PM ಮನ್‌ಧನ್ ಯೋಜನೆ ಮೂಲಕ ರೈತರು ನಿವೃತ್ತಿ ವೇತನ ಪಡೆಯುವುದು ಹೇಗೆ?

First Published | Apr 24, 2020, 5:59 PM IST

ಭಾರತ ಕೃಷಿ ಪ್ರಧಾನ ದೇಶ. ರೈತನೇ ಆಧಾರ. ಹೀಗಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಮನ್‌ಧನ್ ಯೋಜನೆ ಮೂಲಕ ರೈತರಿಗೆ ನಿವೃತ್ತಿ ವೇತನ ನೀಡುತ್ತಿದೆ. ಈ ಯೋಜನೆ ಮೂಲಕ ರೈತ ಪ್ರತಿ ತಿಂಗಳು 3,000 ರೂಪಾಯಿ ನಿವೃತ್ತಿ ವೇತನ ವೇತನ ಪಡೆಯುತ್ತಾನೆ. ಅಂದರೆ ವಾರ್ಷಿಕ 36,000 ರೂಪಾಯಿ ರೈತನಿ ಕೇಂದ್ರ ಸರ್ಕಾರ ನೀಡಲಿದೆ. ಈ ಯೋಜನೆ ಮೂಲಕ ರೈತರು ನಿವೃತ್ತಿ ವೇತನ ಪಡೆಯುವುದು ಹೇಗೆ? ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

2019ರಲ್ಲಿ ಪ್ರಧಾನಿ ನರೇಂದ್ರ ಮೋದಿ PM ಕಿಸಾನ್ ಮನ್‌ಧನ್ ಯೋಜನೆ ಜಾರಿಗೆ ತಂದಿದ್ದಾರೆ
ವಾರ್ಷಿಕ 660 ರೂಪಾಯಿ ಪಾವತಿಸಿದರೆ ನಿವೃತ್ತಿ ವೇತನವಾಗಿ ಪ್ರತಿ ತಿಂಗಳು 3000 ರೂಪಾಯಿ ಕೇಂದ್ರ ಸರ್ಕಾರ ನೀಡಲಿದೆ
Tap to resize

ಇಳಿ ವಯಸ್ಸಿನ ರೈತರು ಹಾಗೂ ಕಡಿಮೆ ಪ್ರದೇಶದಲ್ಲಿ ಬೆಳೆ ಬೆಳೆಯುವ ರೈತರಿಗೆ ಹೆಚ್ಚಿನ ಅನೂಕೂಲ
ಈ ಯೋಜನೆಯ ಅಡಿ 18 ರಿಂದ 40 ವಯಸ್ಸಿನ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು
60 ವಯಸ್ಸು ದಾಟಿದ ರೈತರಿಗೆ ಪ್ರತಿ ತಿಂಗಳು 3,000 ರೂಪಾಯಿ ನಿವೃತ್ತಿ ವೇತನ ಸಿಗಲಿದೆ
ರೈತ ಸಾವನ್ನಪ್ಪಿದರೆ ಆತನ ಪತ್ನಿಗೆ ಶೇಕಡಾ 50 ರಷ್ಟು ಅಂದರೆ ಪ್ರತಿ ತಿಂಗಳು 1,500 ರೂಪಾಯಿ ವೇತನ ಸಿಗಲಿದೆ. ಕುಟುಂಬದಲ್ಲಿ ಕೇವಲ ಪತ್ನಿ ಮಾತ್ರ ಶೇಕಡಾ 50 ರಷ್ಟು ನಿವೃತ್ತಿ ವೇತನ ಪಡೆಯಲು ಅರ್ಹರು
ಈ ಯೋಜನೆ ಲಾಭ ಪಡೆಯಲು ಯಾವುದೇ ನೋಂದಾವಣಿ ಶುಲ್ಕವಿಲ್ಲ, ಇಷ್ಟೇ ಅಲ್ಲ ದಾಖಲೆ ಸಲ್ಲಿಸಿದ ಹಲವು ರೈತರಿಗೂ ಕೇಂದ್ರ ಸರ್ಕಾರ ವೇತನ ನೀಡುತ್ತಿದೆ
ಸರ್ಕಾರದ ಅಧೀಕೃತ pension yojana ತಾಣದಲ್ಲಿನ PM-KMYನಲ್ಲಿ ಹೆಸರು ನೋಂದಾಯಿಸಿ ದಾಖಲೆ ಸಲ್ಲಿಸುವ ಅವಕಾಶವಿದೆ
ಹತ್ತಿರದ ಸರ್ಕಾರಿ ಸೇವಾ ಕಚೇರಿಗೆ ಭೇಟಿ ನೀಡಿ ರೈತರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು
ರೈತನ ಆಧಾರ್ ಕಾರ್ಡ್ ನಂಬರ್ ಹಾಗೂ ಬ್ಯಾಂಕ್ ಖಾತೆ ವಿವರ ಕಡ್ಡಾಯವಾಗಿ ನೀಡಬೇಕು

Latest Videos

click me!