ಮಳೆಗಾಲದಲ್ಲಿ ಜಲಾವೃತವಾಗುವ ಪ್ರದೇಶಗಳಾದ ಹುಳಿಮಾವು ಕೆರೆ ಜಂಕ್ಷನ್, ಸಾಗರ್ ಜಂಕ್ಷನ್‌ನಿಂದ ಸಾಗರ್ ಆಸ್ಪತ್ರೆ, ಹೆಚ್.ಎಸ್.ಆರ್ ಲೇಔಟ್ 14ನೇ ಮುಖ್ಯ ರಸ್ತೆ, ಸೋನಿ ವರ್ಲ್ಡ್ ಜಂಕ್ಷನ್, ಹೊರವರ್ತುಲ ರಸ್ತೆ, ಹೆಚ್.ಎಸ್.ಆರ್ ಲೇಔಟ್ 5ನೇ ಮುಖ್ಯ ರಸ್ತೆ, ಶ್ರೀ ರಂಗಂ ಜಂಕ್ಷನ್, ಬೆಳ್ಳಂದೂರು - ಇಬ್ಬಲೂರು ಜಂಕ್ಷನ್, ವಿಪ್ರೋ ಜಂಕ್ಷನ್-ಸರ್ಜಾಪುರ ರಸ್ತೆ, ರೂಪೇನ ಅಗ್ರಹಾರ, ಮಡಿವಾಳ ಅಯ್ಯಪ್ಪ ಜಂಕ್ಷನ್‌ಗಳಲ್ಲಿ ಮಳೆ ಸಂದರ್ಭದಲ್ಲಿ ತೀವ್ರ ನಿಗಾ ವಹಿಸಿ ತುರ್ತು ಪರಿಹಾರ ಕ್ರಮ ವಹಿಸುವಂತೆ ಎಂಜಿನಿಯರ್‌ಗಳಿಗೆ ತಿಳಿಸಿದರು.