15,000 ರೂಪಾಯಿ ಒಳಗೆ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್, ಇಲ್ಲಿದೆ ಲಿಸ್ಟ್

First Published | Sep 3, 2023, 6:54 PM IST

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪ್ರತಿ ದಿನ ಹೊಸ ಹೊಸ ಫೋನ್ ಬಿಡುಗಡೆಯಾಗುತ್ತಲೇ ಇದೆ.  ಅಡ್ವಾನ್ಸ್ ಫೀಚರ್, ಅತ್ಯಾಧುನಿಕ ತಂತ್ರಜ್ಞಾನ, ಅತ್ಯುತ್ತಮ ಕ್ಯಾಮೆರಾ ಸೇರಿದಂತೆ ಹಲವು ವಿಶೇಷತೆಗಳು ಈ ಫೋನ್‌ನಲ್ಲಿದೆ.  15,000 ರೂಪಾಯಿ ಒಳಗೆ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್ ಫೋನ್ ಪಟ್ಟಿ ಇಲ್ಲಿದೆ. 

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾರತ ಕ್ರಾಂತಿ ಮಾಡಿದೆ. ವಿವಿಧ ಬ್ರ್ಯಾಂಡ್ ಫೋನ್‌ಗಳು ಇಲ್ಲಿ ಲಭ್ಯವಿದೆ. ಅತೀ ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಫೋನ್‌ಗಳು ಭಾರತದಲ್ಲಿ ಸುಲಭವಾಗಿ ಲಭ್ಯವಿದೆ

ಭಾರತದಲ್ಲಿ ಬಜೆಟ್ ಫ್ರೆಂಡ್ಲಿ ಫೋನ್ ಲಿಸ್ಟ್ ದೊಡ್ಡದಿದೆ. 5 ಸಾವಿರ, 10 ಸಾವಿರ, 15 ಸಾವಿರ ರೂಪಾಯಿ ಒಳಗೆ ಅತ್ಯುತ್ತಮ ಫೋನ್ ಲಭ್ಯವಿದೆ.  15,000 ರೂಪಾಯಿ ಒಳಗೆ ಲಭ್ಯವಿರುವ ಅತ್ಯುತ್ತಮ ಫೋನ್ ವಿವರ ಇಲ್ಲಿದೆ.

Tap to resize

ರೆಡ್‌ಮಿ 12 5G

ರೆಡ್‌ಮಿ 12 5G  ಫೋನ್ ಇತ್ತೀಚೆಗೆ  ಬಿಡುಗಡೆಯಾಗ  ಬಜೆಟ್ ಫೋನ್.  ಇದರ ಬೆಲೆ 10,999 ರೂಪಾಯಿ. ಸ್ನಾಪ್‌ಡ್ರಾಗನ್ 4 Gen 2 ಚಿಪ್‌ಸೆಟ್, 50MP ಪ್ರೈಮರ್ ಕ್ಯಾಮೆರಾ ಸೇರಿದಂತೆ ಹಲವು ಫೀಚರ್ಸ್ ಲಭ್ಯವಿದೆ.

ಸ್ಯಾಮ್ಸಂಗ್ ಗ್ಯಾಲೆಕ್ಸಿ M14 5G

90Hz LCD ಡಿಸ್‌ಪ್ಲೇ ಹೊಂದಿರುವ  ಈ ಫೋನ್, 128GB ಸ್ಟೋರೇಜ್ / 4GB ರ್ಯಾಮ್, 50 +2 + 2MP | 13 MP ಕ್ಯಾಮೆರಾ, 6000 mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಬೆಲೆ 14,490 ರೂಪಾಯಿ

ರಿಯಲ್‌ಮಿ 9 5G

ಈ ಸ್ಮಾರ್ಟ್‌ಫೋನ್  6GB ರ್ಯಾಮ್ ಸಾಮರ್ಥ್ಯ ಹೊಂದಿದೆ. 64GB ಸ್ಟೋರೇಜ್, 48 +2 + 2MP | 16 MP ಕ್ಯಾಮೆರಾ ಸಾಮರ್ಥ್ಯ, 5000 mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಇದರ ಬೆಲೆ 15,990 ರೂಪಾಯಿ

ರಿಯಲ್‌ಮಿ ನರ್ಜೋ N53

ರಿಯಲ್‌ಮಿ ನರ್ಜೋ N53 ಫೋನ್ ಬೆಲೆ 11,999 ರೂಪಾಯಿ. ಐಫೋನ್ 14ಪ್ರೋ  ಡಿಸೈನ್ ಹೋಲುವ ಈ ಸ್ಮಾರ್ಟ್‌ಫೋನ್ 6GB RAM ಸಾಮರ್ಥ್ಯ ಹೊಂದಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ F14 5G

ಈ ಸ್ಮಾರ್ಟ್ ಫೋನ್ ಬೆಲೆ 12,990 ರೂಪಾಯಿ. 6GB RAM ಹಾಗೂ  128GB ಸ್ಟೋರೇಜ್. 50 MP ಡ್ಯುಯೆಲ್ ಕ್ಯಾಮೆರಾ, 3 MP ಫ್ರಂಟ್ ಕ್ಯಾಮೆರಾ, 5G ಸಪೋರ್ಟ್ ಡ್ಯುಯೆಲ್ ಸಿಮ್ ಸೇರಿದಂತೆ ಹಲವು ಫೀಚರ್ಸ್ ಲಭ್ಯವಿದೆ.

Latest Videos

click me!