ವಯೋ ಸಹಜ ಕಾಯಿಲೆಯಿಂದ ಪೊಲೀಸ್ ಡಾಗ್ ಭಾನುವಾರ ಬೆಳಗ್ಗೆ ಮೃತಪಟ್ಟಿದೆ.
ಈ ಶ್ವಾನರಾಷ್ಟ್ರಪತಿ, ಪ್ರಧಾನಿ, ಸಿಎಂ ಭದ್ರತೆಯಲ್ಲಿ ಭಾಗಿಯಾಗಿತ್ತು.
ವಯೋ ಸಹಜ ಕಾಯಿಲೆಯಿಂದ ಪೊಲೀಸ್ ಡಾಗ್ ಹನಿಮೃತಪಟ್ಟಿದೆ.
12 ವರ್ಷದ ಪೊಲೀಸ್ ಶ್ವಾನ ಸಾವನ್ನಪ್ಪಿದ ಸಂದರ್ಭ ಪೊಲೀಸ್ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.
ಸ್ಫೋಟಕ ಪ್ರಕರಣವನ್ನು ಪತ್ತೆ ಹಚ್ಚುತ್ತಿದ್ದ ಹನಿ ಪರಿಣಿತವಾಗಿತ್ತು.
ರಾಷ್ಟ್ರಪತಿ, ಪ್ರಧಾನಿ, ಸಿಎಂ ಭದ್ರತೆಯಲ್ಲಿಯೂ ಹನಿ ಭಾಗಿಯಾಗಿತ್ತು
ರಾಜ್ಯ ಮಟ್ಟದ ಶ್ವಾನ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಹನಿಕಳೆದ ಒಂದು ವಾರದಿಂದ ಅಹಾರ ಹಾಗೂ ನೀರು ಬಿಟ್ಟಿತ್ತು.
ಸರ್ಕಾರಿ ಸಕಲ ಗೌರವದೊಂದಿಗೆ ಅಂತ್ಯ ಸಂಸ್ಕಾರ ನೆರವೇರಿದ್ದು,ನಗರದ ರಾಮನಹಳ್ಳಿ ಪೋಲಿಸ್ ಡಿಆರ್ ಪೊಲೀಸ್ ಸ್ಟೇಷನ್ ನಲ್ಲಿ ಸಿಬ್ಬಂದಿ ಅಂತಿಮ ದರ್ಶನ ಪಡೆದಿದ್ದಾರೆ. ಶ್ವಾನದ ಅಂತ್ಯ ಸಂಸ್ಕಾರದಲ್ಲಿ ಎಸ್.ಪಿ.ಹರೀಶ್ ಪಾಂಡೆ. ಹಾಗೂ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು.