ವೀರಂ ಸಿನಿಮಾ ನೋಡಿ ಅಮ್ಮ ಕಣ್ಣೀರಿಟ್ಟರು: ಪ್ರಜ್ವಲ್‌ ದೇವರಾಜ್‌ ಭಾವುಕ

Published : Apr 06, 2023, 10:07 AM IST

ಏಪ್ರಿಲ್‌ 7ರಂದು ವೀರಂ ಬಿಡುಗಡೆ. ಪ್ರಜ್ವಲ್ ದೇವರಾಜ್‌ಗೆ ಜೋಡಿಯಾಗಿ ಕಾಣಿಸಿಕೊಂಡಿರುವ ರಚಿತಾ ರಾಮ್...

PREV
16
ವೀರಂ ಸಿನಿಮಾ ನೋಡಿ ಅಮ್ಮ ಕಣ್ಣೀರಿಟ್ಟರು: ಪ್ರಜ್ವಲ್‌ ದೇವರಾಜ್‌ ಭಾವುಕ

 ಕುಮಾರ್‌ ರಾಜ್‌ ನಿರ್ದೇಶನದ, ಶಶಿಧರ ಕೆ ಎಂ ನಿರ್ಮಾಣದ ‘ವೀರಂ’ ಚಿತ್ರ ಏ.7ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಿದ್ದಿ ಪ್ರೀ-ರಿಲೀಸ್‌ ಕಾರ್ಯಕ್ರಮದಲ್ಲಿ ನಾಯಕ ನಟ ಪ್ರಜ್ವಲ್‌ ದೇವರಾಜ್‌, ‘ವೀರಂ ಸಿನಿಮಾ ನೋಡಿ ನನ್ನಮ್ಮ ಕಣ್ಣೀರು ಹಾಕಿದರು. 

26

 ಹಾಗಾಗಿ ಈ ಸಿನಿಮಾ ಎಲ್ಲಾ ಅಮ್ಮಂದಿರಿಗೂ ಇಷ್ಟವಾಗುತ್ತದೆ ಎಂದು ನಂಬಿದ್ದೇನೆ. ಟ್ರೇಲರ್‌ ನೋಡಿದಾಗ ಹೊಡಿಬಡಿ ಸಿನಿಮಾ ಅನ್ನಿಸುತ್ತದೆ. ಆದರೆ ಭಾವನೆಗಳಿಗೆ ಮಹತ್ವ ಕೊಡುವ ಸಿನಿಮಾ ಇದು. ಕುಟುಂಬಕ್ಕೆ ತೊಂದರೆ ಬಂದಾಗ ಎಲ್ಲರೂ ಹೇಗೆ ಜೊತೆ ನಿಲ್ಲುತ್ತಾರೆ ಎಂಬ ಸಿನಿಮಾ’ ಎಂದರು.

36

ಪ್ರಜ್ವಲ್‌ ಅಣ್ಣನ ಪಾತ್ರ ಮಾಡಿರುವ ಶ್ರೀನಗರ ಕಿಟ್ಟಿ, ‘ಮೂರೂವರೆ ವರ್ಷಗಳ ಜರ್ನಿ ಈ ಸಿನಿಮಾ. ಪ್ರೀತಿಯಿಂದ ಮಾಡಿರುವ ಸಿನೆಮಾ’ ಎಂದರು. 

46

ಖಳ ಪಾತ್ರಧಾರಿ ಶಿಷ್ಯ ದೀಪಕ್‌, ‘ಭಾವನಾತ್ಮಕವಾಗಿ ತುಂಬಾ ಹತ್ತಿರಾಗಿರುವ ಸಿನಿಮಾ’ ಎಂದರು. ನಿರ್ಮಾಪಕರ ಪತ್ನಿ ದಿವ್ಯಾ, ‘ಕಷ್ಟಪಟ್ಟು, ಇಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಸಿನಿಮಾ ಚೆನ್ನಾಗಿರಬೇಕು ಎಂಬ ಉದ್ದೇಶದಿಂದ ಸಂಪೂರ್ಣ ಪ್ರಯತ್ನ ಹಾಕಿದ್ದೇವೆ’ ಎಂದರು.

56

ನಾಯಕ ನಟಿ ರಚಿತಾ ರಾಮ್‌, ರಘು ಸಿಂಗಂ, ಕರಣ್‌ ಇದ್ದರು. ಚಿತ್ರಕ್ಕೆ ಯು/ಎ ಸೆನ್ಸಾರ್‌ ಸರ್ಟಿಫಿಕೇಟ್‌ ದೊರಕಿದೆ.ಲವಿತ್​ ಕ್ಯಾಮೆರಾ ಕೈಚಳಕ, ಅನೂಪ್​ ಸಿಳೀನ್​ ಸಂಗೀತ ಸಂಯೋಜನೆ, ರವಿಚಂದ್ರನ್​ ಸಂಕಲನ, ಡಿಫರೆಂಡ್​ ಡ್ಯಾನಿ ಸಾಹಸ ನಿರ್ದೇಶನ 'ವೀರಂ' ಚಿತ್ರಕ್ಕಿದೆ.

66

ಈ ಹಿಂದೆ 'ಡಾಟರ್​ ಆಫ್​ ಪಾರ್ವತಮ್ಮ' ಚಿತ್ರವನ್ನು ನಿರ್ಮಾಣ ಮಾಡಿದ್ದ ಶಶಿಧರ್​ ಕೆ.ಎಂ. ಅವರು 'ವೀರಂ' ಚಿತ್ರವನ್ನು ಪಕ್ಕಾ ಮಾಸ್​ ಶೈಲಿಯಲ್ಲಿ ನಿರ್ಮಿಸುತ್ತಿದ್ದು, ಚಿತ್ರವನ್ನು ನೋಡಲು ಪ್ರಜ್ವಲ್​ ದೇವರಾಜ್​ ಅಭಿಮಾನಿಗಳು​ ಕಾಯುತ್ತಿದ್ದಾರೆ. ಮಾತ್ರವಲ್ಲದೇ ಈ ಚಿತ್ರವು 2023ರಲ್ಲಿ ಬಿಡುಗಡೆಯಾಗುತ್ತಿರುವ ಪ್ರಜ್ವಲ್ ಅಭಿನಯದ ಮೊದಲ ಚಿತ್ರವಾಗಿದೆ.  

Read more Photos on
click me!

Recommended Stories