ಪುರೋಹಿತರನ್ನು ಕರೆಯಿಸಿ ಮುಸ್ಲಿಂ ಯುವಕನಿಂದ ಲಕ್ಷ್ಮೀ ಪೂಜೆ!

First Published | Nov 1, 2024, 4:39 PM IST

ವಕ್ಫ್ ವಿವಾದ, ಜಿಹಾದ್, ಹಿಂದೂ-ಮುಸ್ಲಿಂ.. ಎಂದು ಸಂಘರ್ಷ ಭುಗಿಲೆದ್ದಿರುವ ನಡುವೆ ಇಲ್ಲೊಬ್ಬ ಮುಸ್ಲಿಂ ಯುವಕ ಹಿಂದೂಗಳ ಪವಿತ್ರ ದೀಪಾವಳಿ ಹಬ್ಬದ ಪ್ರಯುಕ್ತ ಹಿಂದೂ ಸಾಂಪ್ರದಾಯದಂತೆ ಲಕ್ಷ್ಮೀ ಪೂಜೆ ನಡೆಸುವ ಮೂಲಕ ಸೌಹಾರ್ದತೆ ಸಂದೇಶ ನೀಡಿದ್ದಾರೆ.

ಹೌದು. ಸೌಹಾರ್ದತೆ ಸಾರುವ ಉದ್ದೇಶದಿಂದ ಮುಸ್ಲಿಮರ ಹಬ್ಬಗಳಲ್ಲಿ ಹಿಂದೂಗಳು, ಹಿಂದೂಗಳ ಹಬ್ಬವನ್ನು ಮುಸ್ಲಿಮರು ಆಚರಿಸುವುದನ್ನು ನೋಡಿರುತ್ತೀರಿ. ಅಂತಹದ್ದೇ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿರುವ ಮೊಬೈಲ್ ಅಂಗಡಿ ಮಾಲೀಕ ತನ್ವಿ ಅರಸಾಳು ಎಂಬ ಯುವಕ ಲಕ್ಷ್ಮೀ ಪೂಜೆ ಮಾಡಿದ್ದಾರೆ. ಅಂದಹಾಗೆ ಈ ರೀತಿ ಹಿಂದೂಗಳ ಹಬ್ಬ ಮಾಡುತ್ತಿರುವುದು ಇದೇ ಮೊದಲಲ್ಲ, ಕಳೆದ ಐದು ವರ್ಷಗಳಿಂದಲೇ ಪ್ರತಿವರ್ಷ ದೀಪಾವಳಿ ಸಮಯದಲ್ಲಿ ಲಕ್ಷ್ಮೀ ಪೂಜೆ ನಡೆಸಿಕೊಂಡು ಬಂದಿದ್ದಾರೆ.
 

ಹಲವು ವರ್ಷಗಳಿಂದ ತನ್ವಿ ಮೊಬೈಲ್ ವರ್ಲ್ಡ್ ಎಂಬ ಹೆಸರಿನಲ್ಲಿ ಮೊಬೈಲ್ ಮಾರಾಟ ಬ್ಯುಸಿನೆಸ್ ಮಾಡುತ್ತಿರುವ ಯುವಕ.  ಪ್ರತಿವರ್ಷದಂತೆ ಈ ಬಾರಿಯೂ ದೀಪಾವಳಿಗೆ ಹಿಂದೂ ಸಂಪ್ರದಾಯದಂತೆ ಕಳಸ ಇರಿಸಿ, ಹಣ್ಣು-ಕಾಯಿ ನೈವೇದ್ಯ ಅರ್ಪಿಸುವ ಮೂಲಕ ಪೂಜಾ ಕಾರ್ಯ ನೆರವೇರಿಸಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಮೊಬೈಲ್ ಅಂಗಡಿ ಸಿಂಗರಿಸಿ, ಪುರೋಹಿತರಾದ ಕೋಡೂರು ಪ್ರಮೋದ ಜೋಯಿಸ್‌ರನ್ನ ಕರೆತಂದು ಪೂಜೆ ಮಾಡಿಸಿರುವ ಯುವಕ. ಈ ವೇಳೆ ಆತನ ಮುಸ್ಲಿಂ ಸ್ನೇಹಿತರು ಸಾಥ್ ನೀಡಿರುವುದು ವಿಶೇಷವಾಗಿದೆ.
 

Latest Videos


ಅದೇ ರೀತಿ ಇಲ್ಲಿ ಮುಸ್ಲಿಂ ಸಂಪ್ರದಾಯದಾಯಂತೆ ಕೂಡ ಧರ್ಮಗುರುಗಳಿಂದಲೂ ಪೂಜೆ ನೆರವೇರಿಸಿರುವ ಯುವಕ. ಹಬ್ಬಗಳು ಪರಸ್ಪರ ಸಂಬಂಧಗಳನ್ನು ಗಟ್ಟಿಗೊಳಿಸಬೇಕು, ಜಾತಿ ಧರ್ಮ ನೆಪ ಮಾತ್ರ. ಎಲ್ಲರೂ ಒಗ್ಗಟ್ಟಿನಿಂದ ಕೂಡಿ ಹಬ್ಬಗಳನ್ನು ಆಚರಿಸೋಣ. ಸೌಹಾರ್ದತೆ ಸಾರೋಣ ಎಂದಿದ್ದಾರೆ.

click me!