಿ ಮುಳುಗಿದರೆ, ಫೋನ್ ಒಳಗೆ ನೀರು ಸೇರಿಕೊಂಡಾಗ ಏನು ಮಾಡಬೇಕು? ಬಹುತೇಕರು ಅಕ್ಕಿಯಲ್ಲಿ ಫೋನ್ ಮುಚ್ಚಿಡುವ ಪದ್ಧತಿ ಬೆಳೆಸಿಕೊಂಡಿರುತ್ತಾರೆ. ಆದರೆ ಇದು ತಪ್ಪು ಎನ್ನುತ್ತಿದೆ ಆ್ಯಪಲ್ ಐಫೋನ್. ಇಷ್ಟೇ ಅಲ್ಲ ಮನೆಯಲ್ಲೇ ಮಾಡಬಹುದಾದ ಪರಿಹಾರ ಸೂತ್ರವನ್ನು ಆ್ಯಪಲ್ ಬಿಡುಗಡೆ ಮಾಡಿದೆ.

ಸ್ವಿಮ್ಮಿಂಗ್ ಪೂಲ್‌ನಲ್ಲಿ, ಬಾತ್ ರೂಂನಲ್ಲಿ ಅಥವಾ ಅಚಾನಕ್ಕಾಗಿ ಫೋನ್ ನೀರಿನೊಳಗೆ ಬಿದ್ದಾಗ ಹೆಚ್ಚಾಗಿ ಅಕ್ಕಿಯೊಳಗೆ ಇಟ್ಟು ಫೋನ್ ಒಳಗೆ ಸೇರಿರುವ ನೀರನ್ನು ಡ್ರೈ ಮಾಡಲು ಮುಂದಾಗುವುದು ಸಹಜ. 

ಭಾರತದಲ್ಲಿ ಬಹುತೇಕರು ಫೋನ್ ಒಳಗೆ ನೀರು ಸೇರಿಕೊಂಡಾಗ ಮಾಡುವ ಮೊದಲ ಕೆಲಸವೇ ಅಕ್ಕಿಯೊಳಗಿಟ್ಟು ಬಿಸಿ ಮಾಡುವುದು. ಆದರೆ ಈ ವಿಧಾನ ತಪ್ಪು ಎಂದು ಆ್ಯಪಲ್ ಹೇಳಿದೆ.
 

ಐಫೋನ್ ಒಳಗೆ ನೀರು ಸೇರಿದರೆ ಅಕ್ಕಿಯೊಳಗಿಟ್ಟು ಡ್ರೈ ಮಾಡುವ ಪದ್ಧತಿಗೆ ಅಂತ್ಯಹಾಡಿ. ಇದರಿಂದ ಐಫೋನ್ ಮತ್ತಷ್ಟು ಡ್ಯಾಮೇಜ್ ಆಗಲಿದೆ ಎಂದು ಆ್ಯಪಲ್ ಹೇಳಿದೆ. ಇದಕ್ಕಾಗಿ ಪರಿಹಾರ ಸೂತ್ರವನ್ನೂ ನೀಡಿದೆ.

ನೀರು ಸೇರಿರುವ ಐಫೋನ್ ಅಕ್ಕಿಯಲ್ಲಿಟ್ಟರೆ, ಅಕ್ಕಿ ಕಾಳಿನ ಸಣ್ಣ ಕಣಗಳು ಫೋನ್ ಒಳಗೆ ಸೇರಿಕೊಳ್ಳಲಿದೆ. ಒಂದೇ ಸಮನೆ ಹೆಚ್ಚುವರಿ ಶಾಖ ಹಾಗೂ ಅಕ್ಕಿಯೊಳಗೆ ಗಾಳಿಯಾಡದೇ ಕಾರಣ ಐಫೋನ್ ಸರಿಪಡಿಸಲಾಗದ ಸಮಸ್ಯೆಗೆ ಕಾರಣವಾಗಲಿದೆ ಎಂದು ಆ್ಯಪಲ್ ಹೇಳಿದೆ.

ನೀರು ಸೇರಿದ ಐಫೋನ್‌ಗಳನ್ನು 30 ನಿಮಿಷ ನೀರು ಸೋರಿ ಹೋಗುವಂತೆ ಇಡಬೇಕು. ಆದರೆ ಬಿಸಿಲಿನಲ್ಲಿ ಇಡಬಾರದು. ಸರಿಯಾಗಿ ಗಾಳಿಯಾಡುವ ಪ್ರದೇಶದಲ್ಲಿಡಬೇಕು. ಕನಿಷ್ಠ 30 ನಿಮಿಷ ಐಫೋನ್ ಇಡಬೇಕು. ಬಳಿಕ ಚಾರ್ಜಿಂಗ್ ಪ್ರಯತ್ನಿಸಿ ನೋಡಿ.
 

ಒಂದು ವೇಳೆ ಚಾರ್ಜ್ ಆಗದಿದ್ದರೆ, ಅಥವಾ ನೀರು ಇದ್ದರೆ  24 ಗಂಟೆಗಳ ಕಾಲ ಡ್ರೈಆಗಲು ಫೋನ್ ಇಡಬೇಕು. ನೆರಳಿನಲ್ಲಿಟ್ಟು ಫೋನ್ ಡ್ರೈ ಮಾಡಬೇಕು. ಒಂದು ದಿನದಲ್ಲಿ ಬಹುತೇಕ ಫೋನ್ ಡ್ರೈ ಆಗುವ ಸಾಧ್ಯತೆ ಇದೆ.
 

ಫೋನ್ ಚಾರ್ಜಿಂಗ್ ಸ್ಲಾಟ್‌ನಲ್ಲಿ ನೀರು ಇಲ್ಲದಿರುವಂತೆ ಪರಿಶೀಲಿಸಿ ಚಾರ್ಜಿಂಗ್ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಫೋನ್ ಮತ್ತೆ ಕಾರ್ಯನಿರ್ವಹಿಸುವ ಸಾಧ್ಯತೆ ಹೆಚ್ಚು. 
 

ಈ ಪ್ರಯತ್ನಗಳಲ್ಲಿ ಫೋನ್ ಕಾರ್ಯನಿರ್ವಹಿಸದಿದ್ದರೆ ಸ್ಥಳೀಯ ಅಧಿಕೃತ ಡೀಲರ್ ಬಳಿ ತೆರಳಿ ಪರಿಶೀಲಿಸಿ ಎಂದು ಆ್ಯಪಲ್ ಐಫೋನ್ ತನ್ನ ಗ್ರಾಹಕರಿಗೆ ಮಾರ್ಗಸೂಚಿ ಹೊರಡಿಸಿದೆ.

click me!