ಎಣ್ಣೆ ಸ್ನಾನಕ್ಕೆ ಯಾವ ಎಣ್ಣೆ ಒಳ್ಳೆಯದು?
ಆಯುರ್ವೇದದ ಪ್ರಕಾರ ಎಣ್ಣೆ ಸ್ನಾನಕ್ಕೆ ಯಾವ ಎಣ್ಣೆ ಒಳ್ಳೆಯದು ಎಂದು ಕೆಳಗೆ ನೀಡಲಾಗಿದೆ.
ತೆಂಗಿನ ಎಣ್ಣೆ - ನಿಮಗೆ ಪಿತ್ತ ದೋಷವಿದ್ದರೆ ತೆಂಗಿನ ಎಣ್ಣೆ ಬಳಸುವುದು ಒಳ್ಳೆಯದು. ಈ ಎಣ್ಣೆಯು ದೇಹಕ್ಕೆ ತಂಪನ್ನು ನೀಡುತ್ತದೆ ಮತ್ತು ಚರ್ಮಕ್ಕೆ ಸೂಕ್ಷ್ಮತೆಯನ್ನು ನೀಡುತ್ತದೆ.
ಎಳ್ಳೆಣ್ಣೆ - ವಾತ ದೋಷವಿರುವವರಿಗೆ ಈ ಎಣ್ಣೆ ಉತ್ತಮ. ಇದರಲ್ಲಿರುವ ಪೋಷಕಾಂಶಗಳು ಒಣ ಚರ್ಮವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಆಲಿವ್ ಎಣ್ಣೆ - ಈ ಎಣ್ಣೆ ಪಿತ್ತ ದೋಷವಿರುವವರಿಗೆ ತುಂಬಾ ಒಳ್ಳೆಯದು. ಇದನ್ನು ಎಲ್ಲರೂ ಬಳಸಬಹುದು.
ಸಾಸಿವೆ ಎಣ್ಣೆ - ಈ ಎಣ್ಣೆ ಕಫ ದೋಷವಿರುವವರಿಗೆ ತುಂಬಾ ಒಳ್ಳೆಯದು.