ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ಫೋನ್ ಇರಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಸ್ಮಾರ್ಟ್‌ಫೋನ್ ಖರೀದಿಸುತ್ತಿದ್ದಾರೆ. ಕೇವಲ 6 ಸಾವಿರ ರೂಪಾಯಿ ಬಜೆಟ್‌ನಲ್ಲಿ ಲಭ್ಯವಿರುವ ಕೆಲವು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿದುಕೊಳ್ಳೋಣ.
itel ZENO 10: ೬ ಸಾವಿರ ರೂ. ಬಜೆಟ್‌ನಲ್ಲಿ ಲಭ್ಯವಿರುವ ಅತ್ಯುತ್ತಮ ಫೋನ್ ಐಟೆಲ್ ಜೆನೊ10. ಈ ಸ್ಮಾರ್ಟ್‌ಫೋನಿನ ನಿಜವಾದ ಬೆಲೆ6,899 ರೂ. ಆದರೆ ಅಮೆಜಾನ್‌ನಲ್ಲಿ ಶೇ.16 ರಿಯಾಯಿತಿಯೊಂದಿಗೆ 5,799 ರೂ.ಗೆ ಸಿಗುತ್ತಿದೆ. ಈ ಫೋನಿನಲ್ಲಿ 6.6 ಇಂಚಿನ ಎಚ್‌ಡಿ+ ಡಿಸ್‌ಪ್ಲೇ ಇದೆ. 3 ಜಿಬಿ RAM, 64 ಜಿಬಿ ಸ್ಟೋರೇಜ್ ಸಾಮರ್ಥ್ಯದೊಂದಿಗೆ ಈ ಫೋನ್ ಬರುತ್ತದೆ. ಕ್ಯಾಮೆರಾ ವಿಷಯಕ್ಕೆ ಬಂದರೆ, 8 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಇದೆ. ಜೊತೆಗೆ 5000 mAh ಬ್ಯಾಟರಿ ಇದೆ.
25
ಪೋಕೊ ಸಿ 61
Poco c61: 6 ಸಾವಿರ ರೂ. ಬಜೆಟ್‌ನಲ್ಲಿ ಲಭ್ಯವಿರುವ ಮತ್ತೊಂದು ಅತ್ಯುತ್ತಮ ಫೋನ್ ಪೋಕೊ ಸಿ61. ಈ ಸ್ಮಾರ್ಟ್‌ಫೋನಿನ ನಿಜವಾದ ಬೆಲೆ 8,999 ಆದರೆ ಶೇ.34 ರಿಯಾಯಿತಿಯೊಂದಿಗೆ 5,899 ರೂ.ಗೆ ಸಿಗುತ್ತಿದೆ. ಈ ಫೋನಿನಲ್ಲಿ 6.71 ಇಂಚಿನ ಎಚ್‌ಡಿ+ ಡಿಸ್‌ಪ್ಲೇ ಇದೆ. ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಈ ಫೋನ್ ಕಾರ್ಯನಿರ್ವಹಿಸುತ್ತದೆ. ಈ ಫೋನಿನಲ್ಲಿ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್ ಇದೆ. ಕ್ಯಾಮೆರಾ ವಿಷಯಕ್ಕೆ ಬಂದರೆ, 8 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ.
35
ಸ್ಯಾಮ್‌ಸಂಗ್
Samsung Galaxy M05: ಈ ಸ್ಮಾರ್ಟ್‌ಫೋನಿನ ನಿಜವಾದ ಬೆಲೆ 9,999 ರೂ. ಆದರೆ ಅಮೆಜಾನ್‌ನಲ್ಲಿ ಶೇ.35 ರಿಯಾಯಿತಿಯೊಂದಿಗೆ 6,499 ರೂ.ಗೆ ಸಿಗುತ್ತಿದೆ. ಕೆಲವು ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ 200 ರೂ. ವರೆಗೆ ರಿಯಾಯಿತಿ ಸಿಗುತ್ತದೆ. ಈ ಫೋನಿನಲ್ಲಿ 6.7 ಇಂಚಿನ ಎಚ್‌ಡಿ+ ಡಿಸ್‌ಪ್ಲೇ ಇದೆ. ಜೊತೆಗೆ 25 ವ್ಯಾಟ್‌ಗಳ ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ 5000 mAh ಬ್ಯಾಟರಿ ಇದೆ. ಕ್ಯಾಮೆರಾ ವಿಷಯಕ್ಕೆ ಬಂದರೆ, 50 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ.
45
ಲಾವಾ ಓ3
Lava o3: ಕಡಿಮೆ ಬಜೆಟ್‌ನಲ್ಲಿ ಉತ್ತಮ ಫೀಚರ್‌ಗಳೊಂದಿಗೆ ಲಭ್ಯವಿರುವ ಫೋನ್‌ಗಳಲ್ಲಿ ಲಾವಾ ಓ೩ ಕೂಡ ಒಂದು. ಈ ಸ್ಮಾರ್ಟ್‌ಫೋನಿನ ನಿಜವಾದ ಬೆಲೆ 7,199 ರೂ. ಆದರೆ ಅಮೆಜಾನ್‌ನಲ್ಲಿ ರಿಯಾಯಿತಿಯೊಂದಿಗೆ 6,499 ರೂ.ಗೆ ಸಿಗುತ್ತಿದೆ. ಅಮೆಜಾನ್ ಕೂಪನ್ ಬಳಸಿದರೆ 500 ರೂ. ರಿಯಾಯಿತಿ ಪಡೆಯಬಹುದು. ಈ ಫೋನಿನಲ್ಲಿ6.75 ಇಂಚಿನ ಎಚ್‌ಡಿ+ ಡಿಸ್‌ಪ್ಲೇ ಇದೆ.13 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು 5000 mAh ಬ್ಯಾಟರಿ ಇದೆ.
55
ರೆಡ್‌ಮಿ
Redmi A3X: ರೆಡ್‌ಮಿ ಎ3ಎಕ್ಸ್ ಸ್ಮಾರ್ಟ್‌ಫೋನಿನ ನಿಜವಾದ ಬೆಲೆ 10,499 ರೂ. ಆದರೆ ಅಮೆಜಾನ್‌ನಲ್ಲಿ ಶೇ.41 ರಿಯಾಯಿತಿಯೊಂದಿಗೆ 6,195 ರೂ.ಗೆ ಸಿಗುತ್ತಿದೆ. ಈ ಫೋನಿನಲ್ಲಿ ಮೀಡಿಯಾಟೆಕ್ ಎಂಟಿ 8125 ಪ್ರೊಸೆಸರ್ ಇದೆ. ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುವ ಈ ಫೋನಿನಲ್ಲಿ 4 ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್ ಇದೆ. 6.71 ಇಂಚಿನ ಎಚ್‌ಡಿ+ ಸ್ಕ್ರೀನ್ ಇರುವ ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ.