ವಿಶ್ವದ 100 ಬೆಸ್ಟ್ ನಗರಗಳ ಪಟ್ಟಿ ಪ್ರಕಟ; ಲಂಡನ್ ನಂ.1, ಬೆಂಗಳೂರಿಗೂ ಇದೆ ಸ್ಥಾನ, ಭಾರತದ 4 ಪ್ರಮುಖ ನಗರಗಳು 100ರ ಒಳಗೆ ಸ್ಥಾನ ಪಡೆದಿದೆ. ಆದರೆ ನಮ್ಮ ಬೆಂಗಳೂರು ಅಗ್ರಸ್ಥಾನದಲ್ಲಿದೆ.
ಪ್ರತಿ ವರ್ಷ ವಿಶ್ವದ ಪ್ರಮುಖ ನಗರಗಳ ರ್ಯಾಕಿಂಗ್ ಪ್ರವಾಸಿಗರ ಪ್ರಯಾಣಕ್ಕೆ ಮತ್ತಷ್ಟು ಉತ್ಸಾಹ ಮೂಡಿಸುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ರೆಸೋನೆನ್ಸ್ ಕನ್ಸಲ್ಟೆನ್ಸಿ ವಿಶ್ವದ ಬೆಸ್ಟ್ ನಗರಗಳ ಪಟ್ಟಿ ಬಿಡುಗಡೆ ಮಾಡಿದೆ. ಬರೋಬ್ಬರಿ 270 ನಗರಳನ್ನು ಅಲ್ಲಿನ ಜೀವನ ಮಟ್ಟ, ಆದಾಯ, ಅವಕಾಶ, ಸಾಂಸ್ಕೃತಿಕ ಹಿರಿಮೆ, ಜೀವನ ಸೇರಿದಂತೆ ಹಲವು ಆಯಾಮ ಹಾಗೂ ಹಂತಗಳಲ್ಲಿ ಮೌಲ್ಯಮಾಪನ ಮಾಡಿ ಈ ಪಟ್ಟಿ ಪ್ರಕಟಿಸಿದೆ. ಈ ಪಟ್ಟಿ ಬೆಂಗಳೂರಿಗರ ಸಂಭ್ರಮ ಡಬಲ್ ಮಾಡಿದೆ.
25
ಟಾಪ್ 30 ಪಟ್ಟಿಯಲ್ಲಿ ಬೆಂಗಳೂರು
ವಿಶ್ವದ ಬೆಸ್ಟ್ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಟಾಪ್ 30ಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ನಗರ. ವಿಶ್ವದ ಬೆಸ್ಟ್ ಸಿಟಿಯಲ್ಲಿ ಬೆಂಗಳೂರು 29ನೇ ಸ್ಥಾನ ಪಡೆದಿದೆ. ಹಸಿರು ಬೆಂಗಳೂರು, ಇಲ್ಲಿನ ಜೀವನ ಮಟ್ಟ, ಆದಾಯ, ಸಂಸ್ಕೃತಿ, ಆಹಾರ,ವಾತಾವರಣ ಸೇರಿದಂತೆ ಹಲವು ಕಾರಣಗಳಿಂದ ಬೆಂಗಳೂರು ವಿಶ್ವದ 29ನೇ ಬೆಸ್ಟ್ ನಗರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
35
ನಮ್ಮ ಬೆಂಗಳೂರು ನಮ್ಮ ಹೆಮ್ಮೆ
ಬೆಂಗಳೂರು ವಿಶ್ವದ ರ್ಯಾಂಕಿಂಗ್ ಪಟ್ಟಿಯಲ್ಲಿ ಪ್ರಮುಖ ಸ್ಥಾನದಲ್ಲಿದೆ. ಐಟಿ ಸಿಟಿ, ಅತೀ ಹೆಚ್ಚು ವೇತನ ನೀಡುವ ಭಾರತದ ನಗರ, ಉದ್ಯಾನ ನಗರ ಸೇರಿದಂತೆ ಹಲವು ಕಾರಣಗಳಿಂದ ಬೆಂಗಳೂರು ಜಾಗತಿಕ ಪಟ್ಟಿಯಲ್ಲಿದೆ. ಪ್ರಮುಖವಾಗಿ ಬೆಂಗಳೂರಿನ ಕೂಲ್ ಕೂಲ್ ವಾತಾವರಎ ಎಲ್ಲರೂ ಇಷ್ಟಪಡುತ್ತಾರೆ. ಇದೇ ಕಾರಣದಿಂದ ಬೆಂಗಳೂರಿಗೆ ಬಂದವರು ಇಲ್ಲೇ ಖಾಯಂ ಆಗುತ್ತಾರೆ.
ವಿಶ್ವದ 100 ಬೆಸ್ಟ್ ನಗರಗಳ ಪೈಕಿ ಬೆಂಗಳೂರು 29ನೇ ಸ್ಥಾನ ಪಡೆದಿದೆ. 100ರ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಇತರ ಮೂರು ನಗರಗಳೆಂದರೆ ಮುಂಬೈ, ದೆಹಲಿ ಹಾಗೂ ಹೈದರಾಬಾದ್. ಭಾರತದ ಒಟ್ಟು ನಾಲ್ಕು ನಗರ ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಮುಂಬೈ 40ನೇ ಸ್ಥಾನ ಪಡೆದರೆ, ದೆಹಲಿ 54 ಹಾಗೂ ಹೈದರಾಬಾದ್ 82ನೇ ಸ್ಥಾನದಲ್ಲಿದೆ.
ಭಾರತದ ಇತರ ಮೂರು ನಗರಳಿಗೂ ಸ್ಥಾನ
55
ಮೊದಲ ಸ್ಥಾನದಲ್ಲಿ ಲಂಡನ್
ವಿಶ್ವದ ಬೆಸ್ಟ್ ಸಿಟಿ ಪೈಕಿ ಲಂಡನ್ ಮೊದಲ ಸ್ಥಾನದಲ್ಲಿದೆ. ವಿಶೇಷ ಅಂದರೆ ಸತತ 11ನೇ ಬಾರಿಗೆ ಲಂಡನ್ ಮೊದಲ ಸ್ಥಾನ ಪಡೆದುಕೊಂಡಿದೆ. ಜೀವನ ಮಟ್ಟ, ಶುಚಿತ್ವ, ಶಾಪಿಂಗ್ ಸೇರಿದಂತೆ ಹಲವು ಕಾರಣಗಳಿಂದ ಲಂಡನ್ ಮೊದಲ ಸ್ಥಾನದಲ್ಲಿದೆ.