ಬೆಂಗಳೂರು ಬಿಟ್ರೆ ಹೂಡಿಕೆಗೆ ರಾಜ್ಯದ ಈ ಜಿಲ್ಲೆಯೇ ಈಗ ನಂಬರ್ 1! ಇದರ ಅದ್ಭುತ ಬೆಳವಣಿಗೆ ಹಿಂದಿರುವ ಅಸಲಿ ಕಾರಣಗಳಿವು!

Published : Jun 30, 2026, 03:18 PM IST

Most livable city Karnataka: ಬೆಂಗಳೂರು ಬಿಟ್ಟರೆ ಇಂದು ರಾಜ್ಯದ ಈ ಜಿಲ್ಲೆ ಕರ್ನಾಟಕದ ಎರಡನೇ ಪ್ರಮುಖ ವಾಸಯೋಗ್ಯ ಮತ್ತು ಶ್ರೀಮಂತ ನಗರವಾಗಿ ಬೆಳೆಯುತ್ತಿದೆ. ಇಲ್ಲಿನ ಐಟಿ ಬೆಳವಣಿಗೆ ಮತ್ತು ರಿಯಲ್ ಎಸ್ಟೇಟ್ ಹೂಡಿಕೆಯ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.  

PREV
14
ಬೆಂಗಳೂರನ್ನು ಮೀರಿಸುತ್ತದೆ

ಬೆಂಗಳೂರನ್ನು ಮೀರಿಸುತ್ತದೆ
ಕರ್ನಾಟಕದ ಅತ್ಯಂತ ಅಭಿವೃದ್ಧಿ ಹೊಂದಿದ ನಗರ ಯಾವುದು ಅಂದ ಕೂಡಲೇ ಎಲ್ಲರಿಗೂ ನೆನಪಾಗುವುದು ಬೆಂಗಳೂರು. ಆದರೆ ಈಗ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬೆಂಗಳೂರನ್ನು ಮೀರಿಸುವ ವೇಗದಲ್ಲಿ ಬೆಳೆಯುತ್ತಿದೆ. ಹೂಡಿಕೆ, ಪರಿಸರ ಸ್ನೇಹಿ ಜೀವನ ಮತ್ತು ಉದ್ಯೋಗದ ದೃಷ್ಟಿಯಿಂದ ಮಂಗಳೂರು ಇಂದು ದಕ್ಷಿಣ ಭಾರತದ ಅತ್ಯಂತ ವಾಸಯೋಗ್ಯ ನಗರವಾಗಿ ಹೊರಹೊಮ್ಮುತ್ತಿದೆ. ಇದಕ್ಕೆ ಪೂರಕವಾಗಿರುವ ಅಂಶಗಳು ಮತ್ತು ಮಂಗಳೂರಿನ ಹೊಸ ಮುಖದ ಕುರಿತಾದ ವಿಶೇಷ ವರದಿ ಇಲ್ಲಿದೆ.

24
ಕರ್ನಾಟಕದ ಅತ್ಯಂತ ಶ್ರೀಮಂತ ಜಿಲ್ಲೆ

ಕರ್ನಾಟಕದ ಅತ್ಯಂತ ಶ್ರೀಮಂತ ಜಿಲ್ಲೆ
ಭಾರತದ ಪ್ರಮುಖ ನಗರಗಳ ಪಟ್ಟಿಯಲ್ಲಿ ಮಂಗಳೂರು ಈಗ ಗಟ್ಟಿಯಾಗಿ ನೆಲೆನಿಂತಿದೆ. 2025ರ ಅಂಕಿಅಂಶಗಳ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯು ಕರ್ನಾಟಕದ ಅತ್ಯಂತ ಶ್ರೀಮಂತ ಜಿಲ್ಲೆಗಳಲ್ಲಿ ಒಂದಾಗಿದ್ದು, ತಲಾ ಜಿಡಿಪಿ (Per Capita GDP) 6.69 ಲಕ್ಷ ರೂಪಾಯಿಗಳಷ್ಟಿದೆ. ಇದು ಬೆಂಗಳೂರು ಬಿಟ್ಟರೆ ರಾಜ್ಯದಲ್ಲೇ ಗರಿಷ್ಠ ಮಟ್ಟದ ಆದಾಯವಾಗಿದೆ. ಮಂಗಳೂರಿನ ಈ ಆರ್ಥಿಕ ಬೆಳವಣಿಗೆಗೆ ವ್ಯಾಪಾರ, ಕೈಗಾರಿಕೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ದೊಡ್ಡ ಶಕ್ತಿಯಾಗಿ ನಿಂತಿವೆ.

