ಮೈಸೂರು ಅರಮನೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ಕುಮಾರಿ ದಂಪತಿಗೆ ಎರಡನೇ ಮಗು ಜನಿಸಿದೆ. ದತ್ತು ಪಡೆದ ಯದುವೀರ್ ಅವರಿಗೆ ಜೈವಿಕ ಮಗುವಿನ ಜನನ ಮಹತ್ವದ ಘಟನೆಯಾಗಿದೆ. ತ್ರಿಷಿಕಾ ಕುಮಾರಿ ಅವರ ಸರಳತೆ ಮತ್ತೊಮ್ಮೆ ಸುದ್ದಿಯಲ್ಲಿದೆ.
ಭಾರತದ ಪ್ರಸಿದ್ಧ ರಾಜಮನೆತನದಲ್ಲಿ ಒಂದು ಮೈಸೂರಿನ ಒಡೆಯರ್ ರಾಜವಂಶ. ಈ ಕುಟುಂಬದ ಪ್ರಸ್ತುತ ಮುಖ್ಯಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಅವರು ಮಾರ್ಚ್ 24, 1992 ರಂದು ಜನಿಸಿದರು. ಅವರು ವಂಶಾವಳಿಯ 27 ನೇ ರಾಜ. 2016 ರಲ್ಲಿ, ಅವರು ರಾಜಕುಮಾರಿ ತ್ರಿಷಿಕಾ ಕುಮಾರಿಯನ್ನು ವಿವಾಹವಾಗಿದ್ದು, 2017ರಲ್ಲಿ ಮಗ ಆದ್ಯವೀರ್ ನರಸಿಂಹರಾಜ ಒಡೆಯರ್ ಅವರನ್ನು ಸ್ವಾಗತಿಸಿದರು. ಅವರಿಗೆ ಕಳೆದ ಮಾರ್ಚ್ನಲ್ಲಿ ಎರಡನೆಯ ಮಗು ಕೂಡ ಆಗಿದೆ.
26
ದತ್ತು ತೆಗೆದುಕೊಳ್ಳುವ ಪ್ರಕ್ರಿಯೆ
ಇದಕ್ಕೂ ಮೊದಲು, ಒಡೆಯರ್ ರಾಜವಂಶವು ಸಂಬಂಧಿಕರಿಂದ ಉತ್ತರಾಧಿಕಾರಿಗಳನ್ನು ದತ್ತು ತೆಗೆದುಕೊಳ್ಳುವ ಸಂಪ್ರದಾಯವನ್ನು ಅನುಸರಿಸಿತು, ಏಕೆಂದರೆ ಶತಮಾನಗಳಿಂದ ಯಾವುದೇ ಜೈವಿಕ ಮಗು ಜನಿಸಿಲ್ಲ. ಆದ್ದರಿಂದ, ಏಳು ವರ್ಷಗಳ ಹಿಂದೆ ತ್ರಿಷಿಕಾ ತಾಯಿಯಾದಾಗ, ಅದು ಒಂದು ಮಹತ್ವದ ಸಂದರ್ಭವಾಗಿದೆ. ಅಷ್ಟಕ್ಕೂ ಅತ್ಯಂತ simplicityಗೆ ಹೆಸರಾದವರು ತ್ರಿಷಿಕಾ ಕುಮಾರಿ. ರಾಜಮನೆತನದ ಸ್ಥಾನಮಾನದ ಹೊರತಾಗಿಯೂ, ತ್ರಿಷಿಕಾ ಕುಮಾರಿ ಸರಳ ಶೈಲಿಗೆ ಹೆಸರುವಾಸಿಯಾಗಿದ್ದಾರೆ.
