'ಗಂಡನಿಲ್ಲದ ಸಮಯದಲ್ಲಿ....!' ಸುಚಿತ್ರಾ ಖಾಸಗಿ ಕ್ಷಣದ ಫೋಟೋಗಳು ವೈರಲ್! ಕಮಲಾಕರ ಭಟ್‌ಗಿಂತ ಮೊದಲು ಈ ಜಮೀನ್ದಾರನ ಜತೆ ಲವ್ವಿಡವ್ವಿ!

Published : Feb 08, 2026, 05:48 PM IST

ಶಿವಮೊಗ್ಗ: ಕಿಲಾಡಿ ಲೇಡಿ ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್ ಭಟ್ ಗ್ಯಾಂಗ್ ಸೇರಿ ಅಮಾಯಕ ವಸಂತ ನಾಯ್ಕ ಅವರನ್ನು ಹ*ತ್ಯೆ ಮಾಡಿರುವ ವಿಚಾರ ಇಡೀ ರಾಜ್ಯವೇ ಬೆಚ್ಚಿಬೀಳುವಂತೆ ಮಾಡಿದೆ. ಇದರ ನಡುವೆ ಈ ಸುಚಿತ್ರಾ ನವರಂಗಿ ಆಟದ ಮತ್ತೊಂದು ವಿಚಾರ ಬಯಲಾಗಿದೆ. 

PREV
16
ಸುಚಿತ್ರಾ ನವರಂಗಿ ಆಟ ಬಯಲು

ಅನೈತಿಕ ಸಂಬಂಧ ಮತ್ತು ಕೊ*ಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಖ್ಯಾತ ಜ್ಯೋತಿಷಿ ಕಮಲಾಕರ ಭಟ್‌ ಹಾಗೂ ಸುಚಿತ್ರಾ ಕುರಿತಾದ ಇಂಟ್ರೆಸ್ಟಿಂಗ್ ವಿಚಾರಗಳು ದಿನದಿಂದ ದಿನಕ್ಕೆ ಬೆಳಕಿಗೆ ಬರುತ್ತಿವೆ. ಕೊ*ಲೆ ಆರೋಪಿ ಸುಚಿತ್ರಾ ನವರಂಗಿ ಆಟ ಕಥೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ.

26
ಮೂರು ವರ್ಷಗಳ ಹಿಂದೆ ಜಮೀನ್ದಾರರೊಬ್ಬರ ಜತೆ ಲವ್ವಿಡವ್ವಿ

ಈ ಕಿಲಾಡಿ ಆಂಟಿ ಸುಚಿತ್ರಾ, ಜ್ಯೋತಿಷಿ ಕಮಲಾಕರ ಭಟ್ ಜತೆ ಸಂಪರ್ಕಕ್ಕೆ ಬರುವ ಮುನ್ನ ಗುಲ್ಬರ್ಗದ ಜಮೀನ್ದಾರರೊಬ್ಬರ ಜತೆ ಮೂರು ವರ್ಷದಿಂದ ಲವ್ ರಿಲೇಷನ್‌ಶಿಪ್‌ನಲ್ಲಿದ್ದಳು ಎನ್ನುವ ವಿಚಾರ ಇದೀಗ ಬಯಲಾಗಿದೆ.

36
ಖಾಸಗಿ ಕ್ಷಣದ ಫೋಟೋಗಳು ಲಭ್ಯ

ಈ ಸುಚಿತ್ರಾ, ಗುಲ್ಬರ್ಗ ಜಮೀನ್ದಾರ ಶ*ಣ*ಬ*ಪ್ಪ ನೀಡಿದ್ದ ಹಣದಿಂದ ಅಪ್ಪು ಮೆಲೋಡೀಸ್ ಗುಲ್ಬರ್ಗ ಎನ್ನುವ ಹೆಸರಿನ ಆರ್ಕೆಸ್ಟ್ರಾ ನಡೆಸುತ್ತಿದ್ದಳು. ಇದೀಗ ಆತನೊಂದಿಗಿರುವ ಕೆಲವು ಖಾಸಗಿ ಕ್ಷಣದ ಫೋಟೋಗಳು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿವೆ.

46
ಗಂಡನಿಲ್ಲದ ಸಮಯದಲ್ಲಿ ಮನೆಗೆ ಕರೆಸಿಕೊಳ್ತಿದ್ದ ಸುಚಿತ್ರಾ

ಗಂಡನನ್ನು ತೊರೆದು ಸುಚಿತ್ರಾ ಗುಲ್ಬರ್ಗಕ್ಕೆ ತೆರಳಿ ಶ*ಣ*ಬ*ಪ್ಪ ಜತೆ ಸುತ್ತಾಡುತ್ತಿದ್ದಳಂತೆ. ಇದಷ್ಟೇ ಅಲ್ಲದೇ ಗಂಡನಿಲ್ಲದ ಸಮಯದಲ್ಲಿ ಆತನನ್ನು ಮನೆಗೂ ಕರೆಸಿಕೊಳ್ಳುತ್ತಿದ್ದಳಂತೆ. ಇನ್ನು ಶರಣಬಸಪ್ಪ ನೀಡಿದ ಹಣವನ್ನು ಸಿದ್ದಾಪುರದಲ್ಲಿ ಈ ಸುಚಿತ್ರಾ ಬಡ್ಡಿಗೆ ಹಣ ನೀಡುತ್ತಿದ್ದಳು ಎನ್ನುವ ವಿಚಾರ ಬಯಲಾಗಿದೆ.

56
ಜಮೀನ್ದಾರನಿಗೆ ಕೈಕೊಟ್ಟ ಸುಚಿತ್ರಾ!

ಇನ್ನು ಈ ಸುಚಿತ್ರಾ, ಗುಲ್ಬರ್ಗದ ಜಮೀನ್ದಾರ ಶ*ಣ*ಬ*ಪ್ಪ ಜತೆ ಸಂಪರ್ಕದಲ್ಲಿರುವ ವಿಚಾರ ಜ್ಯೋತಿಷಿ ಕಮಲಾಕರ ಭಟ್‌ಗೆ ತಿಳಿಯುತ್ತಿದ್ದಂತೆಯೇ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತಂತೆ. ಇದಾದ ಬಳಿಕ ಶ*ಣ*ಬ*ಪ್ಪನಿಗೆ ಕೈಕೊಟ್ಟು ಕಮಲಾಕರ ಭಟ್ ಜತೆ ಈ ಸುಚಿತ್ರಾ ಲವ್ವಿಡವ್ವಿ ಮುಂದುವರೆಸಿದ್ದರು.

66
ಸಚಿತ್ರಾಳ ಹಣದಾಸೆಗೆ ಸಾಕಷ್ಟು ಗಿಫ್ಟ್ ಕೊಟ್ಟಿದ್ದ ಕಮಲಾಕರ ಭಟ್

ಈ ಸುಚಿತ್ರಾ ಶ*ಣ*ಬ*ಪ್ಪ ಸೇರಿದಂತೆ ಹಲವರ ಜತೆ ಸಂಪರ್ಕವಿಟ್ಟುಕೊಂಡಿದ್ದಳು ಎನ್ನಲಾಗುತ್ತಿದೆ. ಇನ್ನು ಸುಚಿತ್ರಾ ಹಣದ ದಾಹಕ್ಕೆ ಕಮಲಾಕರ ಭಟ್ ಕಾರು, ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದ್ದ. ಪತ್ನಿಯ ಈ ಲವ್ ರಿಲೇಷನ್‌ಶಿಪ್‌ನಿಂದ ಬೇಸತ್ತ ಪತಿ ಮಹೇಶ್ ನಾಯ್ಕ, ಕಳೆದ ಆರು ತಿಂಗಳಿನಿಂದ ಸುಚಿತ್ರಾಳಿಂದ ದೂರವಿದ್ದರು.

Read more Photos on
click me!

Recommended Stories