ಶ್ರೀಶೈಲ ಭಕ್ತರಿಗಾಗಿ ನಿದ್ದೆಯೂ ಮಾಡ್ತಿಲ್ಲ ಕೊಪ್ಪಳದ ವೆಂಕೊಬಾ ಕಾಕಾ; ಇವರೇ ಮಲ್ಲಯ್ಯ ಎಂದ ಜನ್ರು

Published : Mar 12, 2026, 01:56 PM IST

ಕೊಪ್ಪಳದ ವೆಂಕೊಬಾ ಕಾಕಾ, ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಳ್ಳುವ ಭಕ್ತರಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಆರು ವರ್ಷಗಳಿಂದ ಆಂಧ್ರಪ್ರದೇಶದ ನಂದವಾರಂನಲ್ಲಿ, ನೂರಾರು ಕಿ.ಮೀ. ನಡೆದು ದಣಿದು ಬರುವ ಭಕ್ತರ ಕಾಲುಗಳಿಗೆ ತೈಲ ಮಸಾಜ್ ಮಾಡುವ ಮೂಲಕ ಅವರು ಗಮನ ಸೆಳೆದಿದ್ದಾರೆ. 

PREV
15
ಕೊಪ್ಪಳದ ವೆಂಕೊಬಾ ಕಾಕಾ

ಅಂಧ್ರಪ್ರದೇಶದ ಶ್ರೀಶೈಲಂನಲ್ಲಿರುವ ಮಲ್ಲಿಕಾರ್ಜುನ ಸ್ವಾಮಿಯ ದರ್ಶನಕ್ಕಾಗಿ ಕರ್ನಾಟಕದಿಂದ ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ತೆರಳುತ್ತಾರೆ. ಸುಮಾರು 300 ರಿಂದ 400 ಕಿ.ಮೀ. ದೀರ್ಘ ಪಾದಯಾತ್ರೆಯಲ್ಲಿ ಭಕ್ತಾದಿಗಳಿಗಾಗಿ ಕೆಲವರು ಆಹಾರ, ವೈದ್ಯಕೀಯ ಮತ್ತು ವಿಶ್ರಾಂತಿಗಾಗಿ ವ್ಯವಸ್ಥೆ ಮಾಡುತ್ತಿರುತ್ತಾರೆ. ಇನ್ನು ಒಂದಿಷ್ಟು ಜನರು ಕೆಲವೆಡೆ ಕ್ಯಾಂಪ್ ಮಾಡಿಕೊಂಡು ಸೇವೆ ನೀಡುತ್ತಾರೆ. ಇಂತಹ ವ್ಯಕ್ತಿಗಳಲ್ಲಿ ವೆಂಕೊಬಾ ಕಾಕಾ ಸಹ ಒಬ್ಬರಾಗಿದ್ದಾರೆ. (ಚಿಕ್ಕಪ್ಪನನ್ನು ಪ್ರೀತಿಯಿಂದ ಕಾಕಾ ಎಂದು ಕರೆಯುತ್ತಾರೆ)

25
ಬಸವಣ್ಣಕ್ಯಾಂಪ್‌ ಗ್ರಾಮಸ್ಥರ ಸೇವೆ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬಸವಣ್ಣಕ್ಯಾಂಪ್ ನಿವಾಸಿಯಾಗಿರುವ ವೆಂಕೊಬಾ ಅವರು ಪಾದಯಾತ್ರಿಗಳ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. Siddu Sarawari ಎಂಬವರು ಸೋಶಿಯಲ್ ಮೀಡಿಯಾದಲ್ಲಿ ವೆಂಕೊಬಾ ಅವರ ಸೇವೆಯ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. 

ಬಸವಣ್ಣಕ್ಯಾಂಪ್‌ ಗ್ರಾಮಸ್ಥರು ಜೊತೆಯಾಗಿ ಅಂಧ್ರಪ್ರದೇಶ ನಂದವಾರಂ ಎಂಬಲ್ಲಿ ಶ್ರೀಶೈಲ ಭಕ್ತರ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಸೇವೆಯ ಅಪರೂಪದ ವಿಡಿಯೋ ಇಲ್ಲಿವರೆಗೆ 9.81 ಲಕ್ಷಕ್ಕೂ ಅಧಿಕ ವ್ಯೂವ್, 300ಕ್ಕೂ ಹೆಚ್ಚು ಕಮೆಂಟ್ ಮತ್ತು 600ಕ್ಕೂ ಅಧಿಕ ಬಾರಿ ಶೇರ್ ಆಗಿದೆ.

35
ಭಕ್ತರ ಕಾಲುಗಳಿಗೆ ಮಸಾಜ್

ನೂರಾರು ಕಿಲೋ ಮೀಟರ್ ನಡೆದುಕೊಂಡು ಬರುವ ಭಕ್ತರ ಕಾಲುಗಳಿಗೆ ವೆಂಕೊಬಾ ಅವರು ತೈಲದಿಂದ ಮಸಾಜ್ ಮಾಡುತ್ತಾರೆ. ಸ್ವಲ್ಪವೂ ಬೇಸರ ಮಾಡಿಕೊಳ್ಳಲು ಕಿರಿಯರು ಅಂತಾನೂ ನೋಡದೇ ಮಸಾಜ್ ಮಾಡುತ್ತಾರೆ. 

