ಬಹುನಿರೀಕ್ಷಿತ ತಾಳಗುಪ್ಪ-ಹುಬ್ಬಳ್ಳಿ ಮಾರ್ಗದ ಕುರಿತು ಮಹತ್ವದ ಅಪ್‌ಡೇಟ್ ನೀಡಿದ ಸಂಸದರು

Published : Jun 13, 2026, 10:10 AM IST

ಸಂಸದ ಬಿ.ವೈ.ರಾಘವೇಂದ್ರ ಅವರು ತಾಳಗುಪ್ಪ-ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣ ಖಚಿತ ಎಂದು ಭರವಸೆ ನೀಡಿದ್ದಾರೆ. ₹3.93 ಕೋಟಿ ವೆಚ್ಚದ ಸಮೀಕ್ಷೆ ಪೂರ್ಣಗೊಂಡಿದ್ದು, ಡಿಪಿಆರ್ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಾಗುವುದು. 

PREV
14
ತಾಳಗುಪ್ಪ-ಹುಬ್ಬಳ್ಳಿ ಸಂಪರ್ಕದ ರೈಲು ಮಾರ್ಗ

ತಾಳಗುಪ್ಪ-ಹುಬ್ಬಳ್ಳಿ ಸಂಪರ್ಕದ ರೈಲು ಮಾರ್ಗ ಖಚಿತವಾಗಿ ಆಗುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಶುಕ್ರವಾರ ತಾಳಗುಪ್ಪ ರೈಲ್ವೆ ನಿಲ್ದಾಣದ ಮೇಲ್ದರ್ಜೆ ಕಾಮಗಾರಿ ವೀಕ್ಷಣೆಗೆ ಬಂದಾಗ ತಮ್ಮನ್ನು ಭೇಟಿಯಾದ ಸಿದ್ದಾಪುರ ರೈಲ್ವೆ ಹೋರಾಟ ಸಮಿತಿಯ ಸದಸ್ಯರೊಡನೆ ಮಾತನಾಡಿದರು.

24
ತಾಳಗುಪ್ಪ-ಹುಬ್ಬಳ್ಳಿ ರೈಲುಮಾರ್ಗದ ಸಮೀಕ್ಷೆ

2023-24ರ ಬಜೆಟನಲ್ಲಿ ₹3.93 ಕೋಟಿ ವೆಚ್ಚದಲ್ಲಿ ತಾಳಗುಪ್ಪ-ಹುಬ್ಬಳ್ಳಿ ರೈಲುಮಾರ್ಗದ ಸಮೀಕ್ಷೆ ನಡೆದು ಟೆಂಡರ್ ಪಡೆದ ಹೈದರಾಬಾದ್ ಮೂಲದ ಕಂಪನಿ ಎಫ್ಎಸ್ಎಲ್ ವರದಿ ಸಲ್ಲಿಸಿದೆ. ರೈಲ್ವೆ ಇಲಾಖೆ ಡಿಪಿಆರ್ ಸಿದ್ದಪಡಿಸಿ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಸಲ್ಲಿಸಿ ಅನಮೋದನೆ ಪಡೆದು ಬಹುದಶಕದ ಬೇಡಿಕೆಯಾದ ಮಾರ್ಗ ನಿರ್ಮಾಣ ಕಾರ್ಯವನ್ನು ತಾವು ಹಾಗೂ ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸೇರಿ ಕೈಗೊಳ್ಳುವ ಭರವಸೆ ನೀಡಿದರು. ರೈಲು ಮಾರ್ಗ ನಿರ್ಮಾಣ ಖಂಡಿತವಾಗಿ ಆಗುತ್ತದೆ. ಈ ಕುರಿತು ಸಂಶಯ ಬೇಡ ಎಂದರು.

34
ಸಿದ್ದಾಪುರ ರೈಲ್ವೆ ಹೋರಾಟ ಸಮಿತಿ

ಸಿದ್ದಾಪುರ ರೈಲ್ವೆ ಹೋರಾಟ ಸಮಿತಿಯ ವಾಸುದೇವ ಬಿಳಗಿ, ನಾಗರಾಜ ದೋಶೆಟ್ಟಿ, ಗುರುನಾಥ ವೆರ್ಣೆಕರ್, ವೆಂಕಟರಮಣ ಮಡಿವಾಳ, ಕಾಶಿನಾಥ ಗುಡಿಗಾರ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ, ಪ್ರಸನ್ನ ಕೆರೆಕೈ, ರಾಜಶೇಖರ ಗಾಳಿಪುರ, ಮಲ್ಲಿಕಾರ್ಜುನ ಹಕ್ರೆ, ಮೋಹನ ಶೇಟ್ ಮತ್ತಿತರರಿದ್ದರು.

44
ತಾಳಗುಪ್ಪ-ಶಿರಸಿ ಮೂಲಕ ಹುಬ್ಬಳ್ಳಿ ರೈಲು ಮಾರ್ಗದ 2ನೇ ಹಂತದ ಸರ್ವೇ

ತಾಳಗುಪ್ಪ-ಶಿರಸಿ ಮೂಲಕ ಹುಬ್ಬಳ್ಳಿಗೆ ತೆರಳುವ ರೈಲು ಮಾರ್ಗದ ಸರ್ವೇ ಕಾರ್ಯ ಆರಂಭಗೊಂಡಿದ್ದು, ಕಳೆದ 2 ವರ್ಷಗಳ ಹಿಂದೆ ಸರ್ವೆ ನಡೆಸಿ, ಗಲ್ಲು ಗುರುತು ಹಾಕಲಾಗಿದೆ. ಇದೀಗ ಎರಡನೇ ಹಂತದ ಸರ್ವೇ ಪ್ರಾರಂಭಗೊಂಡಿದೆ. ಸಿದ್ದಾಪುರ ತಾಲೂಕಿನ ಕಾವಂಚೂರು, ಸಿದ್ದಾಪುರ ಹಾಗೂ ಕುಣಜಿಯಲ್ಲಿ ರೈಲ್ವೆ ನಿಲ್ದಾಣ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ತೆಲಗುಂದ್ಲಿ, ಶಿರಸಿ ತಾಲೂಕಿನಲ್ಲಿ ಒಡ್ಡಿನಕೊಪ್ಪ, ಒಕ್ಕಲಕೊಪ್ಪ, ಗೌಡಳ್ಳಿ, ಮಳಲಗಾಂವ್ ಹಾಗೂ ಗೋಟಗಾಡಿ ಬಳಿ ನಿಲ್ದಾಣ ಸ್ಥಾಪನೆಗೆ ನಕ್ಷೆ ಸಿದ್ಧವಾಗಿದೆ.

Read more Photos on
click me!

Recommended Stories