36
ತ್ರಿಷಿಕಾ ಕುಮಾರಿ ಹಿನ್ನೆಲೆ
ತ್ರಿಷಿಕಾ ಕುಮಾರಿ ಸಿಂಗ್, ರಾಜಸ್ಥಾನದ ಡುಂಗರ್‌ಪುರ ರಾಜಮನೆತನದ ಹರ್ಷವರ್ಧನ್ ಸಿಂಗ್ ಮತ್ತು ಮಹೇಶಿ ಕುಮಾರಿ ಅವರ ಪುತ್ರಿ. ಸದಾ ಸಾಂಪ್ರದಾಯಿಕ ಭಾರತೀಯ ಉಡುಪಿನಲ್ಲಿ ಕಾಣಿಸಿಕೊಂಡರೂ ಅಥವಾ ಕ್ಯಾಶುಯಲ್ ಉಡುಗೆಯಲ್ಲಿ ಕಾಣಿಸಿಕೊಂಡರೂ ಸಹ ಅವರು ಎಲ್ಲಿಯೂ ಎಲ್ಲೆಯನ್ನೂ ಮೀರಿದವರಲ್ಲ. ಸದಾ ನಗುಮೊಗದಿಂದಲೇ, ಸಾಮಾನ್ಯ ಜನರಲ್ಲಿ ಸಾಮಾನ್ಯರಾಗಿ ಅವರು ವರ್ತಿಸುತ್ತಾರೆ. ಮಹಾರಾಣಿ ಎನ್ನುವ ಅಹಂಕಾರದ ಛಾಯೆ ಅವರಲ್ಲಿ ಎಂದಿಗೂ ಮೂಡದೇ ಇರುವುದರಿಂದಲೇ ಅವರು ಜನರಿಗೆ ಕೂಡ ತುಂಬಾ ಹತ್ತಿರವಾದವರು.
ಅವರ ಈ ಸರಳತೆಗೆ ಸಾಕ್ಷಿಯಾಗಿ ಈಗ ಇನ್ನೊಂದು ಪೋಸ್ಟ್ ವೈರಲ್ ಆಗಿದೆ. ತಮ್ಮ ಸಹೋದರನ ಮಗುವಿನ ಹುಟ್ಟಿದ ಹಬ್ಬಕ್ಕೆ ತ್ರಿಷಿಕಾ ಕುಮಾರಿ ವಿಷ್ ಮಾಡಿದ್ದಾರೆ. ಸದಾ ಕ್ಯೂಟ್ ಕಂದಮ್ಮ ಎಂದು ಅವರು ಹೇಳಿದ್ದಾರೆ. ನಿನ್ನನ್ನು ರಕ್ಷಿಸಲು ಸದಾ ಈ ಚಿಕ್ಕಮ್ಮ ನಿನ್ನ ಬಳಿ ಇರುತ್ತಾಳೆ ಎಂದು ಬರೆದುಕೊಂಡಿದ್ದಾರೆ.
56
ದತ್ತು ಪಡೆದ ಬಗೆ
ಬೆಟ್ಟದ ಕೋಟೆ ಕುಟುಂಬದ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ (YKC) ಒಡೆಯರ್ ಅವರನ್ನು ಫೆಬ್ರವರಿ 23, 2015 ರಂದು ಪ್ರಮೋದಾ ದೇವಿ ಒಡೆಯರ್ ದತ್ತು ಪಡೆದರು. ಡಿಸೆಂಬರ್ 10, 2013 ರಂದು ಅವರ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನದ ನಂತರ ದತ್ತು ಸ್ವೀಕಾರ ನಡೆದಿತ್ತು.
66
ಪಟ್ಟಾಭಿಷೇಕ
ಮೇ 28, 2015 ರಂದು ಯದು ರಾಜವಂಶದ 27 ನೇ ಮಹಾರಾಜರಾಗಿ ಅಧಿಕೃತವಾಗಿ ಪಟ್ಟಾಭಿಷೇಕ ಮಾಡಲಾಯಿತು. ಜೂನ್ 27, 2016 ರಂದು, ಯದುವೀರ್ ರಾಜ್‌ಕೋಟ್‌ನ ರಾಜಮನೆತನದ ತ್ರಿಷಿಕಾ ದೇವಿಯನ್ನು ವಿವಾಹವಾದರು. ಈ ದಂಪತಿಗಳು ಡಿಸೆಂಬರ್ 6, 2017 ರಂದು ತಮ್ಮ ಮೊದಲ ಮಗು ಆದ್ಯವೀರ್ ನರಸಿಂಹದತ್ತ ಒಡೆಯರ್ ಅವರನ್ನು ಸ್ವಾಗತಿಸಿದರು. ಅವರು 2024 ರಲ್ಲಿ ಮೈಸೂರಿನ ಯಾದವಗಿರಿಯ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ ಎರಡನೇ ಮಗುವಿಗೆ - ಗಂಡು ಮಗುವಿಗೆ ಜನ್ಮ ನೀಡಿದರು., ಅದು ಆಯುಧ ಪೂಜೆಯ ದಿನವೂ ಆಗಿದ್ದುದು ವಿಶೇಷ.