ಇಂದು ಮಹತ್ವದ ಆ್ಯಪಲ್ ಈವೆಂಟ್‌: ಲೈವ್‌ಸ್ಟ್ರೀಮ್‌ ನೋಡೋದೇಗೆ? ಐಫೋನ್‌ 15 ಬಿಡುಗಡೆ ಬಗ್ಗೆ ಇಲ್ಲಿದೆ ವಿವರ..

First Published | Sep 12, 2023, 1:41 PM IST

ಆ್ಯಪಲ್ ಇಂದು ಮಹತ್ವದ ಈವೆಂಟ್‌ ನಡೆಸುತ್ತಿದ್ದು, ಈ ವೇಳೆ ಐಫೋನ್ 15 ಮತ್ತು ಹೊಸ ಆ್ಯಪಲ್ ವಾಚ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ.

ದೇಶದಲ್ಲಿ ಐಫೋನ್ 15 ಹಾಗೂ ಆ್ಯಪಲ್ ಕಂಪನಿಯ ಗ್ಯಾಜೆಟ್‌ಗಳನ್ನು ಕೊಳ್ಳೋರ ಸಂಖ್ಯೆ ಸಾಕಷ್ಟಿದೆ. ಆ್ಯಪಲ್ ಯಾವಾಗ ಹೊಸ ಐಫೋನ್‌ ಬಿಡುಗಡೆ ಮಾಡುತ್ತದೆಂದು ಹಲವರು ಕಾಯುತ್ತಿರುತ್ತಾರೆ. ಐಫೋನ್‌ 15 ಬಿಡುಗಡೆ ಯಾವಾಗ ಹಾಗೂ ಆ್ಯಪಲ್ ಈವೆಂಟ್‌ ಬಗ್ಗೆ ಬಿಡುಗಡೆಗೆ ಕಾಯುತ್ತಿದ್ದವರಿಗೆ ಇಲ್ಲಿದೆ ಶುಭ ಸುದ್ದಿ. ಆ್ಯಪಲ್ ಇಂದು ಮಹತ್ವದ ಈವೆಂಟ್‌ ನಡೆಸುತ್ತಿದ್ದು, ಈ ವೇಳೆ ಐಫೋನ್ 15 ಮತ್ತು ಹೊಸ ಆ್ಯಪಲ್ ವಾಚ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಕಂಪನಿಯು OS 17, iPadOS 17, watchOS 10 ಮತ್ತು tvOS 17 ರ ಬಿಡುಗಡೆ ವೇಳಾಪಟ್ಟಿಯನ್ನು ಸಹ ಪ್ರಕಟಿಸಬಹುದು. ಈ ಈವೆಂಟ್‌ನ ಎಲ್ಲಾ ವಿವರಗಳು ಮತ್ತು ಏನನ್ನು ನಿರೀಕ್ಷಿಸಬಹುದು ನೋಡಿ..

ಆ್ಯಪಲ್ ಈವೆಂಟ್‌ ಸಮಯ
Apple iPhone 15 ಈವೆಂಟ್ ರಾತ್ರಿ 10.30 IST ಕ್ಕೆ ಪ್ರಾರಂಭವಾಗುತ್ತದೆ. 'ವಂಡರ್‌ಲಸ್ಟ್' ಎಂದು ಹೆಸರಿಸಲಾದ ಇದು ಅಮೆರಿಕದ ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೋದಲ್ಲಿನ ಆ್ಯಪಲ್ ಪಾರ್ಕ್‌ನಿಂದ ನೇರಪ್ರಸಾರವಾಗುತ್ತದೆ.

Tap to resize

ಲೈವ್‌ಸ್ಟ್ರೀಮ್ ಅನ್ನು ವೀಕ್ಷಿಸೋದೇಗೆ? 
ಆ್ಯಪಲ್ ತನ್ನ ವೆಬ್‌ಸೈಟ್ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಐಫೋನ್ 15 ಲಾಂಚ್ ಈವೆಂಟ್ ಅನ್ನು ಸ್ಟ್ರೀಮ್ ಮಾಡುವ ಸಾಧ್ಯತೆಯಿದೆ. ನೀವು ಇದನ್ನು Apple ನ ಮೀಸಲಾದ ಈವೆಂಟ್‌ಗಳ ಪೇಜ್‌ ಮತ್ತು Apple TV ಅಪ್ಲಿಕೇಶನ್‌ನಲ್ಲಿಯೂ ವೀಕ್ಷಿಸಬಹುದು.

ಆ್ಯಪಲ್ ಇಂದು ಏನೇನು ಲಾಂಛ್‌ ಮಾಡುತ್ತೆ?
ಆ್ಯಪಲ್ ಇಂದಿನ ಈವೆಂಟ್‌ನಲ್ಲಿ iPhone 15, iPhone 15 Plus, iPhone 15 Pro ಮತ್ತು iPhone 15 Pro Max ಸೇರಿ 4 ಹೊಸ ಐಫೋನ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಹಾಗೂ, ಎರಡು Apple Watch Series 9 ಮತ್ತು Apple Watch Ultra 2 ಎಂಬ Apple Watch ಮಾಡೆಲ್‌ಗಳನ್ನು ಹೊಂದಿದೆ. Apple AirPods Pro ನ ಹೊಸ ಆವೃತ್ತಿಯನ್ನು ಸಹ ಪ್ರಾರಂಭಿಸುವ ಸಾಧ್ಯತೆಯಿದೆ.

