Shivamogga ಉಪ್ಪಿನಕಾಯಿ ಬ್ಯುಸಿನೆಸ್; ದಿನಕ್ಕೆ 500-600 kg ಸೇಲ್, 3-4 ಕೋಟಿ ಆದಾಯ

Published : Aug 25, 2026, 02:15 PM IST

ಶಿವಮೊಗ್ಗ ಜಿಲ್ಲೆಯ ರಿಪ್ಪನಪೇಟೆ ಬಳಿಯ 'ಬರುವೆ' ಗ್ರಾಮದ ಪಿಕಲ್ಸ್, ರಾಜ್ಯದಾದ್ಯಂತ ಪ್ರಸಿದ್ಧಿ ಪಡೆದಿದೆ. ಸುಧೀಂದ್ರ ಹೆಬ್ಬಾರ್ ಅವರು ತಮ್ಮ ತಾಯಿಯ ಪಾಕವಿಧಾನದಿಂದ ಆರಂಭಿಸಿದ ಈ ಉದ್ಯಮವು ಇಂದು ದಿನಕ್ಕೆ 500-600 ಕೆಜಿ ಉಪ್ಪಿನಕಾಯಿ ಮಾರಾಟ ಮಾಡಿ, ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುತ್ತಿದೆ.

PREV
16
ರಿಪ್ಪನಪೇಟೆ ಭಾಗದಲ್ಲಿ ಸಿಗುವ ಉಪ್ಪಿನಕಾಯಿ

ಊಟ ಮಾಡುವಾಗ ತಟ್ಟೆಯಲ್ಲಿ ಉಪ್ಪಿನಕಾಯಿಯ ಒಂದು ತುಂಡಿದ್ರೆ ರುಚಿ ಹೆಚ್ಚಾಗುತ್ತದೆ. ಇಂದು ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳ ಬಗೆ ಬಗೆಯ ಉಪ್ಪಿನಕಾಯಿಗಳು ಸಿಗುತ್ತವೆ. ದೊಡ್ಡ ದೊಡ್ಡ ಕಂಪನಿಗಳಿಗೆ ನಮ್ಮ ಶಿವಮೊಗ್ಗ ಜಿಲ್ಲೆಯ ರಿಪ್ಪನಪೇಟೆ ಭಾಗದಲ್ಲಿ ಸಿಗುವ ಉಪ್ಪಿನಕಾಯಿ ಟಕ್ಕರ್ ಕೊಡುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿಯೂ ಸಿಗುತ್ತದೆ. ಆ ಉಪ್ಪಿನಕಾಯಿ ಯಾವುದು ಎಂದು ನೋಡೋಣ ಬನ್ನಿ.

26
ಹೆಬ್ಬಾರ್ ಪಿಕಲ್ಸ್

ಹೆಬ್ಬಾರ್ ಪಿಕಲ್ಸ್ ಅಂದ್ರೆ ಬಹುತೇಕರಿಗೆ ಗೊತ್ತಿರುತ್ತದೆ. ಶಿವಮೊಗ್ಗ ಜಿಲ್ಲೆಯ ರಿಪ್ಪನಪೇಟೆ ಭಾಗದ 'ಬರುವೆ' ಹೆಸರಿನ ಗ್ರಾಮದಲ್ಲಿ ಹೆಬ್ಬಾರ್ ಕಂಪನಿಯ ರುಚಿಕರ ಮತ್ತು ಶುದ್ದವಾದ ಬಗೆ ಬಗೆಯ ಉಪ್ಪಿನಕಾಯಿಗಳು ಸಿದ್ದವಾಗುತ್ತವೆ. Hebbar Pickles ಮಾಲೀಕರಾಗಿರುವ ಸುಧೀಂದ್ರ ಹೆಬ್ಬಾರ್ ಅವರು ಉದ್ಯಮ ಆರಂಭವಾದದ್ದು ಹೇಗೆ? ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಉಪ್ಪಿನಕಾಯಿ ಮಾರಾಟವಾಗುತ್ತೆ ಎಂಬುದನ್ನು ಯುಟ್ಯೂಬ್ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ.

36
ಪಿಯುಸಿವರೆಗೂ ಓದಿರುವ ಸುಧೀಂದ್ರ

ಪಿಯುಸಿವರೆಗೂ ಓದಿರುವ ಸುಧೀಂದ್ರ ಅವರು ತಂದೆ ಸತ್ಯನಾರಾಯಣ ಅವರ ನಿಧನದ ಬಳಿಕ ಕುಟುಂಬದ ಹೋಟೆಲ್ ನಡೆಸುವ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಈ ವೇಳೆ ತಾಯಿ ರೇವತಿ ಅವರು ತಯಾರಿಸುತ್ತಿದ್ದ ಉಪ್ಪಿನಕಾಯಿ ವ್ಯಾಪಾರ ವಿಸ್ತರಿಸುವ ನಿರ್ಧಾರಕ್ಕೆ ಬರುತ್ತಾರೆ. ತಾಯಿ ಬಳಿಕ ಸುಧೀಂದ್ರ ಅವರಿಗೆ ಪತ್ನಿ ಸಾಥ್ ನೀಡುತ್ತಿದ್ದಾರೆ. ಪತಿ-ಪತ್ನಿ ಜೊತೆಯಾಗಿ ಹೋಟೆಲ್ ಜೊತೆ ಉಪ್ಪಿನಕಾಯಿ ವ್ಯವಹಾರ ನಡೆಸಿಕೊಂಡು ಹೋಗುತ್ತಿದ್ದಾರೆ.

46
ದಿನಕ್ಕೆ ಎಷ್ಟು ಉಪ್ಪಿನಕಾಯಿ ಉತ್ಪಾದನೆ?

