ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆಯ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆಗಾಗಿ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪಾದಯಾತ್ರೆಗೆ ಬೆಳಗ್ಗೆ 7ರಿಂದ ಸಂಜೆ 4ರವರೆಗೆ ಮಾತ್ರ ಅವಕಾಶ ನೀಡಲಾಗಿದ್ದು, ವನ್ಯಜೀವಿಗಳ ಮೇಲೆ ನಿಗಾ ಇಡಲು ವಿಶೇಷ ತಂಡಗಳನ್ನು ರಚಿಸಲಾಗಿದೆ.
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ಹಿನ್ನಲೆ ಭಕ್ತರ ಸುರಕ್ಷತೆ ಮತ್ತು ವನ್ಯಜೀವಿ ಸಂರಕ್ಷಣೆ ಅರಣ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ವಹಿಸಲಾಗಿದೆ. ಚಿರತೆ ದಾಳಿಯಂತಹ ಘಟನೆಗಳು ಮತ್ತೆ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
25
ಭಕ್ತರ ಪಾದಯಾತ್ರೆಗೆ ಸಮಯ ನಿಗದಿ
ಪಾದಯಾತ್ರಿಗಳಿಗೆ ಸಮಯ ನಿರ್ಬಂಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಭಕ್ತಾಧಿಗಳಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 4 ರವರೆಗೂ ಅರಣ್ಯಾಧಿಕಾರಿಗಳು ಅವಕಾಶ ಕೊಟ್ಟಿದ್ದಾರೆ. ಸಂಜೆ 5 ರಿಂದ ಬೆಳಗ್ಗೆ 7 ರವರೆಗೂ ಪಾದಯಾತ್ರೆ ಹೋಗಲೂ ನಿರ್ಬಂಧಿಸಲಾಗಿದೆ.
35
ವಿಶೇಷ ತಂಡಗಳಿಂದ ಗಸ್ತು
ಹೆಚ್ಚು ಭಕ್ತರು ಪಾದಯಾತ್ರೆ ಮೂಲಕ ತಾಳುಬೆಟ್ಟಕ್ಕೆ ಆಗಮಿಸಿರುವ ಹಿನ್ನಲೆ ಗುಂಪು ಗುಂಪಾಗಿ ಭಕ್ತರು ಪಾದಯಾತ್ರೆ ಹೋಗಲೂ ಅವಕಾಶ ಕಲ್ಪಿಸಲಾಗಿದೆ. ಅರಣ್ಯ ಇಲಾಖೆಯಿಂದ ಏಳು ವಿಶೇಷ ತಂಡಗಳನ್ನು ಗಸ್ತು ನಿಯೋಜನೆ ಮಾಡಲಾಗಿದೆ.
ತಾಳುಬೆಟ್ಟ, ಪೊನ್ನಾಚ್ಚಿ ಕ್ರಾಸ್, ರಂಗಸ್ವಾಮಿ ಒಡ್ಡು, ಆನೆ ತಲೆದಿಂಬ ಸೇರಿ ಪಾದಯಾತ್ರೆ ಹೋಗುವ ಮಾರ್ಗದಲ್ಲಿ ಗಸ್ತು ಹಾಗೂ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರತಿಯೊಂದು ತಂಡಕ್ಕೂ ಕೂಡ ವಾಕಿಟಾಕಿ, ಪಟಾಕಿ, ಡ್ರೋನ್ ಸೇರಿದಂತೆ ಅಗತ್ಯ ಸುರಕ್ಷತಾ ಹಾಗೂ ಸಂವಹನಾ ಸಾಧನ ಕೊಡಲಾಗಿದೆ.
55
ಭಕ್ತರ ಸುರಕ್ಷತೆಗೆ ಆದ್ಯತೆ
ಅರಣ್ಯ ಪ್ರದೇಶದಲ್ಲಿ ಆಹಾರ ಹಾಗೂ ಪಾನೀಯ ವಿತರಣೆಗೆ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಬಳಕೆ, ತ್ಯಾಜ್ಯ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಥರ್ಮಲ್ ಡ್ರೋನ್ ಗಳ ಮೂಲಕ ವನ್ಯಜೀವಿಗಳ ಮೇಲೆ ನಿಗಾ ಇಟ್ಟಿದ್ದಾರೆ. ಪಾದಯಾತ್ರೆ ಹೋಗುವ ಭಕ್ತರ ಸುರಕ್ಷತೆಗೆ ಆದ್ಯತೆ ಕೊಟ್ಟಿದ್ದಾರೆ. ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್ ಭಾಸ್ಕರ್ ಆದೇಶ ಹೊರಡಿಸಿದ್ದಾರೆ.