ಆ್ಯಪಲ್ ಐಫೋನ್ ಸೆಪ್ಟೆಂಬರ್ ತಿಂಗಳಲ್ಲೇ ಬಿಡುಗಡೆ ಮಾಡುವುದೇಕೆ? ಸೀಕ್ರೆಟ್ ಬಹಿರಂಗ!

First Published | Sep 6, 2023, 10:48 PM IST

ಭಾರತ ಸೇರಿದಂತೆ ವಿಶ್ವದ  ಬಹುತೇಕ ದೇಶದಲ್ಲಿನ ಸ್ಮಾರ್ಟ್‌ಫೋನ್ ಪ್ರಿಯರು, ಗ್ಯಾಜೆಟ್ ಪ್ರಿಯರು ಸೆಪ್ಟೆಂಬರ್ ತಿಂಗಳು ಬಂದಾಗ ಅಲರ್ಟ್ ಆಗುತ್ತಾರೆ. ಕಾರಣ ಆ್ಯಪಲ್ ಐಫೋನ್ ಸೇರಿದಂತೆ ಇತರ ಪಮುಖ ಪ್ರಾಡಕ್ಟ್‌ಗಳು ಸೆಪ್ಟೆಂಬರ್  ತಿಂಗಳಲ್ಲೇ ಬಿಡುಗಡೆಯಾಗುತ್ತಿದೆ. ಆ್ಯಪಲ್ ಪ್ರತಿ ಭಾರಿ ಐಫೋನ್ ಬಿಡುಗಡೆಯನ್ನು ಸೆಪ್ಟೆಂಬರ್ ತಿಂಗಳಲ್ಲೇ ಮಾಡುವುದೇಕೆ?

ವಿಶ್ವದ ಅತೀ ಹೆಚ್ಚು ಬೇಡಿಕೆ ಸ್ಮಾರ್ಟ್‌ಫೋನ್ ಹಾಗೂ ಗ್ಯಾಜೆಟ್ಸ್ ಅನ್ನೋ ಹೆಗ್ಗಳಿಕೆಗೆ ಆ್ಯಪಲ್ ಕಂಪನಿ ಪಾತ್ರವಾಗಿದೆ.  ಗುಣಮಟ್ಟ, ಸುರಕ್ಷತೆ ಸೇರಿದಂತೆ ಹಲವು ವಿಚಾರಗಳಲ್ಲಿ ಐಫೋನ್ ಮುಂಚೂಣಿಯಲ್ಲಿದೆ.

ಆ್ಯಪಲ್ ಹೊಸ ಹೊಸ ಐಫೋನ್‌ಗಳನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ತನ್ನ ಬೇಡಿಕೆ ಹೆಚ್ಚಿಸಿಕೊಳ್ಳುತ್ತಲೇ ಬಂದಿದೆ. ಆಧರೆ ಪ್ರತಿ ಬಾರಿ ಐಫೋನ್‌ಗಳು ಸೆಪ್ಟೆಂಬರ್ ತಿಂಗಳಲ್ಲೇ ಬಿಡುಗಡೆಯಾಗುತ್ತದೆ. ಇದರ ಹಿಂದೆ ಕೆಲ ಕಾರಣಗಳೂ ಇವೆ.

Tap to resize

ಹಬ್ಬ, ರಜಾದಿನದ ಲಾಭ; ಪ್ರಮುಖವಾಗಿ  ಕ್ರಿಸ್ಮಸ್ ಹಬ್ಬದ ತಯಾರಿ, ಸಂಭ್ರಮ, ಸೆಪ್ಟೆಂಬರ್‌ನಿಂದ  ಆರಂಭಗೊಳ್ಳುತ್ತದೆ. ಇದರ ಲಾಭ ನೇರವಾಗಿ ಐಫೋನ್ ಖರೀದಿಯನ್ನು ಹೆಚ್ಚಿಸಲಿದೆ. ಇನ್ನು ಅತೀ ದೊಡ್ಡ ಮಾರುಕಟ್ಟೆಯಾಗಿರುವ ಭಾರತದಲ್ಲೂ ಸೆಪ್ಟೆಂಬರ್ ಸಾಲು ಸಾಲು ಹಬ್ಬಗಳಿಂದ ಕೂಡಿದೆ.

ಪ್ರೊಡಕ್ಷನ್ ಸೈಕಲ್;  ಆ್ಯಪಲ್ ಪ್ರೊಡಕ್ಷನ್ ಸೈಕಲ್ ತಿಂಗಳು ಸೆಪ್ಟೆಂಬರ್. ಐಫೋನ್ ಗುಣಮಟ್ಟದಲ್ಲಿ ಎಂದೂರಾಜಿಯಾಗಲ್ಲ. ಹಲವು ಸುತ್ತಿನ ಪರೀಕ್ಷೆ, ಪ್ರಯೋಗ ನಡೆಯುತ್ತದೆ. ಇದು  ಸೆಪ್ಟೆಂಬರ್ ನಿಂದ ಸೆಪ್ಟೆಂಬರ್ ವರೆಗೆ ನಡೆಯುತ್ತದೆ.

ಪ್ರತಿಸ್ಪರ್ಧಿಗಳಿಗಿಂತ ಮುಂಚೆ ಬಿಡುಗಡೆ; ಐಫೋನ್‌ಗೆ ಪ್ರತಿಸ್ಪರ್ಧಿಯಾಗಿ ಹಲವು ಫೋನ್‌ಗಳಿವೆ. ಈ ಫೋನ್‌ಗಳು ಸಾಮಾನ್ಯವಾಗಿ ಕ್ರಿಸ್ಮಸ್, ಹೊಸ ವರ್ಷಕ್ಕೆ ಬಿಡುಗಡೆಯಾಗುತ್ತದೆ. ಈ ಪ್ರತಿಸ್ಪರ್ಧಿಗಳಿಗಿಂತ ಮುಂಚೆ ಬಿಡುಗಡೆ  ಮಾಡಿ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಲು ನೆರವಾಗುತ್ತದೆ

ಗರಿಷ್ಠ ಮಾರಾಟ; ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಶಾಲಾ ಕಾಲೇಜು ಆರಂಭಗೊಳ್ಳುವುದು ಆಗಸ್ಟ್  ಅಂತ್ಯ ಹಾಗೂ ಸೆಪ್ಟೆಂಬರ್ ಆರಂಭದಲ್ಲಿ.  ಹೀಗಾಗಿ ಇಧರ ಲಾಭವನ್ನು ಆ್ಯಪಲ್ ಪಡೆದುಕೊಳ್ಳಲಿದೆ.

ಸೆಪ್ಟೆಂಬರ್ ಬಝ್;  ಇನ್ನು ಆ್ಯಪಲ್ ಫೋನ್‌ಗಳು ಸೆಪ್ಟೆಂಬರ್ ಲಾಭ ಪಡೆಯುವುದು  ಒಂದೆಡೆಯಾದರೆ ಮಾರುಕಟ್ಟೆಯಲ್ಲಿ ಐಫೋನ್ ಹೊಸ ಬಝ್ ಕ್ರಿಯೇಟ್ ಮಾಡಿದೆ. ಸೆಪ್ಟೆಂಬರ್ ಐಫೋನ್ ತಿಂಗಳು ಎಂದೇ ಗುರಿತಿಸಿಕೊಂಡಿದೆ. ಹೀಗಾಗಿ ಹೊಸ ಉತ್ಪನ್ನಗಳ ಪ್ರಚಾರ ಸುಲಭ.

Latest Videos

click me!