ಬಿ.ಎಸ್. ಯಡಿಯೂರಪ್ಪ ಮೊಮ್ಮಗ ಭಗತ್‌-ಖುಷಿ ಅದ್ಧೂರಿ ನಿಶ್ಚಿತಾರ್ಥ: ಫೋಟೋ ಹಂಚಿಕೊಂಡ ಸಂಸದ ಬಿ.ವೈ. ರಾಘವೇಂದ್ರ

Published : Nov 27, 2026, 08:07 AM IST

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ಪುತ್ರ ಭಗತ್ ಮತ್ತು ಖುಷಿ ಅವರ ನಿಶ್ಚಿತಾರ್ಥ ಸಮಾರಂಭವು ಸಡಗರದಿಂದ ನೆರವೇರಿದೆ. ಇದು ಕುಟುಂಬಸ್ಥರಿಗೆ ಮತ್ತು ಆಪ್ತರಿಗೆ ಸೀಮಿತವಾಗಿದ್ದು, ಅದ್ಧೂರಿ ವಿವಾಹ ನಡೆಸಲು ಸಿದ್ಧತೆಗಳು ನಡೆಯುತ್ತಿವೆ.

PREV
14

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗ ಹಾಗೂ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಪುತ್ರ ಭಗತ್ ಮತ್ತು ಖುಷಿ ಅವರ ನಿಶ್ಚಿತಾರ್ಥ ಸಮಾರಂಭವು ಸಂವಿಧಾನ ದಿನಾಚರಣೆಯಂದೇ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ನೆರವೇರಿದೆ.

24

ಈ ಶುಭ ಸಂದರ್ಭದ ಫೋಟೋಗಳನ್ನು ಸಂಸದ ಬಿ.ವೈ. ರಾಘವೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. "ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿಯ ಕೃಪೆ ಮತ್ತು ಪೂಜ್ಯ ತಂದೆಯವರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಶೀರ್ವಾದದೊಂದಿಗೆ, ನಮ್ಮ ಪುತ್ರ ಭಗತ್ ಮತ್ತು ಖುಷಿ ಅವರ ನಿಶ್ಚಿತಾರ್ಥ ಸಮಾರಂಭವು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ನೆರವೇರಿತು. ಜೀವನದ ಈ ಹೊಸ ಪಯಣ ಆರಂಭಿಸುತ್ತಿರುವ ನವಜೋಡಿಗೆ ನಿಮ್ಮೆಲ್ಲರ ಪ್ರೀತಿ, ಹಾರೈಕೆ ಮತ್ತು ಆಶೀರ್ವಾದ ಸದಾ ಇರಲಿ ಎಂದು ಕೋರುತ್ತೇವೆ" ಎಂದು ರಾಘವೇಂದ್ರ ಅವರು ಬರೆದುಕೊಂಡಿದ್ದಾರೆ.

34

ದೊಡ್ಡ ವೇದಿಕೆಯ ಮೇಲೆ ನಡೆದ ಈ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಬಂಧು-ಬಳಗದವರು ಸೇರಿದಂತೆ ಕುಟುಂಬದ ಸದಸ್ಯರೆಲ್ಲರೂ ಪಾಲ್ಗೊಂಡಿದ್ದು, ನವ ಜೋಡಿಗಳು ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಸಂಸದ ರಾಘವೇಂದ್ರ ಅವರು ನಿಶ್ಚಿತಾರ್ಥದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಂತೆ, ಸಾವಿರಾರು ಮಂದಿ ಭಗತ್ ಹಾಗೂ ಖುಷಿ ಜೋಡಿಗೆ ಶುಭ ಹಾರೈಸಿದ್ದಾರೆ.

44

ನಿಶ್ಚಿತಾರ್ಥ ಸಮಾರಂಭವು ಕುಟುಂಬಸ್ಥರಿಗೆ ಸೀಮಿತವಾಗಿದ್ದ ಕಾರಣ ರಾಜಕೀಯ ನಾಯಕರಿಗೆ ಆಹ್ವಾನ ಇರಲಿಲ್ಲ ಎನ್ನಲಾಗಿದೆ. ಆದರೆ, ಮುಂಬರುವ ಮದುವೆಯನ್ನು ಅತ್ಯಂತ ಅದ್ಧೂರಿಯಾಗಿ ನೆರವೇರಿಸಲು ಕುಟುಂಬವು ಸಿದ್ಧತೆ ನಡೆಸುತ್ತಿದೆ. ವಿವಾಹ ಮಹೋತ್ಸವಕ್ಕೆ ರಾಜಕೀಯ ನಾಯಕರು ಸೇರಿದಂತೆ ದೇಶದ ಎಲ್ಲ ಆಪ್ತ ಗಣ್ಯರನ್ನೂ ಆಹ್ವಾನಿಸುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ.

Read more Photos on
click me!

Recommended Stories