ಮಾಜಿ ಸಚಿವ ರಮೇಶ್ ಜಾರಕಿಹೊಳಿ, ವಾಲ್ಮೀಕಿ ಸಮಾಜವನ್ನು ಎಸ್‌ಟಿ ವರ್ಗಕ್ಕೆ ಸೇರಿಸಲಾಗುವುದಿಲ್ಲ ಎಂದು ಹೇಳಿಕೆ ನೀಡಿದ ಹುಕ್ಕೇರಿ ತಹಶೀಲ್ದಾರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೌನ ವಹಿಸಿರುವ ಸತೀಶ್ ಜಾರಕಿಹೊಳಿ ಕಾರ್ಯವೈಖರಿಯನ್ನು ಪ್ರಶ್ನಿಸಿ, ತಹಶೀಲ್ದಾರ್ ಬಂಧನಕ್ಕೆ ಆಗ್ರಹಿಸಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಳಗಾವಿ ನಗರದ ಸುದ್ದಿಗೋಷ್ಟಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಆರಂಭದಲ್ಲಿಯೇ ದುಖಃದಿಂದ ಸುದ್ದಿಗೋಷ್ಠಿಯಿಂದ ಮಾಡುತ್ತಿದ್ದೇನೆ ಎಂದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ನಡೆಯಿಂದ ಮನನೊಂದು ಮಾತನಾಡುತ್ತಿದ್ದೇನೆ ಎಂದು ಹೇಳಿದರು.
25
ರಮೇಶ್ ಜಾರಕಿಹೊಳಿ ಅಸಮಾಧಾನ
ಮಾಜಿ ಸಂಸದ ರಮೇಶ್ ಕತ್ತಿ ವಾಲ್ಮೀಕಿ ಸಮಾಜದ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದರು. ಈ ಬಗ್ಗೆ ಕಾನೂನು ಹೋರಾಟ ನಡೆಯುತ್ತಿದೆ. ಹುಕ್ಕೇರಿ ಗ್ರೆಡ್- 2 ತಹಶೀಲ್ದಾರ ವಾಲ್ಮೀಕಿ ಸಮಾಜ ಎಸ್‌ಟಿ ಗೆ ಬರಲ್ಲ ಎಂದು ಬರೆದುಕೊಟ್ಟಿದ್ದಾರೆ. ಇದು ದೊಡ್ಡ ದುರಂತ ಎಂದು ರಮೇಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.
35
ಅಹಿಂದ ಸಂಘಟನೆ
ಅಹಿಂದ ಸಂಘಟನೆಗೆ ಬೆಂಬಲ ಕೊಟ್ಟಿದ್ದೇವೆ. ಈ ಸಂಘಟನೆ ಮೂಲಕವೇ ಅನೇಕರು ಸಚಿವರು, ಸಿಎಂ ಆಗಿದ್ದಾರೆ. ವಾಲ್ಮೀಕಿ, ದಲಿತ ಹಾಗೂ ಹಿಂದುಳಿದ ಸಮಾಜದ ನಾನು ಹೋರಾಟ ಮಾಡುತ್ತೇನೆ. ಹುಕ್ಕೇರಿ ತಹಶೀಲ್ದಾರ್ ಅಮಾನತು ಆಗಬೇಕು ಮತ್ತು ಬಂಧನ ಮಾಡಿ ಸಮಗ್ರ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ತಹಶೀಲ್ದಾರ್‌ರು ಯಾರ ಒತ್ತಡದಿಂದ ಬರೆದುಕೊಟ್ಟಿದ್ದಾರೆ ಗೊತ್ತಿಲ್ಲ. ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ಸಹ ತಂದಿದ್ದೇನೆ. ಈ ಬಗ್ಗೆ ಸಚಿವರಾಗಿರುವ ಸತೀಶ್ ಜಾರಕಿಹೊಳಿ ಪ್ರಶ್ನೆ ಮಾಡದೇ ಇರೋದು ದುರಂತ ಎಂದು ಸೋದರನ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ರಮೇಶ್ ಕತ್ತಿಯ ಕೇಸ್ ನಲ್ಲಿ ವಾಲ್ಮೀಕಿ ಸಮಾಜ ಎಸ್‌ಟಿಗೆ ಬರಲ್ಲ. ಇದು ಪ್ರವರ್ಗ ಒಂದು ಬರಲಿದೆ ಎಂದು ಹೇಳಿದ್ದಾರೆ. ಬೇಡರು ಅವಾಚ್ಯ ಶಬ್ದವನ್ನು ರಮೇಶ ಕತ್ತಿ ಬಳಕೆ ಮಾಡಿದ್ದಾರೆ. ಈ ವಿಷಯವನ್ನು ಹೀಗೆಯೇ ಬಿಟ್ಟರೆ ಮುಂದಿನ ದಿನಗಳಲ್ಲಿ ನಮ್ಮ ಸಮಾಜಕ್ಕೆ ಅನ್ಯಾಯವಾಗಲಿದೆ ಎಂದು ರಮೇಶ್ ಜಾರಕಿಹೊಳಿ ಆತಂಕ ವ್ಯಕ್ತಪಡಿಸಿದರು.