ವಿಜಯನಗರ: ಮಳೆ ಕೊರತೆಯಿಂದ ತೀವ್ರ ಬರ; ಮಳೆಗಾಗಿ ಪ್ರಾರ್ಥಿಸಿ ಒಂಭತ್ತು ದಿನ ಭಜನಾ ವ್ರತ

Published : Aug 30, 2026, 12:52 PM IST

ವಿಜಯನಗರದಲ್ಲಿ ಮಳೆ ಕೊರತೆಯಿಂದ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಕೃಷಿ ಚಟುವಟಿಕೆ ಇಲ್ಲದೆ ಅನ್ನದಾತರು ಆತಂಕಕ್ಕೀಡಾಗಿದ್ದಾರೆ. ಈ ಹಿನ್ನೆಲೆ ಮಳೆಗಾಗಿ ಪ್ರಾರ್ಥಿಸಿ ಉಲವತ್ತಿ ಗ್ರಾಮದ ಸರ್ವಧರ್ಮದ ನಾಗರಿಕರು ಒಂಭತ್ತು ದಿನಗಳ ಕಾಲ ಭಜನೆ ವ್ರತ ಕೈಗೊಂಡಿದ್ದಾರೆ.

PREV
13
ಕೈಕೊಟ್ಟ ಮುಂಗಾರು

ಈ ಬಾರಿ ಮುಂಗಾರು ಮಳೆ ತೀವ್ರವಾಗಿ ಕಡಿಮೆಯಾಗಿದೆ. ಆಗಸ್ಟ್ ಮುಗಿದರೂ ವಾಡಿಕೆಯಂತೆ ಮಳೆ ಸುರಿಯುತ್ತಿಲ್ಲ. ಸೆಪ್ಟಂಬರ್ ತಿಂಗಳಿನ ಮೇಲೆ ರೈತರ ಭರವಸೆ ಇಟ್ಟುಕೊಂಡಿದ್ದಾರೆ. ಮುಂದಿನ ತಿಂಗಳು ಮಳೆ ಕೈಕೊಟ್ಟರೆ ಬೆಳೆಯೂ ಇಲ್ಲ ಎಂಬ ಆತಂಕ ಅನ್ನದಾತರಿಗೆ ಎದುರಾಗಿದೆ.

23
ವಿಜಯನಗದಲ್ಲಿ ಮಳೆ ಕೊರತೆಯಿಂದ ಭೀಕರ ಬರ

ಕೈಕೊಟ್ಟ ಮುಂಗಾರಿನಿಂದ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ಭೀಕರ ಬರದ ಪರಿಸ್ಥಿತಿಗೆ ಸಿಲುಕಿದೆ. ಮಳೆಯ ಕೊರತೆಯಿಂದ ರೈತರ ಕೃಷಿ ಚಟುವಟಿಕೆಗಳು ಕುಂಠಿತವಾಗಿದ್ದು, ಅನ್ನದಾತರ ಬದುಕು ಅಕ್ಷರಶಃ ಬಸವಳಿದು ಹೋಗಿದೆ.

33
ಉಲವತ್ತಿ ಗ್ರಾಮದ ಜನರಿಂದ ಮಳೆಗಾಗಿ ಭಜನಾ ವೃತ

ಇಂತಹ ಸಂಕಷ್ಟದ ಸಂದರ್ಭದಲ್ಲಿ ವರುಣ ದೇವ ಕರುಣೆ ತೋರಿ ಮಳೆ ಸುರಿಸಲಿ, ಹಗರಿಬೊಮ್ಮನಹಳ್ಳಿ ತಾಲೂಕು ಬರದಿಂದ ಮುಕ್ತವಾಗಲಿ, ಮಾಲವಿ ಜಲಾಶಯ ಭರ್ತಿಯಾಗಿ ರೈತರ ಕೃಷಿಗೆ ವರದಾನವಾಗಲಿ ಎಂದು ಪ್ರಾರ್ಥಿಸಿ ತಾಲೂಕಿನ ಉಲವತ್ತಿ ಗ್ರಾಮದ ಸರ್ವಧರ್ಮದ ನಾಗರಿಕರು ಒಂಭತ್ತು ದಿನಗಳ ಕಾಲ ಭಜನೆ ವ್ರತ ಕೈಗೊಂಡಿದ್ದಾರೆ.

ಗ್ರಾಮದ ಜನರು ಒಗ್ಗೂಡಿ ಭಜನೆ, ಪ್ರಾರ್ಥನೆ ನಡೆಸಿ ಉತ್ತಮ ಮಳೆಯಾಗುವಂತೆ ವರುಣ ದೇವನಲ್ಲಿ ಮೊರೆ ಇಟ್ಟಿದ್ದಾರೆ.

Read more Photos on
click me!

Recommended Stories