iPhone 15 ಮತ್ತು iPhone 15 Plus ನಲ್ಲಿ ಏನೇನು ಬದಲಾವಣೆ
2023 ರ ಸ್ಟ್ಯಾಂಡರ್ಡ್‌ ಐಫೋನ್ ಮಾದರಿಯು iPhone 15 iPhone 15 Plus ಎಂದು ಹೇಳಲಾಗಿದೆ. ಈ ವರ್ಷ Apple, ಡೈನಾಮಿಕ್ ಐಲ್ಯಾಂಡ್‌ ಮತ್ತು 48MP ಕ್ಯಾಮೆರಾವನ್ನು ಈ ಮಾಡೆಲ್‌ಗಳಿಗೆ ತರುತ್ತದೆ ಎನ್ನಲಾಗಿದೆ. ಕಳೆದ ವರ್ಷದ ಪ್ರೊಸೆಸರ್ A16 ಬಯೋನಿಕ್‌ನಲ್ಲಿ ಕಾರ್ಯನಿರ್ವಹಿಸಬಹುದು. 

iPhone 15 Pro ಮತ್ತು iPhone 15 Pro Max ವೈಶಿಷ್ಟ್ಯತೆ!
iPhone 15 Pro ಮತ್ತು iPhone 15 Pro Max ವಿನ್ಯಾಸದಲ್ಲಿ ಬದಲಾವಣೆಯನ್ನು ಕಾಣಬಹುದು. ಪ್ರಸ್ತುತ ಉಕ್ಕಿನ ಬದಲಿಗೆ ಟೈಟಾನಿಯಂ ಬಾಡಿಯೊಂದಿಗೆ ವಿನ್ಯಾಸವು ಎಡ್ಜ್‌ಗಳಲ್ಲಿ ಹೆಚ್ಚು ದುಂಡಾಗಿರುತ್ತದೆ. A17 ಬಯೋನಿಕ್ ಪ್ರೊಸೆಸರ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಕ್ಯಾಮೆರಾ ಅಪ್‌ಗ್ರೇಡ್‌ನಲ್ಲಿ ಪೆರಿಸ್ಕೋಪ್ ಲೆನ್ಸ್ ಪಡೆಯಬಹುದು ಎನ್ನಲಾಗಿದೆ.

ಆ್ಯಕ್ಷನ್ ಬಟನ್
ಪ್ರೋ ಮಾದರಿಗಳಲ್ಲಿನ ಮ್ಯೂಟ್ ಸ್ವಿಚ್ ಬದಲಿಗೆ "ಆ್ಯಕ್ಷನ್ ಬಟನ್" ಅನ್ನು ಬದಲಿಸುವ ಸಾಧ್ಯತೆಯಿದೆ. ಈ ಬಹು-ಕಾರ್ಯ ಬಟನ್ ಅನ್ನು ಕ್ಯಾಮರಾ ಶಟರ್ ಬಟನ್ ಸೇರಿದಂತೆ ಹಲವು ಕಾನ್ಫಿಗರ್ ಮಾಡಬಹುದಾದ ವಿಧಾನಗಳಲ್ಲಿ ಬಳಸಬಹುದು.

iPhone 15 ಸರಣಿಯ ಬೆಲೆ, ಏನು ಹೆಚ್ಚಾಗುತ್ತದೆ ಮತ್ತು ಯಾವುದು ಇಲ್ಲದಿರಬಹುದು
ಪ್ರೋ ಮ್ಯಾಕ್ಸ್‌ಗೆ ಹೆಚ್ಚುವರಿ $100 ಗೂ ಹೆಚ್ಚು ಐಫೋನ್ 15 ಪ್ರೋ ಮಾದರಿಗಳಿಗೆ ಬೆಲೆ ಹೆಚ್ಚಳವನ್ನು ಊಹಿಸಲಾಗಿದೆ. ಕೆಲವು ವರದಿಗಳು 200 ಡಾಲರ್‌ ಎಂದೂ ಹೇಳುತ್ತವೆ. ಆದರೆ, ಮೂಲ ಮಾದರಿಗಳ ಬೆಲೆ ಒಂದೇ ಆಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
 

ಆ್ಯಪಲ್ ವಾಚ್ ಸೀರಿಸ್‌ 9 ಪ್ರೊಸೆಸರ್ ಅಪ್‌ಗ್ರೇಡ್ ಪಡೆಯಬಹುದು
ಆ್ಯಪಲ್ ಈ ವರ್ಷ ಆ್ಯಪಲ್ ವಾಚ್‌ಗೆ ಪ್ರೊಸೆಸರ್ ಅಪ್‌ಗ್ರೇಡ್ ನೀಡುವ ನಿರೀಕ್ಷೆಯಿದೆ. ಆ್ಯಪಲ್ ವಾಚ್ ಸರಣಿ 9 S9 ನೊಂದಿಗೆ ಬರುವ ಸಾಧ್ಯತೆಯಿದೆ. ಆ್ಯಪಲ್ ವಾಚ್ ಅಲ್ಟ್ರಾ 2 ಚಿಪ್ ಅಪ್‌ಗ್ರೇಡ್ ಪಡೆಯುವ ನಿರೀಕ್ಷೆಯಿದೆ. ಎರಡು ಕೈಗಡಿಯಾರಗಳಲ್ಲಿ ಹಾರ್ಟ್‌ ರೇಟ್‌ ಸೆನ್ಸಾರ್‌ ಅನ್ನು ಸಹ ನವೀಕರಿಸಬಹುದು.

iPhone 15 ಸೀರಿಸ್‌ ಲಾಂಛ್‌
ಐಫೋನ್‌ 15 ಸೆಪ್ಟೆಂಬರ್ 15 ರಂದು ಐಫೋನ್‌ 15 ಪ್ರೀ ಆರ್ಡರ್‌ ಮತ್ತು ಸೆಪ್ಟೆಂಬರ್ 22 ರಿಂದ ಮಾರಾಟವಾಗಲಿದೆ ಎನ್ನಲಾಗಿದೆ. 

Latest Videos

click me!