ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಲ್ಲಿಕಾರ್ಜುನ್ ಬಸಪ್ಪ ವಗ್ಗರ್ ಎಂಬ ರೈತ, ತಮ್ಮ ಗ್ರಾಮದಲ್ಲಿಯೇ ಹೈನುಗಾರಿಕೆಯನ್ನು ಬಳಸಿ ಖೋವಾ ತಯಾರಿಸುವ ಉದ್ಯಮವನ್ನು ಆರಂಭಿಸಿದ್ದಾರೆ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಶುರುವಾದ ಈ ಉದ್ಯಮವು ಇಂದು ಉತ್ತರ ಕರ್ನಾಟಕದಾದ್ಯಂತ ಜನಪ್ರಿಯವಾಗಿದೆ.
ಉದ್ಯಮಿಯಾಗಲು ತುಂಬಾನೇ ಕಷ್ಟಪಡಬೇಕು ಎಂಬ ಮಾತನ್ನು ಸುಳ್ಳು ಮಾಡಿದವರು ನಮ್ಮ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮಲ್ಲಿಕಾರ್ಜುನ್ ಬಸಪ್ಪ ವಗ್ಗರ್. ಇವರು ತಮ್ಮೂರಿನಲ್ಲಿಯೇ ಆರಂಭಿಸಿದ ಉದ್ಯಮ ಇಂದು ಉತ್ತರ ಕರ್ನಾಟಕ ಭಾಗದಲ್ಲಿ ಜನಪ್ರಿಯಗೊಂಡಿದೆ. ಮಲ್ಲಿಕಾರ್ಜುನ್ ಬಸಪ್ಪ ವಗ್ಗರ್ ಅವರು ಸವದತ್ತಿ ತಾಲೂಕಿನ ಕಾರಿಮನಿ ಗ್ರಾಮದವರು.
25
ಗ್ರಾಮದಲ್ಲಿಯೇ ಖೋವಾ ತಯಾರಿಕೆ
ಕಾರಿಮನಿ ರೈತರು ಸಣ್ಣ ಪ್ರಮಾಣದಲ್ಲಿ ಹೈನುಗಾರಿಕೆಯನ್ನು ಉಪಕಸಬುನ್ನಾಗಿ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿಯ ಹೈನುಗಾರಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದ ಮಲ್ಲಿಕಾರ್ಜುನ್ ಅವರು ತಾವೇ ಹಾಲು ಸಂಗ್ರಹಣೆ ಮಾಡಿಕೊಳ್ಳಲು ಆರಂಭಿಸಿದರು. ಈ ಹಾಲಿನಿಂದ ತಮ್ಮ ಜಮೀನಿನಲ್ಲಿ ಸೌದೆ ಒಲೆ ಮಾಡಿಕೊಂಡು ಖೋವಾ (Khoa) ತಯಾರಿಸಲು ಆರಂಭಿಸಿದರು. ನಂತರದ ದಿನಗಳಲ್ಲಿ ಅತ್ಯಾಧುನಿಕ ಯಂತ್ರಗಳನ್ನು ಬಳಸಿಕೊಂಡು ಖೋವಾ ತಯಾರಿಸುತ್ತಿದ್ದಾರೆ.
35
ಶುದ್ಧ ಖೋವಾ, ಸಿಹಿ ಪದಾರ್ಥ
ಯುಟ್ಯೂಬ್ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಮಲ್ಲಿಕಾರ್ಜುನ್ ಬಸಪ್ಪ ವಗ್ಗರ್, ಆರಂಭದ ದಿನಗಳಲ್ಲಿ ಖೋವಾ ತಯಾರಿಸಿ ಧಾರವಾಡಕ್ಕೆ ಕಳುಹಿಸಲಾಗುತ್ತಿತ್ತು. ಇದೀಗ ನಾವೇ ಶುದ್ದ ಖೋವಾ ಮತ್ತು ಅದರ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತೇವೆ. ಜನರೇ ನಮ್ಮ ಉತ್ಪನ್ನದ ಪ್ರಚಾರ ಮಾಡಿದ್ದರಿಂದ ಉತ್ತಮ ಮಾರುಕಟ್ಟೆಯನ್ನು ಹೊಂದಿದೆ ಎಂದು ತಿಳಿಸಿದರು.
ಮಲ್ಲಿಕಾರ್ಜುನ್ ಅವರ ಡೈರಿಯಲ್ಲಿ ದಿನಕ್ಕೆ ಅಂದಾಜು 600 ಲೀಟರ್‌ನಷ್ಟು ಹಾಲು ಸಂಗ್ರಹವಾಗುತ್ತದೆ. ಈ 600 ಲೀಟರ್ ಹಾಲಿನಿಂದ 150 ಕೆಜಿಯಷ್ಟು ಸಿದ್ದವಾಗುತ್ತದೆ. 1 ಕೆಜಿ ಖೋವಾ ಬೆಲೆ 240 ರೂಪಾಯಿ ಆಗಿದೆ. ಗ್ರಾಹಕರಿದ್ದ ಸ್ಥಳಕ್ಕೆ ಖೋವಾ ರವಾನಿಸಲು ಹೆಚ್ಚುವರಿಯಾಗಿ ಸಾರಿಗೆ ವೆಚ್ಚ ಸೇರಿಸಲಾಗುತ್ತದೆ. ಖೋವಾ ಜೊತೆ ಮಿಲ್ಕ್ ಕೇಕ್, ಪೇಡಾ, ಕಲಾಕಂದ್ ಮತ್ತು ಲಾಡುಗಳನ್ನು ಸಹ ತಯಾರಿಸಲಾಗುತ್ತದೆ.
55
ಗ್ರಾಮದಲ್ಲಿ ಹೈನುಗಾರಿಕೆ ಹೆಚ್ಚಳ
ತಮ್ಮ 5 ಎಕರೆ ಕೃಷಿಭೂಮಿಯಲ್ಲಿ ಉದ್ಯಮ ಕಟ್ಟಿಕೊಂಡಿರುವ ಮಲ್ಲಿಕಾರ್ಜುನ್ ಅವರು ಕಬ್ಬು, ಮೆಕ್ಕೆಜೋಳ ಸಹ ಬೆಳೆಯುತ್ತಾರೆ. ಮೂವರು ಕಾರ್ಮಿಕರು ಇವರ ಬಳಿ ಕೆಲಸ ಮಾಡುತ್ತಿದ್ದು, ಮಲ್ಲಿಕಾರ್ಜುನ್ ವಗ್ಗರ್ ಅವರ ಡೈರಿಯಿಂದಾಗಿ ಕಾರಿಮನಿ ಗ್ರಾಮದಲ್ಲಿ ಬಹುತೇಕ ರೈತರೆಲ್ಲರೂ ಹೈನುಗಾರಿಕೆ ಆರಂಭಿಸಿದ್ದಾರೆ. ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಬಾಗಲಕೋಟೆ, ಗದಗ, ಇಳಕಲ್, ಜಮಖಂಡಿ ಸೇರಿದಂತೆ ಸುತ್ತಲಿನ ನಗರಗಳಿಗೆಲ್ಲಾ ಇಲ್ಲಿಯ ಖೋವಾ ರವಾನೆಯಾಗುತ್ತದೆ.