ಚಿಕ್ಕಮಗಳೂರಿನಲ್ಲಿ ಬ್ರೇಕ್ ಡೌನ್ ಆಗಿ ಕಾರು ಅಪಘಾತ, ಸಿ.ಟಿ.ರವಿ ಕ್ಯಾಲೆಂಡರ್‌ ಜತೆ ಮದ್ಯದ ಬಾಟಲ್, ಲಾಂಗ್ ಪತ್ತೆ!

Published : Mar 27, 2023, 02:58 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್  ಚಿಕ್ಕಮಗಳೂರು (ಮಾ.27): ಕಾರೊಂದರಲ್ಲಿ ಮದ್ಯ, ಸಿ.ಟಿ.ರವಿ ಭಾವಚಿತ್ರವುಳ್ಳ ಕ್ಯಾಲೆಂಡರ್ ಹಾಗೂ ಲಾಂಗ್ ಪತ್ತೆಯಾದ ಘಟನೆ ಚಿಕ್ಕಮಗಳೂರು ನಗರದ ಎಐಟಿ ಸರ್ಕಲ್ ನಲ್ಲಿ ನಿನ್ನೆ ತಡ ರಾತ್ರಿ ನಡೆದಿದೆ. ಬ್ರೇಕ್ ಡೌನ್ ಆಗಿ ಆಕ್ಸಿಡೆಂಟ್ ಆದ ಕಾರನ್ನು ಸ್ಥಳೀಯರು ತಳ್ಳಲು ಮುಂದಾದಾಗ ಚಾಲಕ ಹಾಗೂ ಅಲ್ಲಿದ್ದವರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. 

PREV
14
ಚಿಕ್ಕಮಗಳೂರಿನಲ್ಲಿ ಬ್ರೇಕ್ ಡೌನ್ ಆಗಿ ಕಾರು ಅಪಘಾತ, ಸಿ.ಟಿ.ರವಿ ಕ್ಯಾಲೆಂಡರ್‌ ಜತೆ ಮದ್ಯದ ಬಾಟಲ್, ಲಾಂಗ್ ಪತ್ತೆ!

ಬ್ರೇಕ್ ಡೌನ್ ಆಗಿ  ಅಪಘಾತಕ್ಕೆ ಒಳಗಾದ ಕಾರಿನಲ್ಲಿ ಮದ್ಯ, ಲಾಂಗ್, ಸಿ.ಟಿ.ರವಿ ಭಾವಚಿತ್ರವುಳ್ಳ ಕ್ಯಾಲೆಂಡರ್ ಪತ್ತೆಯಾಗಿದೆ. 

24

ಚಾಲಕ ಹಾಗೂ ಅಲ್ಲಿದ್ದವರ ನಡುವೆ ಮಾತಿನ ಚಕಮಕಿ ಬಳಿಕ ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಂತೆ ಕಾರು ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.

34

ಸ್ಥಳಕ್ಕೆ ನಗರ ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರಿನಲ್ಲಿದ್ದ ಮದ್ಯದ ಬಾಟಲಿಗಳು, ಕ್ಯಾಲೆಂಡರ್, ಲಾಂಗ್ ವಶಕ್ಕೆ ಪಡೆದುಕೊಂಡಿದ್ದಾರೆ.

44

ಕರ್ನಾಟಕ ಚುನಾವಣೆ ಹೊತ್ತಲ್ಲೇ ಲಕ್ಷಾಂತರ ಮೌಲ್ಯದ ಮಾಲ್​ ಕಂಡು ಸ್ಥಳೀಯರು ದಂಗಾಗಿದ್ದಾರೆ. ಕಾರಿನಲ್ಲಿ ಮದ್ಯ ಪತ್ತೆಯಾದ ಹಿನ್ನೆಲೆ OT ರವಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read more Photos on
click me!

Recommended Stories