34
ಐಟಿ ಮತ್ತು ಕೈಗಾರಿಕಾ ಕ್ರಾಂತಿ

ಐಟಿ ಮತ್ತು ಕೈಗಾರಿಕಾ ಕ್ರಾಂತಿ
ಮಂಗಳೂರಿನ ನವ ಮಂಗಳೂರು ಬಂದರು (NMPT) ದೇಶದ ಪ್ರಮುಖ ಕಂಟೈನರ್ ಟರ್ಮಿನಲ್ ಆಗಿದ್ದು, ಭಾರತದ ಕಾಫಿ ರಫ್ತಿನಲ್ಲಿ ಬಹುದೊಡ್ಡ ಪಾಲನ್ನು ಹೊಂದಿದೆ. ಇದಲ್ಲದೆ, ಐಟಿ ಕ್ಷೇತ್ರದಲ್ಲಿ ಮಂಗಳೂರು ಅಭೂತಪೂರ್ವ ವೇಗವನ್ನು ಪಡೆದುಕೊಂಡಿದೆ. 2018 ರಲ್ಲಿ ಕೇವಲ 300 ಕೋಟಿ ರೂ. ಇದ್ದ ಐಟಿ ಆದಾಯವು 2024 ರ ವೇಳೆಗೆ 2,500 ಕೋಟಿ ರೂ. ದಾಟಿದೆ. ಇನ್ಫೋಸಿಸ್, ಕಾಗ್ನಿಸೆಂಟ್ ಮತ್ತು ಎಂಫಾಸಿಸ್‌ನಂತಹ ದೈತ್ಯ ಕಂಪನಿಗಳು ಇಲ್ಲಿ ನೆಲೆಯೂರಿವೆ. ಬೆಂಗಳೂರಿಗಿಂತ ಶೇ. 25-30ರಷ್ಟು ಕಡಿಮೆ ಕಾರ್ಯಾಚರಣಾ ವೆಚ್ಚ ಇರುವುದು ಉದ್ಯಮಿಗಳನ್ನು ಇಲ್ಲಿಗೆ ಸೆಳೆಯುತ್ತಿದೆ.

44
ಎನ್‌ಆರ್‌ಐ ನಂಟು ಮತ್ತು ರಿಯಲ್ ಎಸ್ಟೇಟ್

ಎನ್‌ಆರ್‌ಐ ನಂಟು ಮತ್ತು ರಿಯಲ್ ಎಸ್ಟೇಟ್
ಮಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆ ಅತ್ಯಂತ ಸ್ಥಿರವಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ದಕ್ಷಿಣ ಕನ್ನಡದ ಜನರ ದೊಡ್ಡ ಬಳಗವು ಇಲ್ಲಿನ ಹೂಡಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ವಾರ್ಷಿಕವಾಗಿ ಇಲ್ಲಿನ ವಸತಿ ಪ್ರದೇಶಗಳ ಮೌಲ್ಯ ಶೇ. 8 ರಿಂದ 12 ರಷ್ಟು ಏರಿಕೆಯಾಗುತ್ತಿದೆ. ದಟ್ಟಣೆಯಿಲ್ಲದ ರಸ್ತೆಗಳು, ಅತ್ಯುತ್ತಮ ಆರೋಗ್ಯ ವ್ಯವಸ್ಥೆ ಮಂಗಳೂರನ್ನು ವಾಸಯೋಗ್ಯ ನಗರವನ್ನಾಗಿಸಿವೆ. ಅಂದಹಾಗೆ ಮುಂಬರುವ ದಿನಗಳಲ್ಲಿ ಮಂಗಳೂರು ಕರ್ನಾಟಕದ ಮುಂದಿನ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ.

Read more Photos on
click me!

Recommended Stories