Cleaning Tips: ಬಟ್ಟೆ ಮೇಲಿನ ಹಠಮಾರಿ ಕಲೆ ಹೋಗ್ತಿಲ್ವಾ? ತಲೆ ಕೆಡಿಸಿಕೊಳ್ಳಬೇಡಿ, ವಿನೆಗರ್ ಬಳಸಿ ನೋಡಿ

Published : Jul 29, 2025, 07:12 PM ISTUpdated : Jul 29, 2025, 07:14 PM IST

ಅಡುಗೆ ಮನೆಯಲ್ಲಿ ಮಾತ್ರವಲ್ಲ,  ಎಲ್ಲಾ ಕಡೆ ವಿನೆಗರ್ ಉಪಯೋಗಕ್ಕೆ ಬರುತ್ತದೆ. ಸ್ವಚ್ಛ ಮಾಡುವುದರಿಂದ ಹಿಡಿದು ಕೀಟಗಳನ್ನು ಓಡಿಸುವವರೆಗೂ ವಿನೆಗರ್ ಬಳಸಬಹುದು. ಅಂದಹಾಗೆ  ಬಟ್ಟೆ ಒಗೆಯುವಾಗ ವಿನೆಗರ್ ಬಳಸಿದರೆ  ಏನೆಲ್ಲಾ ಜಾದು ಮಾಡುತ್ತೆ ಅಂತ ನೋಡೋಣ. 

PREV
16

ವಿನೆಗರ್ ಬಳಸಿ ಬಟ್ಟೆಗಳನ್ನು ಮೃದುವಾಗಿಸಬಹುದು. ಸ್ವಲ್ಪ ವಿನೆಗರ್ ನೀರಿಗೆ ಹಾಕಿ ಬಟ್ಟೆಗಳನ್ನು ಅದರಲ್ಲಿ ನೆನೆಸಿಟ್ಟರೆ ಸಾಕು. ವಾಷಿಂಗ್ ಮಷಿನ್‌ನಲ್ಲಿ ಬಟ್ಟೆ ಒಗೆಯುವಾಗ ಫ್ಯಾಬ್ರಿಕ್ ಸಾಫ್ಟ್‌ನರ್ ಜಾಗದಲ್ಲಿ ವಿನೆಗರ್ ಹಾಕಿದರೆ ಬಟ್ಟೆ ಮೃದುವಾಗಿರುತ್ತದೆ.  

26

ಕೆಲವು ಬಟ್ಟೆಗಳಲ್ಲಿ ಒಗೆದ ಮೇಲೂ ದುರ್ವಾಸನೆ ಉಳಿಯುತ್ತದೆ. ಅಂಥ ಸಂದರ್ಭಗಳಲ್ಲಿ ವಿನೆಗರ್ ನೀರಿಗೆ ಹಾಕಿ ಒಗೆದರೆ ದುರ್ವಾಸನೆ ಹೋಗುತ್ತದೆ.

36

ಬಟ್ಟೆಗಳ ಮೇಲಿನ ಹಠಮಾರಿ ಕಲೆಗಳನ್ನು ತೆಗೆಯಲು ವಿನೆಗರ್ ಬಳಸಬಹುದು. ಒಂದು ಚಮಚ ವಿನೆಗರ್ ಮತ್ತು ಒಂದು ಚಮಚ ಸೋಪ್ ಪುಡಿ ಬೆರೆಸಿ ಕಲೆ ಇರುವ ಜಾಗಕ್ಕೆ ಹಚ್ಚಿ. ಸ್ವಲ್ಪ ಹೊತ್ತು ಹಾಗೆ ಬಿಟ್ಟು ಚೆನ್ನಾಗಿ ಒಗೆಯಿರಿ.

46

ಬಟ್ಟೆಗಳಿಗೆ ಹೊಳಪು ನೀಡಲು ವಿನೆಗರ್ ಸಹಾಯ ಮಾಡುತ್ತದೆ. ಬಿಸಿ ನೀರಿಗೆ ವಿನೆಗರ್ ಹಾಕಿ ರಾತ್ರಿಯಿಡೀ ಬಟ್ಟೆಗಳನ್ನು ಅದರಲ್ಲಿ ನೆನೆಸಿಡಿ. ಮರುದಿನ ಬಟ್ಟೆಗಳನ್ನು ಸಾಮಾನ್ಯವಾಗಿ ಒಗೆಯಿರಿ. ಇದು  ಬಟ್ಟೆಗಳಿಗೆ ಹೊಳಪು ನೀಡುತ್ತದೆ. ಆದರೆ ವಿನೆಗರ್ ಜೊತೆ ಬ್ಲೀಚ್ ಬಳಸಬಾರದು.

56

ಕಾಲಾನಂತರದಲ್ಲಿ ಬಟ್ಟೆಗಳ ಬಣ್ಣ ಮಾಸುತ್ತದೆ. ಆಗ ವಿನೆಗರ್‌ಗೆ ಸ್ವಲ್ಪ ನೀರು ಹಾಕಿ ಬಟ್ಟೆಗಳನ್ನು ಅದರಲ್ಲಿ ನೆನೆಸಿಡಿ. ಸ್ವಲ್ಪ ಹೊತ್ತು ಹಾಗೆ ಬಿಟ್ಟು ಚೆನ್ನಾಗಿ ಒಗೆಯಿರಿ.

66

ಎಲ್ಲಾ ರೀತಿಯ ಬಟ್ಟೆಗಳನ್ನೂ ವಿನೆಗರ್ ಬಳಸಿ ಒಗೆಯುವಂತಿಲ್ಲ. ಪ್ರತಿ ಬಟ್ಟೆಯ ಹಿಂದೆಯೂ ಒಂದು ಲೇಬಲ್ ಇರುತ್ತದೆ. ಅದಕ್ಕೆ ತಕ್ಕಂತೆ ಬಟ್ಟೆ ಒಗೆಯಬೇಕು. ಎಲಾಸ್ಟಿಕ್ ಇರುವ ಬಟ್ಟೆಗಳನ್ನು ವಿನೆಗರ್ ಬಳಸಿ ಒಗೆಯಬಾರದು. ಇದು ಬಟ್ಟೆಗೆ ಹಾನಿ ಮಾಡುತ್ತದೆ.

Read more Photos on
click me!

Recommended Stories