ಬೆಂಗಳೂರು-ವಿಜಯಪುರದಲ್ಲಿ ಹೂಡಿಕೆ; 130 ಎಕರೆ ಜಾಗದಲ್ಲಿ ಬಿಗ್ ಪ್ಲಾನ್; MB ಪಾಟೀಲ್

Published : Nov 04, 2026, 04:04 PM IST

ಟೋನ್ಬೊ ಇಮೇಜಿಂಗ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಬೆಂಗಳೂರು, ವಿಜಯಪುರದಲ್ಲಿ ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನ ಘಟಕಗಳನ್ನು ಸ್ಥಾಪಿಸಲು ಮುಂದಾಗಿದೆ. ಸಚಿವ ಎಂ.ಬಿ. ಪಾಟೀಲ್ ಈ ಕುರಿತು ಮಾಹಿತಿ ನೀಡಿದ್ದು, ಕೌಂಟರ್-ಡ್ರೋನ್ ಮತ್ತು ಹೈ-ಪವರ್ ಮೈಕ್ರೋವೇವ್ ತಂತ್ರಜ್ಞಾನ ಅಭಿವೃದ್ಧಿಗೆ ಇದು ಒತ್ತು ನೀಡಲಿದೆ.

PREV
15
ಟೋನ್ಬೊ ಇಮೇಜಿಂಗ್ ಇಂಡಿಯಾ ಲಿಮಿಟೆಡ್

ಟೋನ್ಬೊ ಇಮೇಜಿಂಗ್ ಇಂಡಿಯಾ ಲಿಮಿಟೆಡ್ ಬೆಂಗಳೂರು ಹಾಗೂ ವಿಜಯಪುರದ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ಹೂಡಿಕೆಗೆ ಆಸಕ್ತಿ ತೋರಿಸಿದೆ ಎಂಬ ಮಾಹಿತಿಯನ್ನು ವಾಣಿಜ್ಯ ಮತ್ತು ಕೈಗಾರಿಕೆ, ಮೂಲಸೌಕರ್ಯ ಸಚಿವರಾದ ಎಂ.ಬಿ.ಪಾಟೀಲರು ಹಂಚಿಕೊಂಡಿದ್ದು, ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ಎಂದು ಸಂತೋಷವನ್ನ ವ್ಯಕ್ತಪಡಿಸಿದ್ದಾರೆ.

25
ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ

ಬೆಂಗಳೂರು ಮೂಲದ ಸ್ವದೇಶಿ ರಕ್ಷಣಾ ತಂತ್ರಜ್ಞಾನ ಸಂಸ್ಥೆ ಟೋನ್ಬೋ ಇಮೇಜಿಂಗ್ (Tonbo Imaging) ಸಂಸ್ಥೆಯ ಮುಖ್ಯಸ್ಥರೊಂದಿಗೆ ಸಭೆ ನಡೆಸಿ, ಕರ್ನಾಟಕದಲ್ಲಿ ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಹಾಗೂ ಉತ್ಪಾದನಾ ಘಟಕಗಳ ಸ್ಥಾಪನೆ ಕುರಿತು ಚರ್ಚಿಸಲಾಯಿತು ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

35
ಸಂಸ್ಥೆಯು ಎರಡು ಮಹತ್ವದ ಪ್ರಸ್ತಾವನೆಗಳು ರೀತಿಯಾಗಿವೆ

ಪ್ರಸ್ತಾವನೆ 1

ಬೆಂಗಳೂರು – ಅತ್ಯಾಧುನಿಕ ಉತ್ಪಾದನಾ ಘಟಕ: ಐಟಿಐಆರ್ 2ನೇ ಹಂತದಲ್ಲಿ 5 ಎಕರೆ ಪ್ರದೇಶದಲ್ಲಿ ಹೈ-ಪವರ್ ಮೈಕ್ರೋವೇವ್ (HPM) ತಂತ್ರಜ್ಞಾನದ ವಿನ್ಯಾಸ ಮತ್ತು ಉತ್ಪಾದನಾ ಘಟಕ ಸ್ಥಾಪಿಸುವ ಪ್ರಸ್ತಾವನೆ.

45
ಪ್ರಸ್ತಾವನೆ 2

ವಿಜಯಪುರ – 130 ಎಕರೆಗಳಲ್ಲಿ ಪರೀಕ್ಷಾ ಘಟಕ: ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 130 ಎಕರೆ ಜಾಗದಲ್ಲಿ ಹೈ-ಪವರ್ ಮೈಕ್ರೋವೇವ್ ಹಾಗೂ ಮುಂದಿನ ತಲೆಮಾರಿನ ಡೈರೆಕ್ಟೆಡ್ ಎನರ್ಜಿ ತಂತ್ರಜ್ಞಾನಗಳ ಪರೀಕ್ಷೆ, ಮೌಲ್ಯಮಾಪನ, ಕ್ಷೇತ್ರ ಪ್ರಯೋಗ ಮತ್ತು ಪ್ರಾತ್ಯಕ್ಷಿಕೆಗಳಿಗಾಗಿ ಅತ್ಯಾಧುನಿಕ ಘಟಕ ಸ್ಥಾಪಿಸುವ ಪ್ರಸ್ತಾವನೆ.

55
ಕೌಂಟರ್-ಡ್ರೋನ್ ತಂತ್ರಜ್ಞಾನ ಅಭಿವೃದ್ಧಿ

ವಿಶೇಷವಾಗಿ, ಡ್ರೋನ್‌ ಗಳು ಹಾಗೂ ಡ್ರೋನ್ ಸಮೂಹಗಳಿಂದ ಎದುರಾಗುವ ಭದ್ರತಾ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಕೌಂಟರ್-ಡ್ರೋನ್ ತಂತ್ರಜ್ಞಾನ ಅಭಿವೃದ್ಧಿಗೆ ಈ ಘಟಕ ಮಹತ್ವದ ಕೊಡುಗೆ ನೀಡಲಿದೆ. ಈ ಎರಡೂ ಯೋಜನೆಗಳನ್ನು ಸಾಕಾರಗೊಳಿಸಲು KIADB ಸೇರಿದಂತೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ನಿಯಮಾನುಸಾರ ಅಗತ್ಯ ಸಹಕಾರ ಒದಗಿಸುವ ಭರವಸೆ ನೀಡಿರುವೆ.

Read more Photos on
click me!

Recommended Stories