Mandya: 40 ವರ್ಷಗಳ ಬಳಿಕ ನಾಗಮಂಗಲದಲ್ಲಿ ಹಿಂದು-ಮುಸ್ಲಿಂ ಗಲಾಟೆ, ಸಿಕ್ಕ-ಸಿಕ್ಕ ಅಂಗಡಿಗಳಿಗೆ ಬೆಂಕಿ!

First Published | Sep 12, 2024, 8:54 AM IST

ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಹಿಂದು-ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಘಟನೆಯಲ್ಲಿ ಸಾಕಷ್ಟು ಜನರನ್ನು ವಶಕ್ಕೆ ಪಡೆಯಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಶಾಂತಿ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.

ದರ್ಗಾದ ಎದುರುಗಡೆ ಮೆರವಣಿಗೆ ಸಾಗುವಾಗ ಕಲ್ಲು ತೂರಾಟ ನಡೆದಿದ್ದು, ಅದರ ಬೆನ್ನಲ್ಲಿಯೇ ಕೋಮು ಕಿಡಿಗೇಡಿಗೇಡಿಗಳು ಸಿಕ್ಕ ಸಿಕ್ಕ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ.  ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ಶುರುವಾಗಿದೆ.
 

ಅಂಗಡಿ‌ ಮುಗ್ಗಟ್ಟುಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಲಾಗಿದ್ದು, ಗಲಾಟೆಯಲ್ಲಿ ಮುಸ್ಲಿಂ ಅಂಗಡಿಗಳು ಸುಟ್ಟು ಕರಕಲಾಗಿವೆ. ಮೈಸೂರು - ಬೀದರ್ ರಸ್ತೆಯಲ್ಲಿರಯವ ಅಂಗಡಿಗಳಿಗೆ ಬೆಂಕಿ ಹಾಕಲಾಗಿದೆ. ಸುಮಾರು 4 ಟೈರ್  ಅಂಗಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
 

Tap to resize

ಈ ಬಗ್ಗೆ ಮಾತನಾಡಿರುವ ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲೆಯ ಉಸ್ತುವಾರಿ ಚಲುವರಾಯ ಸ್ವಾಮಿ, ನಾನು ಹೊರಗೆ ಹೋಗಿದ್ದೆ. ಊರಿನಿಂದ ಫೋನ್ ಬಂತು ಈ ರೀತಿ ಘಟನೆಯಾಗಿದೆ ಅಂತ ಕೂಡಲೇ ನಾನು ಎಡಿಜಿಪಿ ಎಸ್ಪಿಗೆ ಕರೆ ಮಾಡಿದೆ ಮಾಹಿತಿ ಪಡೆದುಕೊಂಡೆ ಎಂದಿದ್ದಾರೆ.
 

ಮುಸ್ಲಿಂ ಹಿಂದೂ ನಡುವೆ ಘರ್ಷಣೆಯಾಗಿದೆ. ಎರಡು ಸಮುದಾಯದ ನಡುವೆ ಗಲಾಟೆ ಆಗುತ್ತಿತ್ತು. ಪೊಲೀಸರು ಕನ್ವಿನ್ಸ್ ಮಾಡುವ ಪ್ರಯತ್ನ ಮಾಡಿ ಯಶಸ್ವಿಯಾಗಿದೆ. ಯಾರು ತಪ್ಪಿತಸ್ಥರಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ದುಡುಕೋದು ಬೇಡ.. ದೇವರ ಕೆಲಸ ಈ ರೀತಿಯಾಗಿ ಕಮ್ಯೂನಲ್ ಗೆ ತಿರುಗುವುದು ಬೇಡ ಎಂದು ಹೇಳಿದ್ದಾರೆ.
 

ತಡ ರಾತ್ರಿಯೇ ಗಣೇಶ ವಿಸರ್ಜನೆ ಮಾಡಿದ್ದಾರೆ. ಶಾಂತಿಗೊಳಿಸುವ ಪ್ರಯತ್ನವೂ ಆಗಿದೆ ಸ್ಥಳದಲ್ಲಿ ಒಂದೆರಡು ಅಂಗಡಿಗೆ ತೊಂದರೆಯಾಗಿದೆ. ಗೃಹ ಮಂತ್ರಿಗಳಿಗೆ ಮಾಹಿತಿ ಕೊಟ್ಟಿದ್ದೇವೆ. ಶಾಂತಿ ಕಾಪಾಡುವ ಕೆಲಸ ಎಲ್ಲರದ್ದೂ ಆಗಬೇಕಿದೆ ಎಂದು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಸಾಕಷ್ಟು ಜನನ ವಶಕ್ಕೆ ಪಡೆಯಲಾಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಗಲಿ, ಯಾರೇ ಆಗಲಿ ಕಾನೂನು ಬದ್ಧವಾಗಿ ಕ್ರಮ ಆಗಲಿದೆ. ನಾನು ಮಾಹಿತಿ ಮಾತ್ರ ಪಡೆದುಕೊಂಡಿದ್ದೇನೆ. ಸ್ಥಳಕ್ಕೆ ಹೋಗಿ ಏನಾಗಿದೆ ಅಂದು ತಿಳಿದುಕೊಂಡಿಲ್ಲ ಎಂದಿದ್ದಾರೆ.
 

ಈಗ ಸ್ಥಳಕ್ಕೆ ಹೋಗುತ್ತೇನೆ ನಿಮ್ಮ ಮಾಧ್ಯಮಗಳು ಅಲ್ಲಿವೆ ಅಲ್ಲಿ ಮಾತನಾಡುತ್ತೇನೆ ಎಂದು ಕೃಷಿ ಸಚಿವ ಹಾಗೂ ನಾಗಮಂಗಲದ ಶಾಸಕ ಚಲುವರಾಯಸ್ವಾಮಿ ಹೇಳಿದ್ದಾರೆ.

ಕುಮಾರ ಸ್ವಾಮಿ ಹೇಳಿಕೆಗೆ ಚೆಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ನಾನು ಮಾತನಾಡಿದ್ರೆ ತಪ್ಪಾಗತ್ತೆ ಅವರು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದಾರೆ ನಾನು ರಾಜ್ಯ ಸರ್ಕಾರದಲ್ಲಿ ಸಚಿವನಾಗಿದ್ದೇನೆ.
 

ಇದು ತಿಳಿಯಾಗಲು ಸಹಕಾರ ಕೊಡುತ್ತಾರೆ ಅಂದುಕೊಳ್ಳುತ್ತೇನೆ. ಶಾಂತಿ ಕಾಪಾಡಲು ಸಕಹಾರ ಕೊಡ್ತಾರೆ ಅಂದುಕೊಳ್ಳುತ್ತೇನೆ. ಕೊಡದೆ ಇದ್ದರೆ ಅವರಿಗೆ ಒಳ್ಳೆಯದಾಗಲಿ ಎಂದಿದ್ದಾರೆ.


ಅವರು ರಾಜಕೀಯವಾಗೇ ಮಾತನಾಡ್ತಾರೆ ಅಂದ್ರೆ ನಾನು ಮಾತನಾಡುವುದಿಲ್ಲ. ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ ನಾನು 15 ದಿನದಿಂದ‌ ರಾಜ್ಯದಲ್ಲಿ ಇರಲಿಲ್ಲ ನಾನು ಬೇರೆ ಕಡೆ ಹೋಗಿದ್ದೆ ಎಂದು ಹೇಳಿದ್ದಾರೆ.

ನಾಗಮಂಗಲ ಹಿಂದೆಯೂ ಶಾಂತವಾಗಿದೆ ಮುಂದೆಯೂ ಅದೇ ರೀತಿ ಇರಲಿದೆ. ಇಂತಹ ಸಂಧರ್ಭದಲ್ಲಿ ಸಮುದಾಯವನ್ನ ವಿಂಗಡಿಸುವುದು ಸೂಕ್ತವಲ್ಲ. ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮ ಆಗಲಿದೆ ಎಂದಿದ್ದಾರೆ.
 

