ರಾತ್ರಿ ಟಿವಿ ನೋಡ್ಕೊಂಡು ಕೂತಿದ್ದಾಗಲೇ ಮನೆಯೊಳಗೆ ನುಗ್ಗಿದ ಚಿರತೆ! ನರಸಮ್ಮ ಮಾಡಿದ ಈ ಒಂದು ಕಾರ್ಯಕ್ಕೆ ಸೆರೆಸಿಕ್ಕ ಬೇಟೆಗಾರ!

Published : Nov 10, 2026, 02:20 PM IST

ರಾತ್ರಿ ಟಿವಿ ನೋಡಿಕೊಂಡು ಕುಳಿತಿದ್ದಾಗಲೇ ಚಿರತೆಯೊಂದು ಮನೆಯೊಳಗೆ ನುಗ್ಗಿ ಆತಂಕಕಾರಿ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬಂದಿಗೌಡನಪಾಳ್ಯ ಗ್ರಾಮದಲ್ಲಿ ನಡೆದಿದೆ. ನರಸಮ್ಮಳ ಸಮಯ ಪ್ರಜ್ಞೆಯಿಂದಾಗಿ ಚಿರತೆ ಸೆರೆ ಸಿಕ್ಕಿದೆ.

PREV
13
ತುಮಕೂರು: ಮನೆಗೆ ನುಗ್ಗಿದ ಚಿರತೆ!

ತುಮಕೂರಿನಲ್ಲಿ ಮಾನವ-ವನ್ಯಜೀವಿಗಳ ಸಂಘರ್ಷ ಮುಂದುವರಿದಿದ್ದು, ರಾತ್ರಿ ವೇಳೆ ಆಹಾರ ಹುಡುಕಿಕೊಂಡ ಚಿರತೆಯೊಂದು ಸೀದಾ ಮನೆಯೊಳಗೆ ನುಗ್ಗಿದ ಘಟನೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಬಳಿಯಿರುವ ಬಂದಿಗೌಡನಪಾಳ್ಯ ಗ್ರಾಮದಲ್ಲಿ ನಡೆದಿದೆ.. ಈ ಘಟನೆಯಿಂದಾಗಿ ಗ್ರಾಮಸ್ಥರು ಹೊರಗಡೆ ಬರಲು ಭಯ ಪಡುವಂತಾಗಿದೆ.

ಚಿರತೆ ಅರ್ಭಟಕ್ಕೆ ಗಾಬರಿಯಾದ ಬಂದಿಗೌಡನಪಾಳ್ಯದ ಗ್ರಾಮಸ್ಥರು

ಒಂದು ತಿಂಗಳಿಂದ ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದ ಚಿರತೆ ಇದೀಗ ನೇರ ಮನೆಯೊಳಗೆ ನುಗ್ಗಿದೆ. ರಾತ್ರಿ ಆಹಾರ ಹುಡುಕಿಕೊಂಡು ಗ್ರಾಮದೊಳಗೆ ಪ್ರವೇಶಿಸಿದೆ. ಮನೆಮುಂದಿನ ಮೇಕೆಗಳ ಮೇಲೆ ದಾಳಿ ನಡೆಸಿರುವ ಚಿರತೆ ಬಳಿಕ ಮೇಕೆಯನ್ನು ಬಾಯಲ್ಲಿ ಕಚ್ಚಿಹಿಡಿದುಕೊಂಡು ಏಕಾಏಕಿ ಮನೆಗೆ ನುಗ್ಗಿದೆ.

23
ಟಿವಿ ನೋಡಿಕೊಂಡು ಕೂತಿದ್ದ ವೇಳೆ ಮನೆಯೊಳಗೆ ಚಿರತೆ ನುಗ್ಗಿತು!

ನಿನ್ನೆ ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ನರಸಮ್ಮ ಕುಟುಂಬಸ್ಥರು ಟಿವಿ ನೋಡಿಕೊಂಡು ಎಂದಿನಂತೆ ಊಟ ಮಾಡುತ್ತಿದ್ದರು. ಬಾಗಿಲು ಓಪನ್ ಆಗಿತ್ತು. ಎಲ್ಲರೂ ಸಿರಿಯಲ್ ನೋಡುವುದರಲ್ಲಿ ಮೈಮರೆತಿದ್ದಾರೆ ಇತ್ತ ಬಾಯಲ್ಲಿ ಮೇಕೆ ಹಿಡಿದುಕೊಂಡು ಚಿರತೆಯೊಂದು ನೇರವಾಗಿ ಮನೆಯೊಳಗೆ ಬಂದಿದೆ. ಚಿರತೆ ಮನೆಗೆ ನುಗ್ಗಿದ್ದು ಕಂಡು ನರಸಮ್ಮ ಕೂಡಲೇ ಮನೆಯಿಂದ ಹೊರಗೆ ಓಡಿ ಬಂದಿದ್ದಾಳೆ. ಭಯದಲ್ಲಿದ್ದರೂ ಹುಷಾರಾಗಿ ಹೊರಗಿನಿಂದಲೇ ಮನೆ ಬಾಗಿಲು ಹಾಕಿದ್ದಾರೆ.

33
ಸತತ 6 ಗಂಟೆ ಕಾರ್ಯಾಚರಣೆ ನಡೆಸಿ ಚಿರತೆ ಹಿಡಿದ ಅರಣ್ಯ ಸಿಬ್ಬಂದಿ

ಮನೆಯೊಳಗೆ ಲಾಕ್ ಆದ ಬಳಿಕ ನರಸಮ್ಮ ಆತಂಕದಿಂದ ನೆರೆಮನೆಯವರಿಗೆಲ್ಲ ವಿಷಯ ತಿಳಿಸಿದ್ದಾಳೆ. ತಕ್ಷಣ ಮನೆ ಮುಂದೆ ಸೇರಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅನಂತರ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಸತತ ಆರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು. ಮನೆಯೊಳಗೆ ಲಾಕ್ ಆದ ಬಳಿಕ ಮಂಚದ ಕೆಳಗೆ ಅಡಗಿ ಕುಳಿತುಕೊಂಡಿತ್ತು. ಕೊನೆಗೂ ಚಿರತೆಗೆ ಅರೆವಳಿಕೆ ಮದ್ದು ನೀಡಿ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸೆರೆಹಿಡಿದ ನಂತರವೇ ಗ್ರಾಮಸ್ಥರು ನಿಟ್ಟುಸಿರುವ ಬಿಟ್ಟರು.

Read more Photos on
click me!

Recommended Stories