ಉಡುಪಿ: ಬ್ರಹ್ಮಾವರ ಸಮೀಪದ ಬಾಳೆಕುದ್ರು ಮಠದಲ್ಲಿನ ಪುರಾತನ ವಿಗ್ರಹಗಳ ಮಾರಾಟ ಪ್ರಕರಣದಲ್ಲಿ ಬೆಂಗಳೂರು ಬಸವೇಶ್ವರನಗರ ಪೊಲೀಸರ ತನಿಖೆ ವೇಳೆ ಪ್ರಕರಣಕ್ಕೆ ಹೊಸ ಮತ್ತೊಂದು ತಿರುವು ಸಿಕ್ಕಿದೆ.
ಉಡುಪಿ: ಬ್ರಹ್ಮಾವರ ಸಮೀಪದ ಬಾಳೆಕುದ್ರು ಮಠದಲ್ಲಿನ ಪುರಾತನ ವಿಗ್ರಹಗಳ ಮಾರಾಟ ಪ್ರಕರಣದಲ್ಲಿ ಬೆಂಗಳೂರು ಬಸವೇಶ್ವರನಗರ ಪೊಲೀಸರ ತನಿಖೆ ವೇಳೆ ಪ್ರಕರಣಕ್ಕೆ ಹೊಸ ಮತ್ತೊಂದು ತಿರುವು ಸಿಕ್ಕಿದೆ.
28
ಮಠದ ಸ್ವಾಮೀಜಿಯಿಂದಲೇ ವಿಗ್ರಹಗಳ ಮಾರಾಟ ಆರೋಪ
ಬಾಳೆಕುದ್ರು ಮಠದಲ್ಲಿ ಶತಮಾನಳಿಂದ ವಿನಾಯಕ, ಶಕ್ತಿ ಗಣಪತಿ, ವಲ್ಲಭಗಣಪತಿ, ನರಸಿಂಹಮೂರ್ತಿ ವಿಗ್ರಹಗಳನ್ನು ಪೂಜಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ನಾಪತ್ತೆಯಾಗಿದ್ದವು. ನಾಪತ್ತೆಯಾದ ಫೋಟೋಗಳು ವೆಬ್ಸೈಟ್ ಒಂದರಲ್ಲಿ ಪ್ರಕಟಿಸಲಾಗಿತ್ತು. ಮಾರಾಟ ಮಾಡುವ ಉದ್ದೇಶದಿಂದಲೇ ಪ್ರಕಟಿಸಲಾಗಿತ್ತು ಎಂಬ ಸಂಶಯ.
38
ಶತಮಾನಗಳ ಇತಿಹಾಸವಿರುವ ವಿಗ್ರಹ
ಈ ವಿಚಾರವಾಗಿ ಮಠದ ಶಿಷ್ಯರಾದ ಜಗದೀಶ್ ಐತಾಳ್ ಸ್ವಾಮೀಜಿ ಬಳಿ ಪ್ರಶ್ನಿದಾಗ, ಹಳೆ ವಿಗ್ರಹ ವಿಸರ್ಜನೆ ಮಾಡಿ ಹೊಸ ವಿಗ್ರಹ ಪ್ರತಿಷ್ಠಾಪಿಸುವುದಾಗಿ ತಿಳಿಸಿದ್ದಾರೆ. ಸ್ವಾಮೀಜಿಯ ಹೇಳಿಕೆಯಿಂದ ಅನುಮಾನಗೊಂಡ ಜಗದೀಶ್ ಐತಾಳ್. ಪುರಾತನ ವಿಗ್ರಹಗಳು ನಾಪತ್ತೆಯಾಗಿರುವ ಬಗ್ಗೆ ಬೆಂಗಳೂರಿನ ಬಸವೇಶ್ವರನಗರದಲ್ಲಿ ಎಫ್ಐಆರ್ ದಾಖಲಿಸಿದ್ದರು.
ವಿಜಯನಗರ ಅರಸರ ಕಾಲದಷ್ಟು ಪುರಾತನವಾಗಿರುವ, ಸುಮಾರು ಒಂದೂವರೆ ಸಾವಿರ ವರ್ಷಗಳಷ್ಟು ಇತಿಹಾಸವಿರುವ ಬಾಳೆಕುದ್ರು ಮಠದಲ್ಲಿದ್ದ ಅಪರೂಪದ ದೇವರುಗಳ ವಿಗ್ರಹಗಳನ್ನು ಮಠದ ಸದಾಶಿವಾಶ್ರಮ ಸ್ವಾಮಿಜಿ ಮತ್ತು ಮಠದ ಸಿಬ್ಬಂದಿಯಿಂದ ಮಾರಾಟವಾಗಿದೆ ಎಂದು ಬಲವಾದ ಆರೋಪ ಕೇಳಿಬಂದ ಹಿನ್ನೆಲೆ ದೂರು ದಾಖಲಿಸಿಕೊಂಡು ತನಿಖೆ ಇಳಿದಿದ್ದ ಬಸವೇಶ್ವರನಗರ ಪೊಲೀಸರು.
