ಶಿವಮೊಗ್ಗ: ಅಪರಾಧ ಪತ್ತೆಯಲ್ಲಿ ತೊಡಗಿದ್ದ ಪೊಲೀಸ್ ಶ್ವಾನ ಗೌರಿ ಇನ್ನಿಲ್ಲ..!

Published : May 11, 2023, 11:56 AM IST

ಶಿವಮೊಗ್ಗ(ಮೇ.11):  ಅಪರಾಧ ಪತ್ತೆಯಲ್ಲಿ ತೊಡಗಿದ್ದ ಪೊಲೀಸ್ ಡಾಗ್ ಗೌರಿ(11) ಇಂದು(ಗುರುವಾರ) ನಿಧನ ಹೊಂದಿದೆ. ಪೊಲೀಸ್ ಡಾಗ್ ಗೌರಿಗೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರು ಅಂತಿಮ ಗೌರವ ಸಲ್ಲಿಸಿದ್ದಾರೆ. 

PREV
14
ಶಿವಮೊಗ್ಗ: ಅಪರಾಧ ಪತ್ತೆಯಲ್ಲಿ ತೊಡಗಿದ್ದ ಪೊಲೀಸ್ ಶ್ವಾನ ಗೌರಿ ಇನ್ನಿಲ್ಲ..!

ಮೃತ ಶ್ವಾನ ಗೌರಿ ಶಿವಮೊಗ್ಗ ಪೊಲೀಸ್ ಇಲಾಖೆಯ ಅಚ್ಚುಮೆಚ್ಚಿನದ್ದಾಗಿತ್ತು. ಸುಮಾರು 312 ಪ್ರಕರಣಗಳಲ್ಲಿ ಪೊಲೀಸರಿಗೆ ನೆರವಾಗಿದ್ದ ಹಾಗೂ 36 ಪ್ರಕರಣಗಳಲ್ಲಿ ಅಪರಾಧಿಗಳ ಸ್ಪಷ್ಟ ಸುಳಿವು ನೀಡಿದ್ದ ಗೌರಿ ಸಾವನ್ನಪ್ಪಿದೆ. 

24

ಲ್ಯಾಬ್ರಡಾರ್ ರಿಟೀವ್‌ ತಳಿಯ ಗೌರಿ ಅಪರಾಧ ಪತ್ತೆ ದಳದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಳು. 2012ರ ಆ.3ರಂದು ಹುಟ್ಟಿದ್ದ ಗೌರಿ 2013ರಲ್ಲಿ ಅಪರಾಧ ಪತ್ತೆ ದಳಕ್ಕೆ ಸೇರ್ಪಡೆಯಾಗಿದ್ದಳು. 

34

ಕನ್ನಡದಲ್ಲಿಯೇ ಕಮಾಂಡ್ ಪಡೆದುಕೊಂಡು ಕೆಲಸ ಮಾಡುತ್ತಿದ್ದುದು ಗೌರಿಯ ವಿಶೇಷತೆಯಾಗಿತ್ತು. ಹೀಗಾಗಿ ಶಿವಮೊಗ್ಗ ಪೊಲೀಸ್ ಇಲಾಖೆಯ ಅಚ್ಚುಮೆಚ್ಚಿನದ್ದಾಗಿತ್ತು. 

44

ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಈಕೆ ಅಸುನೀಗಿರುವುದು ಪೊಲೀಸ್‌ ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ಡಿಎಆರ್ ಮೈದಾನದಲ್ಲಿ ಗೌರಿಗೆ ಅಂತಿಮ ಗೌರವ ಸಲ್ಲಿಸಲಾಗಿದೆ. 

Read more Photos on
click me!

Recommended Stories