ಸ್ಥಳದಲ್ಲಿ ಐಜಿ ಇದ್ದಾರೆ ಜಿಲ್ಲಾಧಿಕಾರಿ ಎಸ್ಪಿ ಎಲ್ಲರೂ ಇದ್ದಾರೆ. ಗಣಪತಿ ವಿಸರ್ಜನೆ ವೇಳೆ ಸಂಜೆ 5 ಗಂಟೆ ಹಾಗೂ ನಿಗದಿತ ಸಮಯದ ಒಳಗೆ ವಿಸರ್ಜನೆ ಮಾಡಬೇಕಿದೆ ಅಂತ ಹೇಳಿದ್ದೇವೆ. ಇಂತಹ ಸೂಕ್ಷ ಸ್ಥಳಗಳಲ್ಲಿ ಪೊಲೀಸರು ಎಚ್ಚರ ವಹಿಸಬೇಕಿತ್ತು. ನಾನು ನಾಗಮಂಗಲಕ್ಕೆ ತೆರಳಿ ಶಾಂತಿ ಸಭೆ ನಡೆಸಲಿದ್ದೇನೆ ಎಂದು ಚಲುವರಾಯ ಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ: Mandya: 'ಕಲ್ಲು' ಭಯೋತ್ಪಾದಕರಿಂದ ವಿಘ್ನ ವಿನಾಶಕನ ಮೇಲೆ ಕಲ್ಲು ತೂರಾಟ, ನಾಗಮಂಗಲ ಉದ್ವಿಗ್ನ!

ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಗಳು, ಸಾಕಷ್ಟು ಅನುಭವ ಇದೆ. ಅವರು ಇದನ್ನ ತಿಳಿ ಆಗಲು ಸಲಹೆ, ಸೂಚನೆ ಮಾರ್ಗದರ್ಶನ ಕೊಡ್ತಾರೆ ಅಂದುಕೊಂಡಿದ್ದೆ. ಅದನ್ನ ಮೀರಿ ಅವರು ರಾಜಕೀಯವಾಗಿ ಮಾತನಾಡ್ತಾರೆ ಅಂದರೆ ದೇವರು ಒಳ್ಳೆದು ಮಾಡಲಿ. ನಾನು‌ ಖಂಡಿತವಾಗಿ ರಾಜಕೀಯವಾಗಿ ಉತ್ತರ ನೀಡಲು ಹೋಗಲ್ಲ. ನಮ್ಮ ಸರ್ಕಾರದ ಮೊದಲ ಆದ್ಯತೆ ಸಾರ್ವಜನಿಕರ ರಕ್ಷಣೆ ಮಾಡುವುದು ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ: ಪೊಲೀಸ್ ಠಾಣೆ ಎದುರು ಗಣಪತಿ ಮೂರ್ತಿ ನಿಲ್ಲಿಸಿ ಹಿಂದೂಗಳ ಪ್ರತಿಭಟನೆ

ಶಾಂತಿ ಸ್ಥಾಪನೆಯ ಬಳಿಕವೇ ವಿರೋಧ ಪಕ್ಷದ ಪ್ರಚೋದನೆ ಅಥಾವ ಪ್ರಶ್ನೆಗೆ ಉತ್ತರ ಕೊಡುತ್ತೇನೆ. ಕುಮಾರಸ್ವಾಮಿ ಅಲ್ಲಿಯ ಸಂಸದರು ನಾನು ಅವರ ಜೊತೆಗೆ ಕೆಲಸ ಮಾಡುತ್ತಿದ್ದೇನೆ. ಅವರಿದ್ದಾಗ ಏನೇನು ಆಗಿದೆ ಅಂತ ಎಲ್ಲರಿಗೂ ಗೊತ್ತಿದೆ ಎಂದು ಟಾಂಗ್‌ ನೀಡಿದ್ದಾರೆ.

ಇದನ್ನೂ ಓದಿ: ನಾಗಮಂಗಲ: ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಪ್ರಕರಣ 144 ಸೆಕ್ಷನ್ ಜಾರಿ!

Latest Videos

click me!