ಕಳೆದ ಆರು ವರ್ಷಗಳಿಂದ ವೆಂಕೊಬಾ ಈ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪಾದಯಾತ್ರೆ ಸಮಯದಲ್ಲಿ ಕುಡಿಯುವ ನೀರು ಮತ್ತು ವೈದ್ಯಕೀಯ ವ್ಯವಸ್ಥೆಯನ್ನು ಬಸವಣ್ಣಕ್ಯಾಂಪ್ ಗ್ರಾಮಸ್ಥರು ಮಾಡುತ್ತಾರೆ.

45
ಉಚಿತ ಸೇವೆ ನೀಡುತ್ತಿರುವ ಗ್ರಾಮಸ್ಥರು

ಯಾವುದೇ ಸಮಯದಲ್ಲಿಯೂ ಬಂದ್ರೂ ಭಕ್ತರ ಕಾಲುಗಳಿಗೆ ವೆಂಕೊಬಾ ಮಸಾಜ್ ಮಾಡುತ್ತಾರೆ. ಇಷ್ಟೆಲ್ಲಾ ಕೆಲಸ ಮಾಡುವ ವೆಂಕೊಬಾ, ಎರಡು ರೊಟ್ಟಿ ಮತ್ತು ಒಂದಿಷ್ಟು ಹಣ ಅಷ್ಟೇ ತಿಂತಾರೆ. ಊಟ ಮಾಡೋದು ಸಹ ಕಡಿಮೆ ಎಂದು ಬಸವಣ್ಣಕ್ಯಾಂಪ್ ಗ್ರಾಮಸ್ಥರು ಹೇಳುತ್ತಾರೆ. 

ಇದಕ್ಕಾಗಿ ನಾವು ಯಾವುದೇ ಹಣ ತೆಗೆದುಕೊಳ್ಳಲ್ಲ. ಶ್ರೀಶೈಲ ಮಲ್ಲಯ್ಯನ ಹೆಸರಿನಲ್ಲಿ ಸೇವೆ ಮಾಡ್ತೀವಿ ಎಂದು ಹೇಳುತ್ತಾರೆ. ದಣಿದು ಯಾರೇ ಬಂದರೂ ಕೊಂಚವೂ ಬೇಸರ ಮಾಡಿಕೊಳ್ಳದ ವೆಂಕೊಬಾ ನಗುಮೊಗದಿಂದಲೇ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: ಕೊಟ್ಟೂರಿನ 'ಕಂಪ್ಯೂಟರ್' ಮ್ಯಾನ್‌ ಲೆಕ್ಕದ ಮಾಯಾಜಾಲ; ಗುಟ್ಟು ರಟ್ಟು ಮಾಡಿದ ಮಗ್ಗಿ ಅಜ್ಜಯ್ಯ

55
ಇಂತಹವರಲ್ಲಿಯೇ ದೇವರು ಕಾಣಬೇಕು

ಈ ವಿಡಿಯೋ ನೋಡಿದ ನೆಟ್ಟಿಗರು, ಸಿರಿಗಿರಿ ಮಲ್ಲಯ್ಯನನ್ನು ನಾವು ಶ್ರೀಶೈಲಕ್ಕೆ ಹೋಗಬೇಕಂತೇನಿಲ್ಲ. ಇಂಥವರಲ್ಲಿ ಕೂಡ ನಾವು ಮಲ್ಲಯ್ಯನ ಕಾಣಬಹುದು. ಇಂಥ ಭಾಗ್ಯ ನಮ್ಮ ಹಿಂದೂ ಧರ್ಮದಲ್ಲಿ ಸಿಗುವುದು ಮಾತ್ರ ಶ್ರೀ ಮಲ್ಲಯ್ಯ ದೇವರು ಇವರಿಗೆ ಒಳ್ಳೆಯದು ಮಾಡಲಿ ಎಂದು ಹಾರೈಸಿದ್ದಾರೆ. 

ಈ ವಿಡಿಯೋ ನೋಡಿರುವ ನೆಟ್ಟಿಗರು ವೆಂಕೊಬಾ ಕಾಕಾ ಅವರ ನಿಸ್ವಾರ್ಥ ಸೇವೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಕೆಲವರು ನಾವು ಸಹ ಇವರನ್ನು ನೋಡಿದ್ದೇವೆ. ನಮ್ಮ ಕಾಲುಗಳಿಗೂ ಮಸಾಜ್ ಮಾಡಿದ್ದಾರೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೊಟ್ಟೂರಿನ 'ಮಗ್ಗಿ ಅಜ್ಜಯ್ಯ'ನ ಗಣಿತದ ಚಮತ್ಕಾರ! ಇವರ ಟ್ಯಾಲೆಂಟ್‌ ಮುಂದೆ ಕಂಪ್ಯೂಟರ್‌ ಸ್ಲೋ

Read more Photos on
click me!

Recommended Stories