ಈ ಪ್ರಕ್ರಿಯೆಯೊಂದಿಗೆ 2 ಶತಮಾನಗಳಿಂದಲೂ ಈ ನೆಲದ ದಾಸೋಹ ಪರಿಕಲ್ಪನೆಯ ಸನ್ನಿಧಾನ ಎಂದೇ ಹೆಸರಾಗಿರುವ ಶರಣಬಸವೇಶ್ವರ ಸಂಸ್ಥಾನದಲ್ಲಿ ನವ ಯುಗಕ್ಕೆ ಮುನ್ನುಡಿ ಬರೆಯಲಾಯಿತು.
ದಾಸೋಹ ಮಹಾಮನೆಯಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಅವರು 9ನೇ ಪೀಠಾಧಿಪತಿಯಾಗಿರುವ(Successor) ಚಿರಂಜೀವಿ ದೊಡ್ಡಪ್ಪ ಅಪ್ಪಾಜಿಗೆ ಹಿರಿಯ ಗುರುಗಳ ಸಮ್ಮುಖದಲ್ಲಿ ದಾಸೋಹ ಮಹಾಮನೆಯ ಸಂಪೂರ್ಣ ಜವಾಬ್ದಾರಿಯನ್ನು ಧಾರ್ಮಿಕ ವಿಧಿ-ವಿಧಾನಗಳನ್ನು ಈಡೇರಿಸುವ ಅಧಿಕಾರ ಅನುಗ್ರಹಿಸಿದರು.
2017ರ ನ.1ರಂದು ಜನಿಸಿದ ದೊಡ್ಡಪ್ಪ ಅಪ್ಪಾಜಿ ಅವರು 200 ವರ್ಷಗಳ ಹಿಂದೆ ಸ್ಥಾಪಿಸಿದ ಶರಣ ಬಸವೇಶ್ವರ ಸಂಸ್ಥಾನದ ಎಲ್ಲಾ ಪೀಠಾಧಿಪತಿಗಳಲ್ಲಿ ಅತ್ಯಂತ ಕಿರಿಯ ಪೀಠಾಧಿಪತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ನನ್ನ ಮಗ ಚಿರಂಜೀವಿ ದೊಡ್ಡಪ್ಪ ಅಪ್ಪನವರನ್ನು ಶರಣಬಸವೇಶ್ವರ ಸಂಸ್ಥಾನಕ್ಕೆ ನನ್ನ ಉತ್ತರಾಧಿಕಾರಿ ಎಂದು ಘೋಷಿಸುತ್ತೇನೆ’ ಎಂದು ತಿಳಿಸಿದ ಡಾ. ಶರಣಬಸವಪ್ಪ ಅಪ್ಪಾಜಿ
ಬೀದರ್(Bidar) ಜಿಲ್ಲೆಯ ಹಾರಕೂಡದ ಸಂಸ್ಥಾನ ಹಿರೇಮಠದ ಡಾ.ಚೆನ್ನವೀರ ಶಿವಾಚಾರ್ಯರು ದೊಡ್ಡಪ್ಪ ಅಪ್ಪಾಜಿಗೆ ಔಪಚಾರಿಕವಾಗಿ ಅಧಿಕಾರ ಹಸ್ತಾಂತರದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಬಳಿಕ ಲಿಂಗದೀಕ್ಷೆ ನೀಡಿದರು. 9ನೇ ಪೀಠಾಧಿಪತಿಗಳಿಗೆ ಪ್ರಸಾದ ಬಟ್ಟಲು, ಲಿಂಗ ಸಜ್ಜಿಕೆ (19ನೇ ಶತಮಾನದ ಶರಣಬಸವೇಶ್ವರರು ಬಳಸಿದ ಬೆಳ್ಳಿಯ ತಟ್ಟೆ ಮತ್ತು ಆತ್ಮಲಿಂಗ) ಹಸ್ತಾಂತರಿಸಿ ಧಾರ್ಮಿಕ ವಿಧಿವಿಧಾನಗಳು ಮತ್ತು ಪೂಜೆಗಳನ್ನು ನಡೆಸುವ ಅಧಿಕಾರವನ್ನು ನೂತನ ಪೀಠಾಧಿಪತಿಗಳಿಗೆ ಹಸ್ತಾಂತರಿಸಿದರು.