ಸುಧೀಂದ್ರ ಹೆಬ್ಬಾರ್ ಅವರ ಪ್ರಕಾರ, ದಿನಕ್ಕೆ 500 ರಿಂದ 600 ಕೆಜಿಯಷ್ಟು ಉಪ್ಪಿನಕಾಯಿ ಮಾರಾಟವಾಗುತ್ತದೆ. ವರ್ಷಕ್ಕೆ ಒಂದೂವರೆ ಕೋಟಿಯಷ್ಟು ಬಂಡವಾಳವನ್ನು ಹಾಕಲಾಗುತ್ತದೆ. ಮಾವಿನಕಾಯಿ ಸೀಸನ್‌ನಲ್ಲಿ ಮಾವು ಖರೀದಿಗಾಗಿ ಕೋಟಿಯಷ್ಟು ಬಂಡವಾಳ ಬೇಕಾಗುತ್ತದೆ. ನಮಗೆ ವರ್ಷದಲ್ಲಿ ಮೂರು ತಿಂಗಳು ಮಾತ್ರ ಮಾವು ಸಿಗುತ್ತದೆ. ಹಾಗಾಗಿ ಈ ಸಮಯದಲ್ಲಿ ಅತ್ಯಧಿಕ ಮಾವು ಖರೀದಿಸುತ್ತೇವೆ ಅಂತಾರೆ. ಉಪ್ಪಿನಕಾಯಿ ವ್ಯವಹಾರದಿಂದಲೇ ವರ್ಷಕ್ಕೆ 3 ರಿಂದ 4 ಕೋಟಿಯಷ್ಟು ಟರ್ನ್ ಓವರ್ ಇದೆ ಅಂತಾರೆ ಸುಧೀಂದ್ರ ಹೆಬ್ಬಾರ್.

56
12 ಕಾರ್ಮಿಕರಿಗೆ 365 ದಿನವೂ ಇರುತ್ತೆ ಕೆಲಕಸ

ಸದ್ಯ ಹೆಬ್ಬಾರ್ ಪಿಕಲ್ಸ್ ತಯಾರಿಕಾ ಘಟಕದಲ್ಲಿ 12 ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಾರೆ. ಎಲ್ಲಾ ಕಾರ್ಮಿಕರಿಗೆ ಊಟ, ತಿಂಡಿಯನ್ನು ಉಚಿತವಾಗಿ ನೀಡಲಾಗುತ್ತದೆ. 12 ಕಾರ್ಮಿಕರು ವರ್ಷದ 365 ದಿನವೂ ಕೆಲಸ ಕೊಡುತ್ತೇವೆ. ಕೆಲ ಸಂದರ್ಭಗಳಲ್ಲಿ ಬೇಕಾದ್ರೆ ಹೆಚ್ಚು ಕಾರ್ಮಿಕರನ್ನು ಬಳಸಿಕೊಳ್ಳುತ್ತೇವೆ. ಅತ್ಯಧಿಕವಾಗಿ ಬೆಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ಮಂಗಳೂರು ಭಾಗದಲ್ಲಿ ಉಪ್ಪಿನಕಾಯಿಗಳು ಪೂರೈಕೆ ಆಗುತ್ತವೆ. ನಾವು ಪ್ರೊಡಕ್ಟ್ ಮಾರಾಟ ಮಾಡಲು ಯಾವುದೇ ಪ್ರಚಾರ ಸಹ ಮಾಡಿಲ್ಲ ಎಂದು ಸುಧೀಂದ್ರ ಹೆಬ್ಬಾರ್ ಹೇಳುತ್ತಾರೆ.

66
ಒಟ್ಟು 16 ಬಗೆಯ ಉಪ್ಪಿನಕಾಯಿ

ಇನ್ನು ಉಪ್ಪಿನಕಾಯಿ ತಯಾರಿಸಲು ಬೇಕಾದಂತಹ ನಿಂಬೆಹಣ್ಣು, ಮಾವು, ಗಾಂಧಾರಿ ಮೆಣಸು, ನೆಲ್ಲಿಕಾಯಿ, ಮೆಣಸು ಸೇರಿದಂತೆ ಇನ್ನಿತರ ಪದಾರ್ಥಗಳನ್ನು ವಿಜಯಪುರ, ಆಂಧ್ರ ಪ್ರದೇಶ, ಬ್ಯಾಡಗಿ, ಕೊಡಗು ಸೇರಿದಂತೆ ವಿವಿಧ ಭಾಗಗಳಿಂದ ತರಿಸಿಕೊಳ್ಳಲಾಗುತ್ತದೆ. ಒಟ್ಟು 16 ಬಗೆಯ ಉಪ್ಪಿನಕಾಯಿ , ಮೂರು ರೀತಿಯ ಚಟ್ನಿ (ನೆಲ್ಲಿಕಾಯಿ, ಮಾವಿನಕಾಯಿ, ಹುಣಸೆ) ಹಾಗೆಯೇ ಚಟ್ನಿಪುಡಿಗಳನ್ನು ತಯಾರಿಸಲಾಗುತ್ತದೆ. ಉಪ್ಪಿನಕಾಯಿ ಎಷ್ಟು ಮತ್ತು ಹೇಗೆ ಹಾಕಬೇಕು ಅನ್ನೋದು ನನಗೆ ಮತ್ತು ಪತ್ನಿಗೆ ಮಾತ್ರ ಗೊತ್ತು. ಯಾರಿಗೂ ನಮ್ಮ ಸೀಕ್ರೆಟ್ ಹೇಳಿಕೊಟ್ಟಿಲ್ಲ ಎಂದು ಹೇಳಿ ಸುಧೀಂದ್ರ ಹೆಬ್ಬಾರ್ ನಗುತ್ತಾರೆ.

Read more Photos on
click me!

Recommended Stories