Astrologer Kamalakar Bhat News: ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಸುಚಿತ್ರಾ ಸಂಬಂಧವು ಈಗ ವಸಂತ್ ನಾಯ್ಕ್ ಎನ್ನುವವರ ಕೊಲೆಯಲ್ಲಿ ಅಂತ್ಯವಾಗಿದೆ. ಈಗ ಇವರಿಬ್ಬರು ಜೈಲಿನಲ್ಲಿದ್ದಾರೆ. ಈಗ ಸುಚಿತ್ರಾ ಅವರ ಇನ್ನೊಂದು ಸಂಬಂಧ ಬಯಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮೂಲದ ಸುಚಿತ್ರಾ ಅವರು ಜ್ಯೋತಿಷಿ ಕಮಲಾಕರ್ ಭಟ್ ಜೊತೆ ಸಂಬಂಧ ಹೊಂದಿದ್ದರು. ಇವರಿಬ್ಬರು ಶಿವಮೊಗ್ಗದಲ್ಲಿ ವಾಸ ಮಾಡುತ್ತಿದ್ದರು. ಸುಚಿತ್ರಾ ತನ್ನ ಮಗಳಿಗೂ ಕಿರುಕುಳ ನೀಡುತ್ತಿದ್ದರಂತೆ. ಹೀಗಾಗಿ ತಂದೆಗೆ ತಿಳಿಸಿ ಮಗಳು ಸಿದ್ದಾಪುರಕ್ಕೆ ಬಂದಿದ್ದರು.
25
ಸಿದ್ದಾಪುರದ ಗಂಡನ ಮನೆಗೆ ಬಂದ್ರು
ಮಗಳು ಸಿದ್ದಾಪುರಕ್ಕೆ ಬಂದ ದಿನವೇ ರಾತ್ರಿ, ಒಂದಿಷ್ಟು ಜನರ ಗುಂಪಿನ ಜೊತೆ ಸಿದ್ದಾಪುರದ ಗಂಡನ ಮನೆಗೆ ಬಂದ ಸುಚಿತ್ರಾ, ತನ್ನ ಗಂಡನ ಮೇಲೆ ಹಲ್ಲೆ ಮಾಡಿದ್ದಾರೆ, ಆ ಹಲ್ಲೆಯಲ್ಲಿ ವಸಂತ್ ನಾಯ್ಕ್ ತೀರಿಕೊಂಡಿದ್ದಾರೆ, ಪತಿ ಮಹೇಶ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
35
ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಸುಚಿತ್ರಾ
ಕಮಲಾಕರ್ ಭಟ್ ಪ್ರೇಯಸಿ ಸುಚಿತ್ರಾ 3-4 ವರ್ಷ ಮಾತ್ರ ಗಂಡ ಮಹೇಶ್ ಜೊತೆ ಸಂಸಾರ ಮಾಡಿದ್ದರು. ಕಲಬುರಗಿಯ ಜಮೀನ್ದಾರ ಶರಣಬಸಪ್ಪ ಎನ್ನುವವರ ಜೊತೆ ಸುಚಿತ್ರಾ ಸಂಪರ್ಕದಲ್ಲಿದ್ದರು. ಅಷ್ಟೇ ಅಲ್ಲದೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಕಲಬುರಗಿಯಲ್ಲಿ ಶರಣಬಸಪ್ಪ ಜೊತೆ ಸುಚಿತ್ರಾ ತಿರುಗಾಡುತ್ತಿದ್ದರು.
ಅಪ್ಪು ಮೆಲೋಡಿಸ್ ಎಂದು ಆರ್ಕೆಸ್ಟ್ರಾ ಒಪನ್ ಮಾಡಿದ್ದರು. ಶರಣಬಸಪ್ಪ ಅವರ ಹಣದಿಂದ ಈ ಆರ್ಕೆಸ್ಟ್ರಾ ಒಪನ್ ಮಾಡಿದ್ದರು. ಶರಣಬಸಪ್ಪ ನೀಡಿದ ಹಣದಿಂದಲೇ ಬಡ್ಡಿ ವ್ಯಾಪಾರ ಮಾಡುತ್ತಿದ್ದರು. ಒಟ್ಟೂ ಮೂರು ವರ್ಷಗಳ ಕಾಲ ಇವರಿಗೆ ಸಂಬಂಧ ಇತ್ತು.
55
ದುಬಾರಿ ಗಿಫ್ಟ್ ಕೊಟ್ಟಿದ್ದ ಕಮಲಾಕರ್ ಭಟ್
ಈ ವಿಷಯ ಕಮಲಾಕರ್ ಭಟ್ ಅವರಿಗೆ ಗೊತ್ತಿತ್ತು. ಇದೇ ಕಾರಣಕ್ಕೆ ಮನಸ್ತಾಪ ಆಗಿದೆ. ಆಮೇಲೆ ಶರಣಬಸಪ್ಪಗೆ ಕೈಕೊಟ್ಟು, ಕಮಲಾಕರ್ ಭಟ್ ಜೊತೆಗೆ ಇದ್ದಾರೆ. ಸುಚಿತ್ರಾ ಹಣದ ವ್ಯಾಮೋಹಕ್ಕೆ ಕಮಲಾಕರ್ ಅವರು ಎರಡು ಕಾರ್, ಒಂದು ಬುಲೆಟ್ ಕೊಟ್ಟಿದ್ದರು. ಅಷ್ಟೇ ಅಲ್ಲದೆ ಶಿವಮೊಗ್ಗದ ಬಾಡಿಗೆ ಮನೆಯಲ್ಲಿ ಇರಲು ವ್ಯವಸ್ಥೆ ಮಾಡಿದ್ದರು.