58
ಸದಾಶಿವಾಶ್ರಮ ಸ್ವಾಮಿಜಿ ಯಿಂದ ಪುರಾತನ ವಿಗ್ರಹಗಳ ಕಳ್ಳತನ, ಮಾರಾಟ
ಜಗದೀಶ್ ಐತಾಳ್ ದೂರಿನನ್ವಯ ಯಾವಾಗ ಪೊಲೀಸರು ತನಿಖೆಗಿಳಿದರೋ ಆಗ ಒಂದೊಂದೇ ಸುಳಿಗಳನ್ನ ಬಿಡಿಸುತ್ತಾ ಬಂದರು. ಮೊದಲಿಗೆ ಐತಾಳ್ ಅವರು ಸ್ವಾಮೀಜಿಯನ್ನ ಈ ಬಗ್ಗೆ ಪ್ರಶ್ನಿಸಿದಾಗ ಹಳೆಯ ವಿಗ್ರಹಗಳ ವಿಸರ್ಜನೆ ಮಾಡಿ ಹೊಸ ಮೂರ್ತಿಗಳ ಪ್ರತಿಷ್ಠಾಪನೆ ಎಂದು ಹೇಳಿದ್ದರು. ಆದರೆ ಬಸವೇಶ್ವರನಗರ ಪೊಲೀಸರು ದೂರು ಆಧರಿಸಿ ತನಿಖೆಗೆ ಇಳಿಯುತ್ತಿದ್ದಂತೆ ಬುಧವಾರ ಸಂಜೆ ನಾಲ್ಕು ಗಂಟೆವೇಳೆ ಮಠಕ್ಕೆ ಬೀಗ ಜಡಿದು ನಾಪತ್ತೆಯಾಗಿದ್ದ
68
ಬಾಳಕುದ್ರು ಮಠದ ವಿಗ್ರಹ ಮಾರಾಟ, ಯಾರಾರ ವಿರುದ್ಧ ಎಫ್ಐಆರ್?
ಬಾಳೆಕುದ್ರು ಮಠದ ಪೀಠಾಧಿಪತಿ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ, ಮಠದ ಆಡಳಿತಾಧಿಕಾರಿ ಅನಿಲ್ ಕುಮಾರ್, ಅಕೌಂಟೆಂಟ್ ಜಯಲಕ್ಷ್ಮಿ, ಪರಿಚಾರಕ ಶ್ರೇಯಸ್ ಹಾಗೂ ಪ್ರಸಿದ್ ಐಡಲ್ಸ್ ಮಾಲೀಕ ನಾಗೇಂದ್ರ ಪ್ರಸಾದ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
78
ಮಠದ ಪೀಠಾಧಿಪತಿಪಯಿಂದಲೇ ಪುರಾತನ ವಿಗ್ರಹಗಳ ಮಾರಾಟ!
ದೂರು ದಾಖಲಾಗುತ್ತಿದ್ದಂತೆ ಬಂಧನ ಭೀತಿಯಿಂದ ಮಠದಿಂದ ಎಸ್ಕೇಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದು ಪ್ರಕರಣ ಸಂಬಂಧ ಪ್ರಸಿದ್ಧ ಐಡಲ್ ಮಾಲೀಕ ನಾಗೇಂದ್ರ ಪ್ರಸಾದ್ ರನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.
88
ಪುರಾತನ ವಿಗ್ರಹಗಳ ಮಾರಾಟ, ಸ್ವಾಮೀಜಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ಬಾಳೆಕುದ್ರು ಮಠಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮಠ ಇತಿಹಾಸ ನೋಡಿದ್ರೆ ವಿಜಯನಗರ ಅರಸರ ಕಾಲಕ್ಕೆ ಕರೆದೊಯ್ಯುತ್ತದೆ. ಇಂತಹ ಶತ ಶತಮಾನಗಳ ಇತಿಹಾಸವಿರುವ ಅಪರೂಪದ ವಿಗ್ರಹಗಳನ್ನು ಭಕ್ತರ ಕಣ್ಣಿಗೆ ಮಣ್ಣೆರೆಚಿ ಮಾರಾಟ ಮಾಡಿರುವುದು ಶಿಷ್ಯರ ಆಕ್ರೋಶ ಕಾರಣವಾಗಿದೆ.
ಈ ಹಿಂದಿನ ನರಸಿಂಹಾಶ್ರಮ ಸ್ವಾಮೀಜಿ ಆಡಳಿತಾವಧಿಯಲ್ಲಿ ದೇವಸ್ಥಾನದ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳು ನಡೆದವೆಂದು ಶಿಷ್ಯರು ಹೇಳುತ್ತಾರೆ. ಈಗಿನ ಸ್ವಾಮೀಜಿ ಅವಧಿಯಲ್ಲಿ ಇದು ಎಲ್ಲೆ ಮೀರಿತ್ತು. ಮಠದ ಸಂಪ್ರಾದಾಯಕ್ಕೆ ವಿರುದ್ಧ ನಡೆದುಕೊಳ್ಳುತ್ತಿದ್ದರು. ಈ ಕಾರಣಕ್ಕೆ ಹಲವು ಸಲ ಸ್ವಾಮೀಜಿಗಳು ಪೀಠ ತ್ಯಾಗ ಮಾಡುವಂತೆ ಆಗ್ರಹಿಸಿದ್ದರು. ಸ್ವಾಮೀಜಿ ಶಿಷ್ಯರ ನಡುವೆ ಸಂಘರ್ಷ ತಾರಕಕ್ಕೇರಿದ್ದ ನಡುವೆ ಗುಪ್ತವಾಗಿ ಪುರಾತನ ವಿಗ್ರಹಗಳು ಮಾರಾಟವಾಗಿರುವುದು ಭಕ್ತರ ಆಕ್ರೋಶದ ಕಟ್ಟೆ ಒಡೆದಿದೆ.