ಮಂಡ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ: ಗಂಡ ಎಸ್ಕೇಪ್

Published : Sep 14, 2025, 02:34 PM IST

ಮಂಡ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾಗಿದ್ದು, ಕೊಲೆಯೆಂದು ಪೋಷಕರು ಆರೋಪಿಸಿದ್ದಾರೆ. ಗಂಡ ಮತ್ತು ಕುಟುಂಬಸ್ಥರು ನಾಪತ್ತೆಯಾಗಿದ್ದು, ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.

PREV
15
ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ

ಮಂಡ್ಯ: ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿದ್ದು, ಇದು ಕೊ*ಲೆ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ. ಮಹಿಳೆ ಸಾವಿನ ಬೆನ್ನಲ್ಲೇ ಆಕೆಯ ಗಂಡ ಮತ್ತು ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ. ಮಹಿಳೆ ಗಂಡನ ಮುಂದೆ ಶವ ಇರಿಸಿ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.

25
26 ವರ್ಷದ ಹರ್ಷಿತಾ ಮೃತ ಮಹಿಳೆ

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯಲ್ಲಿ ಈ ಘಟನೆ ನಡೆದಿದೆ. 26 ವರ್ಷದ ಹರ್ಷಿತಾ ಮೃತ ಮಹಿಳೆ. ಎಂಟು ವರ್ಷಗಳ ಹಿಂದೆ ನಂದೀಶ್ ಎಂಬಾತನೊಂದಿಗೆ ಹರ್ಷಿತಾ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದು, ಆದ್ರೆ ಕಳೆದ ಎರಡು ವರ್ಷಗಳಿಂದ ಹರ್ಷಿತಾಗೆ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪಗಳು ಕೇಳಿ ಬಂದಿವೆ.

35
ಮಗಳಿಗೆ ಕಿರುಕುಳ

ಮದುವೆ ಬಳಿಕ ಮಂಡ್ಯ ತಾಲೂಕಿನ ಮಲ್ಲಯ್ಯನ ದೊಡ್ಡಿ ಗ್ರಾಮದಲ್ಲಿ ನಂದೀಶ್ ಮತ್ತು ಹರ್ಷಿತಾ ವಾಸವಾಗಿದ್ದರು. ಇದೇ ಮನೆಯಲ್ಲಿ ಹರ್ಷಿತಾ ಶವ ಪತ್ತೆಯಾಗಿದೆ. ಗಂಡ ಹಾಗು ಆತನ ಮನೆಯವರು ತಮ್ಮ ಮಗಳನ್ನು ಕೊಂದು ನೇಣು ಹಾಕಿರುದ್ದಾರೆ ಹರ್ಷಿತಾ ಪೋಷಕರು ದೂರು ದಾಖಲಿಸಿದ್ದಾರೆ. ಎರಡ್ಮೂರು ವರ್ಷಗಳಿಂದ ಮಗಳಿಗೆ ಕಿರುಕುಳ ಕೊಡಲಾಗುತ್ತಿತ್ತು. ಈ ಸಂಬಂಧ ರಾಜೀ ಪಂಚಾಯ್ತಿ ನಡೆಸಲಾಗಿತ್ತು ಎಂದು ಹರ್ಷಿತಾ ಪೋಷಕರು ಹೇಳಿದ್ದಾರೆ.

ಇದನ್ನೂ ಓದಿ: ಕೋಳಿ ಸಾರಿಗಾಗಿ ಜಗಳ: ಪತ್ನಿ ಶವ ನದಿಗೆ ಎಸೆದು ಪೊಲೀಸರ ದಿಕ್ಕು ತಪ್ಪಿಸಲು ಹೋಗಿ ತಗ್ಲಾಕೊಂಡ ಗಂಡ

45
ಪ್ರತಿಭಟನೆ

ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ಆದ್ರೆ ಶವವನ್ನು ನಂದೀಶ್ ಮನೆ ಮುಂದೆ ಇರಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ನಂದೀಶ್ ಮತ್ತು ಆತನ ಕುಟುಂಬಸ್ಥರು ಇಲ್ಲಿಗೆ ಬರಬೇಕು. ಬರದಿದ್ರೆ ಇಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಹರ್ಷಿತಾ ಪೋಷಕರು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಯುವಕನೊಂದಿಗೆ ಸಂಬಂಧ; ಪತ್ನಿಯ ಕತ್ತು ಸೀಳಿ ಕೊಂದ ಗಂಡ ಅರೆಸ್ಟ್

55
ಪೋಷಕರ ಮನವೊಲಿಸುವ ಕಾರ್ಯ

ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಪೋಷಕರ ಮನವೊಲಿಸುವ ಕಾರ್ಯವನ್ನು ಗ್ರಾಮದ ಹಿರಿಯರು ಮಾಡುತ್ತಿದ್ದಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ಪೊಲೀಸರು ಸಹ ಆಗಮಿಸಿದ್ದಾರೆ.

ಇದನ್ನೂ ಓದಿ: ಅವಾಚ್ಯ ನಿಂದನೆ ಪ್ರಶ್ನಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ; 3 ದಿನದ ಬಳಿಕ ಸಾವು, ಆರೋಪಿ ಸಲ್ನಾನ್‌ ವಿರುದ್ಧ ಎಫ್‌ಐಆರ್

Read more Photos on
click me!

Recommended Stories