ಕಂದನ ಚಿಕಿತ್ಸೆಗಾಗಿ ಭೀಕರ ಕೆಂಪು ಪೆಡಂಭೂತವಾದ ಯುವಕ

ಕೆಂಪು ಪೆಡಂಭೂತದ ದೈತ್ಯ ಶರೀರದೊಳಗೆ ಮಿಡಿದ ಮಾನವೀಯ ಮನಸು | ಕಂದನ ಚಿಕಿತ್ಸೆಗಾಗಿ ಮತ್ತೊಮ್ಮೆ ಭೀಕರ ಅವತಾದಲ್ಲಿ ಪ್ರತ್ಯಕ್ಷನಾದ ಪಡೆಂಭೂತ

ಕಳೆದ ವರ್ಷ ಫೆಬ್ರವರಿಯಲ್ಲಿ ಕಟೀಲು ಬ್ರಹ್ಮಕಲಶೋತ್ಸವದಲ್ಲಿ ಭೀಕರ ಪೆಂಡಭೂತವಾಗಿ 5 ವರ್ಷದ ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ಪುಟ್ಟ ಬಾಲಕಿಗೆ ನೆರವಾದ ಯುವಕನ ನೆನಪಿದೆಯಾ..?
ಇವರು ಮತ್ತೊಮ್ಮೆ ಕೆಂಪು ಪೆಡಂಭೂತವಾಗಿ ಮಾನವೀಯ ಕೆಲಸಕ್ಕೆ ಕೈ ಜೋಡಿಸಿದ್ದಾರೆ.

H.L.H (hemophagocytic lymphohistocytosis) ಎಂಬ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದ 7 ವರ್ಷದ ಕಂದನ ಚಿಕಿತ್ಸೆಗೆ ತನ್ನಿಂದಾಗುವಷ್ಟು ಹಣ ಒಗ್ಗೂಡಿಸಲು ಪ್ರಯತ್ನಿಸಿದ್ದಾರೆ.
"ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಮಂಜೂದಾರ್ ಷಾ ಕ್ಯಾನ್ಸರ್ ಆಸ್ಪತ್ರೆಗೆ" ಕರೆದುಕೊಂಡು ಹೋದಾಗ ವೈದ್ಯರು ಮೂಳೆ ಅಸ್ಥಿಮಜ್ಜೆ ಕಸಿ (Bone Marrow transplant) ಮಾಡಲು ಸೂಚಿಸಿ ಈ ಚಿಕಿತ್ಸೆ ಗೆ ಅಂದಾಜು 45 ಲಕ್ಷ ರೂಪಾಯಿ ಖರ್ಚಾಗುವ ಸಾಧ್ಯತೆ ಬಗ್ಗೆ ತಿಳಿಸಿದ್ದರು.
ಇದಕ್ಕಾಗಿ ನಮ್ಮ ತುಳುನಾಡ ಟ್ರಸ್ಟ್ ಮತ್ತು ಆತ್ಮೀಯರ ಸಹಕಾರದೊಂದಿಗೆ ಪೊಳಲಿಯಲ್ಲಿ ನಡೆದ ಕಲಶಾಭಿಷೇಕದಂದು ಮಗುವಿಗಾಗಿಈ ಯುವಕ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ವಿಕ್ಕಿ ಶೆಟ್ಟಿ ಬೆದ್ರ ತಮ್ಮಿಂದಾಗುವಷ್ಟು ನೆರವನ್ನು ನೀಡಲು ಮತ್ತೊಮ್ಮೆ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ
ಕೆಂಪು ಪೆಡಂಭೂತದ ಅವತಾರ
ದೇವಾಲಯಕ್ಕೆ ಆಗಮಿಸಿದವರು ಮಗುವಿನ ಚಿಕಿತ್ಸೆಗೆ ತಮ್ಮಿಂದಾದ ನೆರವು ನೀಡಿರು

Latest Videos

click me!